ಈ ಎರಡು ಕೊರೊನಾ ಔಷಧ ಬೇಕಾ, ಆಧಾರ್ ಕಾರ್ಡ್ ರೆಡಿ ಇರ್ಲಿ

ನವದೆಹಲಿ, ಜುಲೈ 11: ಈ ಎರಡು ಕೊರೊನಾ ಔಷಧ ಪಡೆಯಲು ಆಧಾರ್ ಕಾರ್ಡ್ ನಂಬರ್ ಬೇಕೇಬೇಕು.

Recommended Video

      Who is Vikas Dubey ? | ಯಾರು ಈ ವಿಕಾಸ್ ದೂಬೆ ? | Oneindia Kannada

      ಒಂದೆಡೆ ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಆತಂಕದಲ್ಲಿ ಜನರಿದ್ದರೆ ಮತ್ತೊಂದೆಡೆ ಸ್ಯಾನಿಟೈಸರ್ ಮಾಸ್ಕ್, ಕೊರೊನಾ ಔಷಧವೆಲ್ಲವೂ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಹೀಗಾಗಿ ಮಹಾರಾಷ್ಟ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

      ದೂರು ಬಂದ ಹಿನ್ನೆಲೆಯಲ್ಲಿ ಎಫ್​ಡಿಎ ಸಚಿವ ರಾಜೇಂದ್ರ ಶಿಂಗೆ ಇತ್ತೀಚೆಗೆ ಮುಂಬೈನ ಅನೇಕ ಔಷಧ ಮಳಿಗೆಗಳಿಗೆ ಸರ್ಪ್ರೈಸ್​ ಭೇಟಿ ನೀಡಿ ಪರಿಶೀಲನೆಯನ್ನೂ ನಡೆಸಿದ್ದಾರೆ.

      Aadhaar Must For Buying Two Covid Drugs In Maharashtra

      ದೂರಿನ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶ್​ಮುಖ್​ ಇತ್ತೀಚೆಗೆ ಆಹಾರ ಮತ್ತು ಔಷಧ ಆಡಳಿತಾಧಿಕಾರಿಗಳು (ಎಫ್​ಡಿಎ) ಹಾಗೂ ಮುಂಬೈ ಪೊಲೀಸರ ಜತೆ ಸಭೆ ನಡೆಸಿ, ಕೊರೊನಾ ಸಂದರ್ಭದಲ್ಲಿ ರಾಜ್ಯದಲ್ಲಿ ಕೊರತೆಯಲ್ಲಿರುವ ರೆಮ್ಡೆಸಿವಿರ್ ಮತ್ತು ಟೋಸಿಲಿಜುಮಾಬ್ ಔಷಧದ ಬಗ್ಗೆ ಚರ್ಚೆ ನಡೆಸಿದ್ದಾರೆ.

      ಕೊರೊನಾ ಸೋಂಕಿತರು ಔಷಧಕೊಳ್ಳಲು ಖಡ್ಡಾಯವಾಗಿ ಆಧಾರ್​ ಕಾರ್ಡ್​ ಮಾಹಿತಿ, ವೈದ್ಯರು ನೀಡುವ ಔಷಧ ಚೀಟಿ ಹಾಗೂ ಕೊವಿಡ್ ವರದಿಯೊಂದಿಗೆ ಮೊಬೈಲ್​ ನಂಬರ್ ನೀಡಬೇಕು ಎಂದು ಹೇಳಿದೆ. ರೆಮ್ಡೆಸಿವಿರ್ ಆ್ಯಂಟಿ ವೈರಲ್ ಔಷಧಿಯಾಗಿದ್ದು, ಟೊಸಿಲಿಜುಮಾಬ್ ಉರಿಯೂತದ ಔಷಧವಾಗಿದೆ.

      ಈ ಎಲ್ಲಾ ಬೆಳವಣಿಗೆಯ ಬಳಿಕ ಕಾಳಸಂತೆಕೋರರಿಗೆ ಕಡಿವಾಣ ಹಾಕಲು ಹಾಗೂ ಜನರಿಗೆ ರೆಮ್ಡೆಸಿವಿರ್ ಮತ್ತು ಟೋಸಿಲಿಜುಮಾಬ್ ಔಷಧ ಸೂಕ್ತವಾಗಿ ಒದಗಿಸಲು ಸರ್ಕಾರ ತೀರ್ಮಾನಿಸಿದ್ದು, ಔಷಧ ಕೊಳ್ಳಲು ಜನರು ಆಧಾರ್​ ಸೇರಿದಂತೆ ಇನ್ನಿತರ ದಾಖಲೆ ನೀಡಬೇಕಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+