ಮುಂಬೈನ ಒಎನ್‌ಜಿಸಿ ಅನಿಲ ಸಂಸ್ಕರಣಾ ಘಟಕದಲ್ಲಿ ಅಗ್ನಿ ಅವಘಡ: 5ಸಾವು

ಮುಂಬೈ, ಸೆಪ್ಟೆಂಬರ್ 3: ಮುಂಬೈನ ಉರನ್ ಪ್ರದೇಶದಲ್ಲಿ ಒಎನ್‌ಜಿಸಿ(ಆಯಿಲ್ ಅಂಡ್ ನ್ಯಾಚ್ಯುರಲ್ ಪ್ಲ್ಯಾಂಟ್‌ ಗ್ಯಾಸ್ ಕಾರ್ಪೊರೇಷನ್)ಅನಿಲ ಸಂಸ್ಕರಣ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು 5 ಮಂದಿ ಮೃತಪಟ್ಟಿದ್ದಾರೆ.

ಬೆಳಗ್ಗೆ 7.20ರ ಸುಮಾರಿಗೆ ಅವಘಡ ಸಂಭವಿಸಿದ್ದು, ಬೆಂಕಿ ನಂದಿಸುವ ಕಾರ್ಯ ಪ್ರಗತಿಯಲ್ಲಿದೆ. ಯಾವುದೇ ದೊಡ್ಡ ಮಟ್ಟದಲ್ಲಿ ಆಗುವ ಅಪಾಯ ತಪ್ಪಿಸಲು ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಕಾರ್ಮಿಕರನ್ನೂ ಹೊರಗೆ ಕಳುಹಿಸಲಾಗಿದೆ.

A Fire Broke Out In Storm Water Drainage In Uran Oil And Gas Processing Plant

ಆಯಿಲ್ ಪ್ರೊಸೆಸಿಂಗ್ ಪ್ಲ್ಯಾಂಟ್‌ಒಳಗೆ ಇನ್ನೂ ಹಲವಾರು ಮಂದಿ ಸಿಲುಕಿರುವ ಶಂಕೆ ಇದೆ. ತೈಲ ಸಂಸ್ಕರಣೆ ಮೇಲೆ ಇದು ಪರಿಣಾಮವನ್ನು ಬೀರುವುದಿಲ್ಲ.

ಈಗ ಅನಿಲವನ್ನು ಗುಜರಾತಿನ ಹಜರಿಯಾ ಘಟಕದತ್ತ ತಿರುಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಸ್ಥಳೀಯ ಶಾಸಕ ಮನೋಹರ್ ಭೋಯಿರ್ ಮಾತನಾಡಿ, ಅನಿಲ ಸಂಸ್ಕರಣಾ ಘಟಕದಲ್ಲಿ ಬೆಳಗ್ಗೆ ಏಳು ಗಂಟೆ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದೆ.

ಉರಾನ್ ಪಾಲಿಕೆ ಹಾಗೂ ಜೆಎನ್ ಪಿಟಿಯಿಂದ ತಕ್ಷಣವೇ ನಾಲ್ಕು ಅಗ್ನಿಶಾಮಕ ವಾಹನ ಬಂದಿವೆ. ಈ ವೇಳೆ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿಸಿದ್ದಾರೆ. ಎಂಟು ಮಂದಿಗೆ ಗಾಯಗಳಾಗಿವೆ.
ನಡುರಸ್ತೆಯಲ್ಲಿ ತನ್ನ ಕಾರಿಗೆ ಬೆಂಕಿ ಹೊತ್ತಿಸಿ ಆತಂಕ ಸೃಷ್ಟಿಸಿದ ವ್ಯಕ್ತಿ
ಪೊಲೀಸರ ಮಾಹಿತಿ ಪ್ರಕಾರ, ಮೃತರ ಪೈಕಿ ಇಬ್ಬರು ಅಗ್ನಿಶಾಮಕ ದಳದವರು.
ಈ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿದ್ದರೂ ಅಗ್ನಿ ಅವಘಡ ಸಂಭವಿಸಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ದ್ರವ ಸೋರಿಕೆಯಿಂದ ಅಗ್ನಿ ಅನಾಹುತ ಸಂಭವಿಸಿದೆ. ಈ ಘಟಕದ ಎಲ್ಲ ಸಿಬ್ಬಂದಿಯನ್ನು ಹಾಗೂ ಘಟಕದ ಸುತ್ತಮುತ್ತ ವಾಸಿಸುತ್ತಿರುವವರನ್ನು ಸುರಕ್ಷಿತ ಸ್ಥಳಾಕ್ಕೆ ಸ್ಥಳಾಂತರ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+