ಶಾಲಾ ಆವರಣದಲ್ಲೇ ಕುಸಿದು ಬಿದ್ದು 6 ವರ್ಷದ ಪುಟಾಣಿ ಸಾವು; ಹೃದಯಾಘಾತದ ಶಂಕೆ, ಹೆತ್ತವರ ಆಕ್ರಂದನ

ಶಿವಮೊಗ್ಗ: ಆಟವಾಡುತ್ತಾ, ಕಲಿಯುತ್ತಾ ಕಣ್ಣೆದುರೇ ಇರಬೇಕಾಗಿದ್ದ ಒಂದನೇ ತರಗತಿಯ ಬಾಲಕನೊಬ್ಬ ಶಾಲಾ ಸಮಯ ಮುಗಿಯುವ ಹೊತ್ತಿಗೆ ಆವರಣದಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ಅತ್ಯಂತ ಕರುಣಾಜನಕ ಘಟನೆಯೊಂದು ಶಿವಮೊಗ್ಗ ನಡೆದಿದೆ. ಕೇವಲ 6 ವರ್ಷದ ಬಾಲಕನಿಗೆ ಹೃದಯಾಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ಈ ಘಟನೆ ಇಡೀ ಗ್ರಾಮವನ್ನೇ ಭಾಗವನ್ನೇ ಕಣ್ಣೀರಲ್ಲಿ ಮುಳುಗಿಸಿದೆ.

ಆಟವಾಡುತ್ತಲೇ ಕೊನೆಯುಸಿರೆಳೆದ ತ್ರಿಲೋಕ್

ಕರೂರು ಹೋಬಳಿಯ ಹಾಳಸಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ದುರಂತ ಸಂಭವಿಸಿದೆ. ಕೊಡನವಳ್ಳಿ ಗ್ರಾಮದ ನಿವಾಸಿಗಳಾದ ಗೌತಮ್ ಜೈನ್ ಮತ್ತು ಶಿಲ್ಪಾ ದಂಪತಿಯ ಪ್ರೀತಿಯ ಪುತ್ರ ತ್ರಿಲೋಕ್ ಜೈನ್ (6) ಮೃತಪಟ್ಟ ದುರ್ದೈವಿ ಬಾಲಕ. ಶನಿವಾರ ಎಂದಿನಂತೆ ಶಾಲೆಗೆ ಬಂದಿದ್ದ ತ್ರಿಲೋಕ್, ಮಧ್ಯಾಹ್ನ ಶಾಲಾ ಅವಧಿ ಮುಗಿಯುವ ಸಮಯದಲ್ಲಿ ಸಹಪಾಠಿಗಳೊಂದಿಗೆ ಆವರಣದಲ್ಲಿ ಇದ್ದಾಗ ಏಕಾಏಕಿ ನೆಲಕ್ಕೆ ಕುಸಿದು ಬಿದ್ದಿದ್ದಾನೆ.

Heart Attack

ಇದನ್ನು ನೋಡಿ ಗಾಬರಿಗೊಂಡ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ತಕ್ಷಣವೇ ಬಾಲಕನನ್ನು ಉಪಚರಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ, ವಿಧಿಯ ಆಟ ಬೇರೆಯೇ ಆಗಿತ್ತು. ಆಸ್ಪತ್ರೆಗೆ ತಲುಪುವ ಮಾರ್ಗ ಮಧ್ಯದಲ್ಲೇ ಆ ಪುಟ್ಟ ಕಂದಮ್ಮ ಕೊನೆಯುಸಿರೆಳೆದಿದ್ದಾನೆ.

ಕಣ್ಣೀರಿನ ಸಾಗರದಲ್ಲಿ ಕುಟುಂಬ

ಆಸ್ಪತ್ರೆಯ ವೈದ್ಯರು ಬಾಲಕ ಮೃತಪಟ್ಟಿರುವುದನ್ನು ದೃಢೀಕರಿಸುತ್ತಿದ್ದಂತೆ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಮಗನ ಸಾವಿನ ಸುದ್ದಿ ಕೇಳಿ ಇಡೀ ಕುಟುಂಬ ಆಘಾತಕ್ಕೆ ಒಳಗಾಗಿದ್ದು, ತಾಯಿಯ ರೋದನ ಅಲ್ಲಿ ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ. ಇತ್ತೀಚಿನ ದಿನಗಳಲ್ಲಿ ಸಣ್ಣ ಪ್ರಾಯದ ಮಕ್ಕಳಲ್ಲೂ ಹೃದಯಾಘಾತದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವುದು ಪೋಷಕರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಪುಟಾಣಿ ತ್ರಿಲೋಕ್ ಸಾವಿಗೆ ಹಾಳಸಸಿ ಗ್ರಾಮಸ್ಥರು, ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ಸದಸ್ಯರು ಹಾಗೂ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ತೀವ್ರ ಸಂತಾಪ ಸೂಚಿಸಿದ್ದು, ಮೃತನ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ವಿಠ್ಠಲನ ದರ್ಶನಕ್ಕೆ ಹೊರಟಿದ್ದವರ ಬಾಳಲ್ಲಿ ವಿಧಿಯಾಟ: ಪಿಕಪ್ ವ್ಯಾನ್ ಬಾವಿಗೆ ಬಿದ್ದು 14 ಭಕ್ತರು ಜಲಸಮಾಧಿ
ವಿಠ್ಠಲನ ದರ್ಶನಕ್ಕೆ ಹೊರಟಿದ್ದವರ ಬಾಳಲ್ಲಿ ವಿಧಿಯಾಟ: ಪಿಕಪ್ ವ್ಯಾನ್ ಬಾವಿಗೆ ಬಿದ್ದು 14 ಭಕ್ತರು ಜಲಸಮಾಧಿ

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಕ್ಕಳಲ್ಲಿನ ಹೃದಯಾಘಾತ

ಸಾಮಾನ್ಯವಾಗಿ ವಯಸ್ಸಾದವರಲ್ಲಿ ಅಥವಾ ಯುವಕರಲ್ಲಿ ಕಾಣಿಸಿಕೊಳ್ಳುತ್ತಿದ್ದ ಹೃದಯಾಘಾತದ ಸಮಸ್ಯೆ, ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತಿರುವುದು ವೈದ್ಯಕೀಯ ವಲಯ ಹಾಗೂ ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ತಜ್ಞ ವೈದ್ಯರ ಪ್ರಕಾರ, ಸಣ್ಣ ವಯಸ್ಸಿನ ಮಕ್ಕಳಲ್ಲಿ ಇಂತಹ ದಿಢೀರ್ ಸಾವುಗಳಿಗೆ ಕೆಲವು ಪ್ರಮುಖ ಕಾರಣಗಳಿರಬಹುದು. ಕೆಲವು ಮಕ್ಕಳಿಗೆ ಹುಟ್ಟಿನಿಂದಲೇ ಹೃದಯದ ರಕ್ತನಾಳಗಳಲ್ಲಿ ಅಥವಾ ಕವಾಟುಗಳಲ್ಲಿ ಸಣ್ಣಪುಟ್ಟ ದೋಷಗಳಿರುತ್ತವೆ. ಇದು ಆರಂಭದಲ್ಲಿ ಪೋಷಕರ ಗಮನಕ್ಕೆ ಬಾರದೆ, ಆಟವಾಡುವಾಗ ಅಥವಾ ತೀವ್ರ ಶ್ರಮದ ಸಂದರ್ಭದಲ್ಲಿ ಏಕಾಏಕಿ ಉಲ್ಬಣಗೊಳ್ಳಬಹುದು.

ಹೃದಯದ ಸ್ನಾಯುಗಳು ದಪ್ಪಗಾಗುವುದು ಅಥವಾ ದುರ್ಬಲಗೊಳ್ಳುವುದರಿಂದ ಹೃದಯದ ಬಡಿತದಲ್ಲಿ ಏರುಪೇರಾಗಿ ದಿಢೀರ್ ಕುಸಿದು ಬೀಳುವ ಸಾಧ್ಯತೆ ಇರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕೆಲವು ವೈರಲ್ ಜ್ವರ ಅಥವಾ ಸೋಂಕುಗಳ ನಂತರ ಹೃದಯದ ಸ್ನಾಯುಗಳಲ್ಲಿ ರಹಸ್ಯವಾಗಿ ಉರಿಯೂತ ಕಾಣಿಸಿಕೊಳ್ಳುತ್ತದೆ. ಇದು ಯಾವುದೇ ಮುನ್ಸೂಚನೆ ನೀಡದೆ ಹೃದಯದ ಸ್ತಂಭನಕ್ಕೆ ಕಾರಣವಾಗಬಹುದು.

ಪೋಷಕರು ಮತ್ತು ಶಿಕ್ಷಕರು ವಹಿಸಬೇಕಾದ ಜಾಗರೂಕತೆ

ಇಂತಹ ದುರಂತಗಳು ಮರುಕಳಿಸದಂತೆ ತಡೆಯಲು ಶಾಲೆಗಳಲ್ಲಿ ಮತ್ತು ಮನೆಗಳಲ್ಲಿ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ಅತ್ಯಗತ್ಯ ಎಂದು ವೈದ್ಯರು ಸಲಹೆ ನೀಡುತ್ತಾರೆ. ಮಕ್ಕಳು ಆಟವಾಡುವಾಗ ಅತಿಯಾಗಿ ಸುಸ್ತಾಗುವುದು, ಎದೆನೋವು ಎಂದು ಹೇಳುವುದು, ಉಸಿರಾಟದ ತೊಂದರೆ ಅಥವಾ ತಲೆಸುತ್ತು ಬಂದು ಬಿದ್ದರೆ ತಕ್ಷಣವೇ ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಬೇಕು. ಇಂತಹ ತುರ್ತು ಸಂದರ್ಭಗಳಲ್ಲಿ ಮಗು ಕುಸಿದು ಬಿದ್ದ ತಕ್ಷಣದ 4-5 ನಿಮಿಷಗಳು ಅತ್ಯಂತ ಅಮೂಲ್ಯ (Golden Hour). ಶಾಲಾ ಶಿಕ್ಷಕರಿಗೆ ಮತ್ತು ಸಿಬ್ಬಂದಿಗೆ ಸಿಪಿಆರ್ (CPR - Cardiopulmonary Resuscitation) ಮಾಡುವ ಕನಿಷ್ಠ ಜ್ಞಾನವಿದ್ದರೆ ಆಸ್ಪತ್ರೆಗೆ ತಲುಪುವ ಮುನ್ನ ಮಗುವಿನ ಪ್ರಾಣ ಉಳಿಸಲು ಸಹಕಾರಿಯಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+