ಬರಿಗಾಲಲ್ಲೇ ಓಡಿ ಸ್ಪರ್ಧೆಗೆದ್ದ ಕಾರ್ಮಿಕ ಮಹಿಳೆ

ಮುಂಬೈ, ಡಿ.20: 61 ಹರೆಯದ ಕೃಷಿ ಕಾರ್ಮಿಕ ಮಹಿಳೆ ಲತಾ ಭಗವಾನ್ ಕಾರೆ ಎಂಬುವವರು ಬರಿಗಾಲಲ್ಲೇ ಮ್ಯಾರಾಥನ್ ಓಟ ಓಡಿ ಹಿರಿಯರ ವಿಭಾಗದ ಪ್ರಶಸ್ತಿ ಜಯಿಸಿ ಹೊಸ ದಾಖಲೆ ಬರೆದಿದ್ದಾರೆ.

ಮಹಾರಾಷ್ಟ್ರದ ಸಾಂಪ್ರದಾಯಿಕ ಸೀರೆ ಉಟ್ಟಿದ್ದ ಬಾರಾಮತಿಯ ಲತಾ ಭಗವಾನ್ ಮೂರು ಕಿ.ಮೀ ದೂರದ ಬಾರಾಮತಿ ಮ್ಯಾರಥಾನ್ ನಲ್ಲಿ ಹಿರಿಯರ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲರಿಗಿಂತ ಮೊದಲು ಗುರಿ ತಲುಪುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಮೂಲತ: ಬುಲ್ದಾನದ ಈ ವೃದ್ಧೆ ಲತಾ ಅಲ್ಲಿಂದ ವಲಸೆ ಬಂದು ಬಾರಾಮತಿಯಲ್ಲಿ ನೆಲೆಸಿದವರು. ಬಾರಾಮತಿಯಿಂದ ಏಳು ಕಿ.ಮೀ ದೂರದಲ್ಲಿರುವ ಪಿಂಪ್ಲಿ ಎಂಬಲ್ಲಿ ನೆಲೆಸಿರುವ ಲತಾ ದಿನಾಲು ಬೆಳಗ್ಗೆ ಅಗತ್ಯದ ಕೆಲಸಗಳಿಗೆ ಬರಿಗಾಲಲ್ಲೆ ನಡೆದುಕೊಂಡು ಹೋಗುವ ಅಭ್ಯಾಸವನ್ನು ರೂಢಿಸಿಕೊಂಡಿದ್ದರು.

A 61-yr-old saree-clad labourer wins 3-km marathon!

ಲತಾ ಯಾವತ್ತೂ ಓಡಿದವರಲ್ಲ. ಮ್ಯಾರಥಾನ್ ಸ್ಪರ್ಧೆಗೆ ಇಳಿದಾಗ ಆಕೆಯನ್ನು ಹಲವರು ಗೇಲಿ ಮಾಡಿದ್ದರು. ಹಿರಿಯ ನಾಗರಿಕರ ವಿಭಾಗದಲ್ಲಿ ಇವರ ಜೊತೆ ಹಲವು ಮಂದಿ ಹಿರಿಯ ಕ್ರೀಡಾಪಟುಗಳು ಶೂ ಧರಿಸಿ ಅದೃಷ್ಟ ಪರೀಕ್ಷೆ ನಡೆಸಿದ್ದರು. ಆದರೆ ಲತಾ ಮ್ಯಾರಥಾನ್ ನಲ್ಲಿ ಒಬ್ಬೊಬ್ಬರನ್ನೆ ಹಿಂದಕ್ಕೆ ತಳ್ಳಿ ಗುರಿ ತಲುಪಿದರು. 5000 ರೂಪಾಯಿ ನಗದು ಮತ್ತು ಸರ್ಟಿಫಿಕೆಟನ್ನು ತನ್ನದಾಗಿಸಿಕೊಂಡರು.

ನಾಲ್ಕು ವಿಭಾಗಗಳಲ್ಲಿ ಆಯೋಜಿಸಲಾದ ಮ್ಯಾರಥಾನ್ ಸ್ಪರ್ಧೆಯಲ್ಲಿ ಒಟ್ಟು 9,500 ಮಂದಿ ಭಾಗವಹಿಸಿದ್ದರು. ಪ್ರಶಸ್ತಿ ಗೆದ್ದ ನಂತರ ಮಾತನಾಡಿದ ಲತಾ ಅವರು ನನಗೆ ಇನ್ನಷ್ಟು ಮ್ಯಾರಾಥಾನ್ ಗಳನ್ನು ಓಡುವ ಆಸೆ ಉಂಟಾಗಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+