ಕೊರೊನಾ ವೈರಸ್‌ನಿಂದ ಗುಣಮುಖರಾದ ಮೇಲೆ ಉಸಿರು ನಿಲ್ಲಿಸಿದ ರೋಗಿ
ಮುಂಬೈ, ಮಾರ್ಚ್ 23: ಕೊರೊನಾ ವೈರಸ್‌ನಿಂದ ಗುಣಮುಖರಾಗಿದ್ದ 68 ವರ್ಷದ ವ್ಯಕ್ತಿ ಮುಂಬೈನಲ್ಲಿ ಮೃತಪಟ್ಟಿದ್ದಾರೆ.
ಕೊರೊನಾ ವೈರಸ್ ಗೆ ಚಿಕಿತ್ಸೆ ಪಡೆದು ಗುಣವಾದರೂ ಮಧುಮೇಹ ಹಾಗೂ ಅಸ್ತಮಾ ಮಾತ್ರ ಅವರನ್ನು ಉಸಿರಾಡಲು ಬಿಡಲೇ ಇಲ್ಲ.
ಫಿಲಿಪೈನ್ ಮೂಲದ 68 ವರ್ಷದ ವೃದ್ಧರೊಬ್ಬರು ಇತ್ತೀಚೆಗಷ್ಟೇ ಮುಂಬೈನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ಅವರಿಗೆ ಕೊರೊನಾ ಇರುವುದು ದೃಢಪಡುತ್ತಿದ್ದಂತೆ ಮಾರ್ಚ್ 13ರಿಂದ ಕಸ್ತೂರ ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಆತ ಕೊರೊನಾ ವೈರಸ್‌ನಿಂದ ಸಂಪೂರ್ಣ ಗುಣಮುಖರಾದ ಬಳಿಕ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟಿದ್ದು, ದೇಶದ 8 ವ್ಯಕ್ತಿ ಕೊರೊನಾಗೆ ಬಲಿಯಾದಂತಾಗಿದೆ.
ದೇಶದಲ್ಲಿ ಇಂದು 30 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 427ಕ್ಕೆ ಏರಿಕೆಯಾಗಿದೆ.
ಮೃತಪಟ್ಟು ವ್ಯಕ್ತಿ ಮೊದಲಿನಿಂದಲೂ ಅಸ್ತಮಾ, ಮಧುಮೇಹದಿಂದ ಬಳಲುತ್ತಿದ್ದರು. ಕೊರೊನಾ ಕಂಡು ಬಂದ ಹಿನ್ನೆಲೆಯಲ್ಲಿ ಉಸಿರಾಟದ ತೊಂದರೆ ಉಂಟಾಗಿ ಮೂತ್ರಪಿಂಡಗಳು ವೈಪಲ್ಯಗೊಂಡಿದ್ದವು ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications