ಮುಂಬೈ ಕಟ್ಟಡ ಕುಸಿತ: 7 ಜನ ದುರಂತ ಸಾವು
ಮುಂಬೈ, ಜುಲೈ 25: ಇಂದು(ಜುಲೈ 25) ಬೆಳಿಗ್ಗೆ ಮುಂಬೈನ ಲಾಲ್ ಬಹದ್ದೂರ್ ಶಾಸ್ತ್ರೀ ಮಾರ್ಗದಲ್ಲಿರುವ ದಾಮೋದರ್ ಪಾರ್ಕ್ ಬಳಿಯ ಎರಡು ಕಟ್ಟಡ ಕುಸಿದ ದುರಂತದಲ್ಲಿ 7 ಜನ ಮೃತರಾಗಿದ್ದಾರೆಂದು ತಿಳಿದುಬಂದಿದೆ. 13 ಜನರನ್ನು ರಕ್ಷಿಸಲಾಗಿದೆ.
ಕಟ್ಟಡದ ಅವಶೇಷದಡಿ ಮತ್ತಷ್ಟು ಜನ ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.
ಬೆಳಿಗ್ಗೆ ಸುಮಾರು 10:45 ರ ಸಮಯದಲ್ಲಿ ಘಟನೆ ನಡೆದಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಕಳೆದ ಅಕ್ಟೋಬರ್ (2016)ನಲ್ಲಿ ಮುಂಬೈನ ಪೂರ್ವ ಬಾಂದ್ರಾದಲ್ಲಿ ಐದಂತಸ್ತಿನ ಕಟ್ಟಡವೊಂದು ಕುಸಿದ ಪರಿಣಾಮ ಐವರು ಮೃತರಾಗಿದ್ದ ದುರಂತ ಘಟನೆಯನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications