ಬೀರಮಂಗಲ: ಗೋಣಿ ಚೀಲದಲ್ಲಿ ಮಹಿಳೆಯ ಶವ ಪತ್ತೆ, ಪತಿ ಮೇಲೆ ಶಂಕೆ

ಮಂಗಳೂರು, ನ. 24: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವ್ಯಾಪ್ತಿಯ ಬೀರಮಂಗಲದಲ್ಲಿ ಗೋಣಿ ಚೀಲದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮಹಿಳೆಯ ಕೊಲೆ ಪ್ರಕರಣದಲ್ಲಿ ಆಕೆಯ ಪತಿಯ ಪಾತ್ರವಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೃತ ಮಹಿಳೆಯ ಪತಿ ಇಮ್ರಾನ್ ಶೇಖ್ ಸುಳ್ಯ ಪೇಟೆಯ ಓಡಬೈನಲ್ಲಿರುವ ಕೆ ಸಂತೋಷ್ ಮಾಲೀಕತ್ವದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಸೋನಾವಾನೆ ತಿಳಿಸಿದ್ದಾರೆ.

Woman’s Body Found Inside A Gunny Bag In Sullia

"ಸುಮಾರು ಎಂಟು ತಿಂಗಳ ಹಿಂದೆ ಇಮ್ರಾನ್ ಶೇಖ್ ಪಶ್ಚಿಮ ಬಂಗಾಳದ ಮಹಿಳೆಯನ್ನು ಮದುವೆಯಾಗಿದ್ದು, ಬೀರಮಂಗಲದಲ್ಲಿ ಶಿವರಾಮ ಶಾಸ್ತ್ರಿ ಅವರ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದರು" ಎಂದು ಪೊಲೀಸರು ತಿಳಿಸಿದ್ದಾರೆ.

"ಇಲ್ಲಿ ಕೆಲಸಕ್ಕೆ ಸೇರಿದ 15 ದಿನಗಳೊಳಗೆ ತಮ್ಮ ಊರಿಗೆ ತೆರಳಿ ತಮ್ಮ ಪತ್ನಿಯೊಂದಿಗೆ ಮರಳಿದ್ದರು. ಆಕೆಯೊಂದಿಗೆ 15 ದಿನಗಳ ಕಾಲ ಹೋಟೆಲ್ ಬಾರ್‌ನ ಕೊಠಡಿಯಲ್ಲಿ ತಂಗಿದ್ದ ಆತ ನಂತರ ಬೀರಮಂಗಲದಲ್ಲಿ ಬಾಡಿಗೆ ಮನೆ ಮಾಡಿದ್ದರು" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಮ್ರನ್‌ ಶೇಖ್ ಅವರು ತಮ್ಮ ಪತ್ನಿಯನ್ನು ಹೆರಿಗೆಗಾಗಿ ತವರು ಮನೆಗೆ ಕರೆದುಕೊಂಡು ಹೋಗಬೇಕು ಎಂದು ಹೇಳಿ ನವೆಂಬರ್ 19 ರಿಂದ ಕೆಲಸಕ್ಕೆ ದೀರ್ಘ ರಜೆ ತೆಗೆದುಕೊಂಡಿದ್ದಾರೆ. ಆಕೆ ದೈಹಿಕವಾಗಿ ದುರ್ಬಲಳಾಗಿದ್ದು, ಕೋಲಿನ ಸಹಾಯದಿಂದ ನಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ರಾತ್ರಿ ಇಮ್ರಾನ್‌ನ ಮನೆಯಿಂದ ಮಹಿಳೆಯ ಕಿರುಚಾಟ ಕೇಳಿಬಂದಿದೆ ಎಂದು ಸೋಮವಾರ, ಬಾರ್‌ನಲ್ಲಿ ಮಾಣಿಯಾಗಿ ಕೆಲಸ ಮಾಡುವ ಕೀರ್ತನ್ ಶೆಟ್ಟಿ ಅವರಿಗೆ ಇಮ್ರಾನ್‌ನ ನೆರೆ ಮನೆಯ ರೋಹಿತ್ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಇಮ್ರಾನ್‌ಗೆ ಕೇಳಿದಾಗ, ತನ್ನ ಹೆಂಡತಿ ಶೌಚಾಲಯದಲ್ಲಿ ಬಿದ್ದಿದ್ದರು ಎಂದು ನೆರೆಹೊರೆಯವರಿಗೆ ತಿಳಿಸಿದ್ದಾನೆ. ಮಂಗಳವಾರ ಹೋಟೆಲ್ ಮಾಲೀಕ ಆತನಿಗೆ ಕರೆ ಮಾಡಿದಾಗ ಅವರ ನಂಬರ್ ಸ್ವಿಚ್ ಆಫ್ ಆಗಿತ್ತು.

"ಇಮ್ರಾನ್‌ನ ವರ್ತನೆಯು ಸಾಕಷ್ಟು ಅನುಮಾನಕ್ಕೆ ಕಾರಣವಾದ ನಂತರ. ಸಂತೋಷ್ ಮಂಗಳವಾರ ಶಂಕಿತ ಆರೋಪಿ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಕಿಟಕಿಯಿಂದ ಇಣುಕಿ ನೋಡಿದಾಗ ಮೇಜಿನ ಮೇಲಿದ್ದ ಫೋನ್ ಮತ್ತು ಟಾಯ್ಲೆಟ್‌ನಲ್ಲಿ ಬೆಳಕು ಕಂಡಿದೆ. ಜೊತೆಗೆ ಶೌಚಾಲಯದ ಬಳಿ ಗೋಣಿ ಚೀಲವನ್ನು ಗಮನಿಸಿದ್ದಾರೆ. ತಕ್ಷಣ ಪೊಲೀಸರನ್ನು ಸಂಪರ್ಕಿಸಿದ್ದಾರೆ" ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಭಾನುವಾರ ರಾತ್ರಿ ಇಮ್ರಾನ್ ಬ್ಯಾಗ್‌ ತೆಗೆದುಕೊಂಡು ಹೊರಟು ಹೋಗಿದ್ದಾರೆ. ಈ ವೇಳೆ ಆತನ ಹೆಂಡತಿ ಅವನೊಂದಿಗೆ ಹೋಗುವುದನ್ನು ನಾವು ನೋಡಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಹುಡುಕಾಟ ನಡೆಸಿದಾಗ ಗೋಣಿ ಚೀಲದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.

ಸದ್ಯ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+