ಮಂಗಳೂರು: ರಸ್ತೆಯಲ್ಲೇ ಹೆಲ್ಮೆಟಲ್ಲಿ ಹೊಡೆದ ಗಂಡ, ಪತ್ನಿಯಿಂದ ಕೇಸು ದಾಖಲು

ನಡು ರಸ್ತೆಯಲ್ಲೇ ಹೆಲ್ಮೆಟಲ್ಲಿ ಹೊಡೆದ ಗಂಡನ ಚಿತ್ರಹಿಂಸೆ ತಾಳಲಾರದೆ ಪತ್ನಿ ಪೊಲೀಸ್ ಕೇಸು ದಾಖಲಿಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಂಗಳೂರು, ಫೆಬ್ರವರಿ 28: ನಡು ರಸ್ತೆಯಲ್ಲೇ ಹೆಲ್ಮೆಟಲ್ಲಿ ಹೊಡೆದ ಗಂಡನ ಚಿತ್ರಹಿಂಸೆ ತಾಳಲಾರದೆ ಪತ್ನಿ ಪೊಲೀಸ್ ಕೇಸು ದಾಖಲಿಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸದ್ಯ ಗಂಡನಿಂದ ಹಲ್ಲೆಗೊಳಗಾಗಿ ಪತ್ನಿ ರೂಪಾ ಕೋಟ್ಯಾನ್ (ಹೆಸರು ಬದಲಾಯಿಸಲಾಗಿದೆ) ಆಸ್ಪತ್ರೆ ಸೇರಿದ್ದಾರೆ. ಇವರ ಗಂಡ ಕೋಟೆಕಾರು ಮಾಡೂರು ಕೊಂಡಾಣ ನಿವಾಸಿ ಜಯಂತ್ ಕೊಂಡಾಣರನ್ನು ಪೊಲೀಸರು ಬಂಧಿಸಿದ್ದಾರೆ.[ವಿಟ್ಲ : ಪ್ರೇಮ ವೈಫಲ್ಯದಿಂದ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವು]

Wife harassed and threatened on road side by husband in Mangaluru

ಕಳೆದ ಒಂದೂವರೆ ವರುಷದ ಹಿಂದೆ ರೂಪಾ ಕೋಟ್ಯಾನ್ ರನ್ನು ಕಟ್ಟಡ ಗುತ್ತಿಗೆ ಕಾಮಗಾರಿ ನಡೆಸುವ ಜಯಂತ್ 2015ರಲ್ಲಿ ಮದುವೆಯಾಗಿದ್ದರು. ಆರಂಭದಲ್ಲಿ ಪತ್ನಿ ಜೊತೆ ಚೆನ್ನಾಗಿಯೇ ಇದ್ದ ಜಯಂತ್ ನಂತರದ ದಿವಸಗಳಲ್ಲಿ ನಿಧಾನಕ್ಕೆ ಜಗಳ ಆರಂಭಿಸಿದ್ದರು. ಪತ್ನಿಗೆ ಎಲ್ಲೆಂದರಲ್ಲಿ ಹೊಡೆಯುತ್ತಿದ್ದುದಲ್ಲದೆ, ನೀನು ಮನೆಯಿಂದ ಬರುವಾಗ ಎಷ್ಟು ಲಕ್ಷ ತಂದಿದ್ದೀ ಎಂದು ಕೇಳಿ ಹಿಂಸಿಸುತ್ತಿದ್ದುದಾಗಿ ರೂಪಾ ಕೇಸ್ ದಾಖಲಿಸಿದ್ದಾರೆ.[ಮಂಗ್ಳೂರು ಬಂದ್ ವೇಳೆ ಬಸ್ ಗೆ ಕಲ್ಲೆಸೆದಿದ್ದ ಐವರ ಬಂಧನ]

ತಮ್ಮ ಮೊಬೈಲನ್ನೂ ಜಯಂತ್ ಪುಡಿಗೈದಿದ್ದಾರೆ. ತನ್ನ ಮೇಲೆ ಅನೇಕ ಬಾರಿ ಸಣ್ಣ, ಪುಟ್ಟ ವಿಚಾರಗಳನ್ನೇ ಮುಂದಿಟ್ಟು ಮೃಗೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದಾರೆ. ಇಲ್ಲಿವರೆಗೆ ಮಗುವಿನ ಭವಿಷ್ಯ ನೋಡಿ ಸುಮ್ಮನಾಗುತ್ತಿದ್ದೆ ಎಂದು ರೂಪಾ ದೂರಿನಲ್ಲಿ ಹೇಳಿದ್ದಾರೆ.

Wife harassed and threatened on road side by husband in Mangaluru

ಗಂಡನ ಮನೆಯ ಹಿಂಸೆಯನ್ನು ಅನುಭವಿಸಲಾರದ ರೂಪಾ ಜನವರಿಯಿಂದ ಕೊಲ್ಯದ ತಾಯಿ ಮನೆಯಲ್ಲಿ ಬಂದು ವಾಸಿಸುತ್ತಿದ್ದರು. ಫೆ. 25 ಶನಿವಾರದಂದು ಸಂಜೆ ಕೊಲ್ಯದ ಮನೆಯಲ್ಲಿ ರೂಪಾ ಒಬ್ಬಂಟಿಯಾಗಿದ್ದಾಗ ಜಯಂತ್ ಧಾವಿಸಿದ್ದು ಫೋನಿನಲ್ಲಿ ಮನೆಯಿಂದ ಹೊರ ಬರುವಂತೆ ಹೇಳಿದ್ದಾನೆ.

ಮನೆಯಿಂದ ಹೊರಗಡೆ ಬಂದ ರೂಪಾಳಿಗೆ ತನ್ನಲ್ಲಿದ್ದ ಹೆಲ್ಮೆಟಲ್ಲೇ ನಡು ರಸ್ತೆಯಲ್ಲಿ ಹಿಗ್ಗಾ, ಮುಗ್ಗಾ ಥಳಿಸಿದ್ದಾರೆ. ನೆರೆಮನೆಯವರು ಜಯಂತನ್ನು ತಡೆದು ನಿಲ್ಲಿಸಿದ್ದು, ಗಂಭೀರ ಗಾಯಗೊಂಡ ರೂಪಾಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

Wife harassed and threatened on road side by husband in Mangaluru

ಆಸಿಡ್ ದಾಳಿ, ಸುಪಾರಿ ಕೊಲೆ ಬೆದರಿಕೆ:

ಪತ್ನಿಗೆ ಹೆಲ್ಮೆಟಲ್ಲಿ ಹಲ್ಲೆ ಮಾಡುವ ವೇಳೆ ನಿನ್ನ ಮುಖಕ್ಕೆ ಆಸಿಡ್ ಹಾಕ್ತೇನೆ, ತನ್ನಲ್ಲಿರುವ ಒಂದು ಕಾರನ್ನು ಮಾರಿ ಎಕ್ಕೂರಿನ ಪ್ರಸಿದ್ಧ ರೌಡಿಯೋರ್ವನಿಗೆ ಸುಪಾರಿ ಕೊಟ್ಟು ನಿನ್ನನ್ನು ಕೊಲ್ಲಿಸುತ್ತೇನೆಂದು ಧಮಕಿಯೂ ಹಾಕಿದ್ದಾನಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+