ಕೊನೆಗೂ ಬಯಲಾಯಿತು ಗಂಜಿಮಠ ಮಹಮ್ಮದ್‌ ಸಮೀರ್ ಕೊಲೆ ರಹಸ್ಯ

ಮಂಗಳೂರು, ಅಕ್ಟೋಬರ್. 09 : ಅತ್ಯಂತ ಕುತೂಹಲ ಕೆರಳಿಸಿದ್ದ ಗಂಜಿಮಠ ಮಹಮ್ಮದ್‌ ಸಮೀರ್ (35) ಕೊಲೆ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ಸಿಕ್ಕಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಸಮೀರ್ ಪತ್ನಿ ಫಿರ್ದೌಸ್ ಮತ್ತು ಆಕೆಯ ಪ್ರಿಯಕರನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ದೇವತಾನಪಟ್ಟಿ ಠಾಣೆಯ ಪೊಲೀಸರು ಫಿರ್ದೌಸ್ ಮತ್ತು ಆಕೆಯ ಪ್ರಿಯಕರ ಆಸಿಫ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತ ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪತ್ನಿ ಫಿರ್ದೌಸ್ ಮತ್ತು ಮಗುವಿನ ಜೊತೆ ಬೆಂಗಳೂರಿಗೆ ತೆರಳಿದ್ದ ಸಮೀರ್ ನಾಪತ್ತೆ ಆಗಿದ್ದಾನೆಂದು ಸಮೀರ್ ಅವರ ತಂದೆ ಬಜ್ಪೆ ಠಾಣೆಯಲ್ಲಿ ಸೆಪ್ಟೆಂಬರ್ 19 ರಂದು ದೂರು ನೀಡಿದ್ದರು. ಈ ಪ್ರಕರಣದ ಜಾಡು ಹಿಡಿದು ಹೋದ ಪೊಲೀಸರು, ಮಹಮ್ಮದ್ ಸಮೀರ್ ತಮಿಳುನಾಡಿನ ಕೃಷ್ಣಗಿರಿ ಎಂಬಲ್ಲಿ ಕೊಲೆಯಾಗಿರುವ ಬಗ್ಗೆ ಪತ್ತೆ ಹಚ್ಚಿದ್ದರು.

Wife arrested for husbands murder

ಇದೇ ವೇಳೆ ಬೆಂಗಳೂರಿಗೆ ತೆರಳಿದ್ದ ಪತ್ನಿ ಫಿರ್ದೌಸ್ ಸೆಪ್ಟೆಂಬರ್ 19 ರಂದು ಕಾಪುವಿನ ತವರು ಮನೆಗೆ ಆಗಮಿಸಿ, ಮರುದಿನ ಮೂರು ತಿಂಗಳ ಮಗುವನ್ನು ಮನೆಯಲ್ಲಿ ಬಿಟ್ಟು ನಾಪತ್ತೆಯಾಗಿದ್ದಳು. ಹೀಗಾಗಿ ಕಾಪು ಪೊಲೀಸ್ ಠಾಣೆಯಲ್ಲಿ ಫಿರ್ದೌಸ್ ನಾಪತ್ತೆ ಬಗ್ಗೆಯೂ ಕೇಸು ದಾಖಲಾಗಿತ್ತು.

ಪತ್ನಿಯ ನಾಪತ್ತೆಯಿಂದಾಗಿ ಕೊಲೆಯ ಹಿಂದೆ ಆಕೆಯ ಕೈವಾಡ ಇರುವ ಶಂಕೆ ವ್ಯಕ್ತವಾಗಿತ್ತು.

ಸಮೀರ್ ನನ್ನು ಸೆಪ್ಟೆಂಬರ್. 15ರಂದು ರಾತ್ರಿ 11 ಗಂಟೆ ವೇಳೆಗೆ ಚಾಕುವಿನಿಂದ ತಿವಿದು ಕೊಲೆಗೈದು ಮೃತದೇಹವನ್ನು ಕೊಡೈಕೆನಾಲ್ ನಲ್ಲಿ ಎಸೆದಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+