• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಳಿನ್‌ ವಿಕೃತ ಖುಷಿ ಪಡೆಯುವುದರಲ್ಲಿ ಹೆಸರುವಾಸಿ; ಮಂಗಳೂರಿನಲ್ಲಿ ಖಾದರ್ ವಾಗ್ದಾಳಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್‌, 29: ಪಿಎಫ್ಐ ನಿಷೇಧ ಮಾಡುವಂತೆ ಮಾಜಿ ಸಚಿವ ಯುಟಿ ಖಾದರ್ ನನ್ನ ಬಳಿ ಬಂದು ಕಣ್ಣೀರು ಹಾಕಿದರು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಯುಟಿ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. ನಳಿನ್ ಕುಮಾರ್ ಕಟೀಲ್‌ರವರು ರಾಜಕಾರಣದಲ್ಲಿ ಗಾಳಿಯಲ್ಲಿ ಗುಂಡು ಹೊಡೆದು ವಿಕೃತ ಖುಷಿ ತಗೊಳ್ಳುವ ವಿಚಾರದಲ್ಲಿ ಅತ್ಯಂತ ಹೆಸರುವಾಸಿ ಆಗಿದ್ದಾರೆ ಎಂದು ಮಂಗಳೂರಿನಲ್ಲಿ ವಾಗ್ದಾಳಿ ನಡೆಸಿದರು.

"ಸುಳ್ಳು ಹೇಳುವುದು, ಆಮೇಲೆ ಸುಳ್ಳಿನ ಮೇಲೆ ರಾಜಕಾರಣ ಮಾಡುವುದು.ಇದು ವಿಘ್ನ ಸಂತೋಷಿಗಳ ಲಕ್ಷಣ ಆಗಿದೆ. ಸುಳ್ಳು ಹೇಳುವುದರಲ್ಲಿ ನಳಿನ್ ಹಿಂದಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ನಳಿನ್‌ ಮುಂದೆ ಕಣ್ಣೀರು ಹಾಕುವ ಅವಶ್ಯಕತೆ ನನಗಿಲ್ಲ. ಅಂತಹ ಅವಶ್ಯಕತೆ ಇನ್ನು ಮುಂದಿನ ದಿನಗಳಲ್ಲೂ ಕೂಡ ಬರುವುದಿಲ್ಲ. ತಾನು ಮಾಡಿದ ಕೆಲಸವನ್ನು ನಾನೇ ಮಾಡಿದ್ದು ಎಂದು ಹೇಳುವಷ್ಟು ಸಾಮರ್ಥ್ಯ, ಧೈರ್ಯವಿಲ್ಲದವರು ಈ ರೀತಿಯ ಅಪಾದನೆ ಮಾಡುವುದು ಸಹಜ. ನಿಮಗೆ ನಿಜವಾದ ದೇಶಭಕ್ತಿ ಇದ್ದಲ್ಲಿ, ಧರ್ಮದ ಆಧಾರದಲ್ಲಿ ವಿಷ ಬೀಜ ಬಿತ್ತಿ ಸಮಾಜ ಸ್ವಾಸ್ಥ್ಯ ಕೆಡಿಸುವ, ಭಾರತದ ಶ್ರೇಷ್ಠ ಸಂವಿಧಾನವನ್ನು ವಿರೋಧಿಸಿ ಕಾನೂನು ಕೈಗೆತ್ತಿಕೊಳ್ಳುವ ಎಲ್ಲಾ ಸಂಘಟನೆಗಳನ್ನೂ ನಿಷೇಧ ಮಾಡಿ," ಎಂದು ಯು.ಟಿ.ಖಾದರ್ ನಳಿನ್‌ ಕುಮಾರ್‌ ಕಟೀಲ್‌ ವಿರುದ್ಧ ಹರಿಹಾಯ್ದಿದ್ದಾರೆ.

ಮಂಗಳೂರು; ಪಿಎಫ್ಐ ಕಚೇರಿಗಳನ್ನು ಸೀಲ್ ಮಾಡಿದ ಪೊಲೀಸರುಮಂಗಳೂರು; ಪಿಎಫ್ಐ ಕಚೇರಿಗಳನ್ನು ಸೀಲ್ ಮಾಡಿದ ಪೊಲೀಸರು

ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಒತ್ತಾಯ

ದೇಶದಲ್ಲಿ ಶಾಂತಿ ಸಾಮರಸ್ಯ ಹದಗೆಡಿಸುವ ಸಂಘಟನೆಗಳ ವಿರುದ್ಧ ಕ್ರಮ ಆಗಬೇಕು. ಇದು ಸರ್ಕಾರದ ಜವಾಬ್ದಾರಿ, ಹಾಗಾಗಿ ಎಲ್ಲಾ ಸಂಘ, ಸಂಸ್ಥೆಗಳ ಮೇಲೆ ಕ್ರಮ ಆಗಲಿ. ಹಲ್ಲೆ, ಅಶಾಂತಿ, ಕೋಮು ದ್ವೇಷದ ಸಂಘಟನೆ ವಿರುದ್ದ ಕ್ರಮ ಆಗಲಿ. ತಾರತಮ್ಯ ಮಾಡದೇ ಸದುದ್ದೇಶದಿಂದ ಕ್ರಮ ಆಗಲಿ. ತೆಗೆದುಕೊಳ್ಳುವ ಒಂದು ಕ್ರಮದ ಮೂಲಕ ಭವಿಷ್ಯದಲ್ಲಿ ಸಮಾಜದಲ್ಲಿ ಅಶಾಂತಿ ಕಡಿಮೆ ಆಗಬೇಕು. ಉತ್ತಮ ಸಮಾಜ ನಿರ್ಮಾಣ ‌ಮಾಡಲು ಕ್ರಮಗಳು ಅಗತ್ಯ ಎಂದು ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ.

ಬ್ಯಾನ್ ವಿಚಾರದಲ್ಲಿ ಕೋರ್ಟ್‌ನಿಂದ ಕ್ರಮ ‌

ಬ್ಯಾನ್ ಮಾಡುವ ವಿಚಾರದಲ್ಲಿ ಕಾನೂನು ಮತ್ತು ಕೋರ್ಟ್ ‌ನೋಡಿಕೊಳ್ಳುತ್ತದೆ. ಸಮಾಜ ಒಡೆಯುವ ಯಾವುದೇ ಸಂಘಟನೆಗಳಿದ್ದರೂ, ಅವುಗಳ ಮೇಲೆ ‌ಕ್ರಮ ಆಗಲಿ. ಯಾವುದೇ ಸಂಘಟನೆಗಳನ್ನು ಸಮಾಜದಲ್ಲಿ ‌ಹೇಗೆ ಬಿಂಬಿಸುತ್ತಾರೆಯೋ ಗೊತ್ತಿಲ್ಲ. ಅಂತಹ ಯಾವುದೇ ಮಾಹಿತಿ ನನಗಿಲ್ಲ. ಸಮಾಜದ ಬಹುತೇಕ ಜನರಿಗೆ ಪ್ರೀತಿ, ಸೌಹಾರ್ದತೆ ಬೇಕು. ರಾಜಕೀಯವಾಗಿ ಯಾವ ಪರಿಣಾಮ ಅಗುತ್ತದೆ ಅನ್ನುವುದು ನನಗೆ ಗೊತ್ತಿಲ್ಲ. ಸಾಕ್ಷ್ಯಧಾರ‌ ಇದ್ದಲ್ಲಿ ತಾರತಮ್ಯ ‌ಮಾಡದೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಕೋಮು ದ್ವೇಷದ ಆಧಾರದಲ್ಲಿ ಸಮಾಜದಲ್ಲಿ ಕೊಲೆಗಳು ಆಗುತ್ತಿದೆ. ಸತ್ತಾಗಲೂ ಪರಿಹಾರ ಕೋಡುವುದರಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ಸರ್ಕಾರದಿಂದ ಸಮಾನತೆಯ ಕ್ರಮ ಆಗಬೇಕು ಎಂದು ಯು.ಟಿ ಖಾದರ್ ಮನವಿ ಮಾಡಿದ್ದಾರೆ.

ಯು.ಟಿ ಖಾದರ್‌ ವಿರುದ್ಧ ಕಟೀಲ್‌ ವಾಗ್ದಾಳಿ

ಯು.ಟಿ ಖಾದರ್ ಅವರೇ ನಮ್ಮ ಬಳಿ ಬಂದು ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಯನ್ನು ಬ್ಯಾನ್ ಮಾಡುವಂತೆ ಕಣ್ಣೀರು ಹಾಕಿದ್ದರು. ಇದಕ್ಕೆ ನನ್ನ ಬಳಿ ಸಾಕ್ಷಿ ಆಧಾರಗಳಿವೆ ಎಂದು ಎಲ್ಲಾ ಸಂಘಟನೆಗಳು ಬ್ಯಾನ್ ಅಗಬೇಕು ಎಂಬ ಯು.ಟಿ ಖಾದರ್ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಚಿಕ್ಕೋಡಿಯಲ್ಲಿ ತಿರುಗೇಟು ನೀಡಿದ್ದಾರೆ. ಎಸ್‍ಡಿಪಿಐ ಹಾಗೂ ಪಿಎಫ್‍ಐ ಕಾರ್ಯಕರ್ತರು ಯು.ಟಿ ಖಾದರ್ ಅವರನ್ನೇ ಹತ್ಯೆ ಮಾಡಲು ಮುಂದಾಗಿದ್ದರು. ಧಾರ್ಮಿಕ ಸಂಘಟನೆಯ ಹೆಸರಿನಲ್ಲಿ ನಾವು ಯಾರನ್ನೂ ವಿರೋಧ ಮಾಡಿಲ್ಲ. ಕಳೆದ 8 ವರ್ಷಗಳ ಅಧ್ಯಯನದ ನಂತರ ಈ ಕ್ರಮ ಕೈಗೊಂಡಿದ್ದೇವೆ. ಪ್ರವೀಣ್, ಪ್ರಶಾಂತ್ ಹತ್ಯೆ, ಮೈಸೂರಿನ ಹತ್ಯೆಗಳು, ಚೂರಿ ಇರಿತ, ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣಗಳು ಎಲ್ಲಾ ರೀತಿಯಲ್ಲಿ ತನಿಖೆ ಮಾಡಲಾಗಿದೆ. ತನಿಖಾ ಸಂಸ್ಥೆಗಳು ನೀಡಿದ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದರು.

UT Khader expressed outrage against BJP state President Nalin Kumar Kateel

ಇನ್ನು ಭಾರತ ಜೋಡೋ ಯಾತ್ರೆಯಲ್ಲಿ ಪೇಸಿಎಂ ಪೋಸ್ಟರ್ ಪ್ರದರ್ಶನ ವಿಚಾರವಾಗಿ ಮಾತನಾಡಿ, ರಾಜ್ಯದಲ್ಲಿ ಪೇಮೆಂಟ್ ಸಿ ಎಂ ಯಾರಾದರೂ ಆಗಿದ್ದರೆ ಅದು ಸಿದ್ದರಾಮಯ್ಯನವರಾಗಿದ್ದಾರೆ. ಖರ್ಗೆ, ಪರಮೇಶ್ವರ್, ಡಿ.ಕೆ.ಶಿವಕುಮಾರ್‌ ಇದ್ದರೂ ಸಹ ನೇರವಾಗಿ ಸಿದ್ದರಾಮಯ್ಯ ಸಿಎಂ ಆಗಿದ್ದರು. ನೇರವಾಗಿ ಪೇಮೆಂಟ್ ಮಾಡಿಯೇ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದು ಎಂದು ವಾಗ್ದಾಳಿ ನಡೆಸಿದ್ದರು.

ನಳಿನ್ ಕುಮಾರ ಕಟೀಲ್
Know all about
ನಳಿನ್ ಕುಮಾರ ಕಟೀಲ್
English summary
UT Khader expressed outrage in Mangaluru, Nalin Kumar Kateel is most famous liar. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X