ಪೋಳ್ಯ ಮನೆ ಸ್ಫೋಟ ಪ್ರಕರಣ: ಮತ್ತೆರಡು ಕಚ್ಚಾ ಬಾಂಬ್ ಗಳು ಪತ್ತೆ

ಮಂಗಳೂರು, ಅಕ್ಟೋಬರ್. 16: ಪುತ್ತೂರು ತಾಲೂಕಿನ ಕಬಕ ಸಮೀಪದ ಪೋಳ್ಯ ಎಂಬಲ್ಲಿ ಬಾಂಬ್ ಅಳವಡಿಸಿ ಮನೆ ಸ್ಫೋಟಿಸಲು ಯತ್ನಿಸಿದ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಿದ್ದಾರೆ.

ಈ ನಡುವೆ ಪರಿಶೀಲನೆ ವೇಳೆ ಪೊಲೀಸರು ಮನೆಗೆ ಅಳವಡಿಸಿ ಸ್ಫೋಟಿಸದ ಮತ್ತೆರಡು ಜೀವಂತ ಕಚ್ಚಾ ಬಾಂಬ್ ಪತ್ತೆ ಹಚ್ಚಿದ್ದಾರೆ.

ಈ ಹಿನ್ನೆಲೆಯಲ್ಲಿ ಘಟನೆ ನಡೆದ ಸ್ಥಳಕ್ಕೆ ಎಫ್ ಎಸ್ಎಲ್ ತಂಡ ಹಾಗೂ ಶ್ವಾನದಳ ಶೋಧಕಾರ್ಯ ನಡೆಸಿದೆ. ಈ ಸ್ಫೋಟಕಗಳನ್ನು ಜೆಲ್ ಬೇಸ್ಡ್ ಅಮೋನಿಯಂ ನೈಟ್ರೇಟ್ ನಿಂದ ತಯಾರಿಸಲಾಗಿದೆ ಎಂದು ಎಫ್ ಎಸ್ಎಲ್ ತಂಡದ ಆಧಿಕಾರಿಗಳು ತಿಳಿಸಿದ್ದಾರೆ.

Two more explosives recovered from Ploya house

ಸೋಮವಾರ ತಡ ರಾತ್ರಿ ಸ್ಫೋಟ ಸಂಭವಿಸಿದ್ದು, ನಾರಾಯಣ ಪ್ರಸಾದ್ ಅವರ ಮನೆಯಲ್ಲಿ ಸುಮಾರು 3 ತಿಂಗಳ ಹಿಂದೆ ಕೆಲಸಕ್ಕೆ ಇದ್ದ ಬಾಬು ಯಾನೆ ಬಾಲು ಈ ಕೃತ್ಯ ಎಸಗಿದ್ದಾನೆ ಎಂದು ಶಂಕಿಸಲಾಗಿದೆ. ಕೆಲಸಕ್ಕಿದ್ದ ಬಾಬು ವನ್ನು 3 ತಿಂಗಳ ಹಿಂದೆ ನಾರಾಯಣ್ ಪ್ರಸಾದ್ ಕೆಲಸದಿಂದ ತೆಗೆದು ಹಾಕಿದ್ದರು .

Two more explosives recovered from Ploya house

ಆ ದ್ವೇಷದಿಂದ ಬಾಬು ಈ ಕೃತ್ಯವನ್ನು ಎಸಗಿರುವ ಬಗ್ಗೆ ಶಂಕೆಯಿದ್ದು, ಪರಾರಿಯಾಗಿರುವ ಆರೋಪಿಯ ಪತ್ತೆಗೆ ಪೊಲೀಸ್ ಅಧಿಕಾರಿಗಳು ವಿಶೇಷ ತಂಡವನ್ನು ರಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+