ಬೆಳ್ತಂಗಡಿ, ಪುತ್ತೂರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ

ಬೆಳ್ತಂಗಡಿ ಹಾಗೂ ಪುತ್ತೂರು ಪೊಲೀಸರು ನಡೆಸಿದ ಪ್ರತ್ಯೇಕ ದಾಳಿಯಲ್ಲಿ ಗಾಂಜಾ ಸಾಗಿಸುತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಮುಹಮ್ಮದ್ ಅಶ್ರಫ್ ಪುತ್ತೂರಿನ ಪೊಲೀಸರು, ಹಯಾಝ್ ಅಲಿಯಾಸ್ ಫೈಯಾಝ್ ನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು, ಡಿಸೆಂಬರ್. 16: ಗಾಂಜಾ ಸಾಗಾಟ ಮಾಡುತ್ತಿದ್ದ ಮುಹಮ್ಮದ್ ಅಶ್ರಫ್ ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಂದೆಡೆ ಬೆಳ್ತಂಗಡಿಯ ಹಳೆಕೋಟೆ ವಾಣಿ ಕಾಲೇಜಿನ ಎದುರು ಇರುವ ಬಸ್ ನಿಲ್ದಾಣದಲ್ಲಿ ಗಾಂಜಾ ಸಾಗಾಟ ಮಾರಾಟ ಮಾಡುತ್ತಿದ್ದ ಹಯಾಝ್ ಅಲಿಯಾಸ್ ಫೈಯಾಝ್ನ ಪೊಲೀಸರು ದಸ್ತಗಿರಿ ಮಾಡಿದ್ದಾರೆ.

ಮುಹಮ್ಮದ್ ಅಶ್ರಫ್ ಚಿಕ್ಕಮುಡ್ನೂರು ಗ್ರಾಮದ ಸಾಲ್ಮರದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ಮುಹಮ್ಮದ್ ಅಶ್ರಫ್ ನನ್ನು ಬಂಧಿಸಲಾಗಿದೆ. ಬಂಧಿತನಿಂದ 500 ಗ್ರಾಂ ಗಾಂಜಾವನ್ನ ವಶಪಡಿಸಿಕೊಳ್ಳಲಾಗಿದೆ.

ಇತ್ತ ಬೆಳ್ತಂಗಡಿಯ ಹಳೆಕೋಟೆ ವಾಣಿ ಕಾಲೇಜಿನ ಎದುರು ಇರುವ ಬಸ್ ನಿಲ್ದಾಣದಲ್ಲಿ ಗಾಂಜಾ ಸಾಗಾಟ ಮಾರಾಟ ಮಾಡುತ್ತಿದ್ದ ಹಯಾಝ್ ಅಲಿಯಾಸ್ ಫೈಯಾಝ್ನ ಪೊಲೀಸರು ದಸ್ತಗಿರಿ ಮಾಡಿ 105 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

Two marijuana smuggling case two accuse arrested at Belthangady and Puttu

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ಅಧೀಕ್ಷಕರು, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರ ನಿರ್ದೇಶನದಂತೆ ಬಂಟ್ವಾಳ ಉಪ ವಿಭಾಗದ ಪೊಲೀಸ್‌ ಉಪಾಧೀಕ್ಷಕರು ಮತ್ತು ಪೊಲೀಸ್‌ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಪೊಲೀಸ್‌ ಠಾಣಾ ಪಿಎಸ್ ಐ ರವಿ ಬಿಎಸ್ ರವರ ನೇತೃತ್ವದಲ್ಲಿ ಠಾಣಾ ಸಿಬ್ಬಂದಿ ಎಎಸ್ ಐ ಕರುಣಾಕರ, ಎಎಸ್ಐ ಕಲೈಮಾರ್, ಲಾರೆನ್ಸ್‌, ಶಿವರಾಮ ರೈ, ರಾಜೇಶ್‌, ಚಾಲಕ ಹರೀಶ್‌ ಹಾಗೂ ನಕ್ಸಲ್ ನಿಗ್ರಹ ದಳದ ಹರೀಶ್‌, ಸತೀಶ್ ಆರೋಪಿಯನ್ನ ಪತ್ತೆಹಚ್ಚಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+