ಮಂಗಳೂರು: ಡ್ರಗ್ ಪ್ರಕರಣದಲ್ಲಿ ಮತ್ತಿಬ್ಬರು ಪೆಡ್ಲರ್ ಗಳು ಅರೆಸ್ಟ್

ಮಂಗಳೂರು, ಸೆಪ್ಟೆಂಬರ್ 29: ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗೂ ಅಕೀಲ್ ನೌಶೀಲ್ ನನ್ನು ಬಂಧಿಸಿದ ಬಳಿಕ ಡ್ರಗ್ ಪೆಡ್ಲರ್ ಗಳಿಗೆ ಮಂಗಳೂರು ಸಿಸಿಬಿ ಪೊಲೀಸರು ಬಲೆ ಬೀಸುತ್ತಲ್ಲೇ ಇದ್ದಾರೆ.

ಇದೀಗ ಮಂಗಳೂರು ಸಿಸಿಬಿ ಪೊಲೀಸರು ಮತ್ತೆ ಬೆಂಗಳೂರಿನಲ್ಲಿ ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ಮಂಗಳೂರಿನ ಬಂದರು ಮೂಲದ ನಿವಾಸಿ ಪೆಡ್ಲರ್ ಶಾ ನವಾಜ್ ನ್ನು ಸೋಮವಾರ ಪೊಲೀಸರು ವಶಕ್ಕೆ ಪಡೆದಿದ್ದು, ಆ ದಿನವೇ ಬೆಂಗಳೂರಿನಲ್ಲಿ ಮತ್ತಿಬ್ಬರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ.

ಕೆಂಗೇರಿ ನಿವಾಸಿ ಶಾಮ್ ಹಾಗೂ ನೈಜೀರಿಯಾ ಪ್ರಜೆ ಬಂಧಿತ ಡ್ರಗ್ ಪೆಡ್ಲರ್ ಗಳು. ಈ ಪೆಡ್ಲರ್ ಗಳು ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗೂ ಅಕೀಲ್ ನೌಶೀಲ್ ಗೆ ಮುಂಬೈ, ಗೋವಾದಿಂದ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

Mangaluru: Two Drug Peddlers Arrest In Dancer Kishor Shetty Drug Case

ಮುಂಬೈ, ಗೋವಾದಿಂದ ಡ್ರಗ್ಸ್ ಸ್ಮಗಲ್ ಮಾಡಿ ಮಂಗಳೂರಿನಲ್ಲಿ ಪೂರೈಸುತ್ತಿದ್ದ ಈ ಪೆಡ್ಲರ್ ಗಳು ಎಂಡಿಎಂಎ, ಎಲ್‌ಎಸ್‌ಡಿ, ಸೇರಿದಂತೆ ಇನ್ನಿತರ ಸಿಂಥೆಟಿಕ್ ಡ್ರಗ್ಸ್ ಸ್ಮಗ್ಲಿಂಗ್ ಮಾಡುತ್ತಿದ್ದರು ಎನ್ನಲಾಗಿದೆ.

ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ 8 ಮಂದಿಯನ್ನು ಬಂಧನ ಮಾಡಿರುವ ಸಿಸಿಬಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+