ಪಿಕ್ ಅಪ್ ವಾಹನ ಶಿರಾಡಿ ಘಾಟ್ ಕಂದಕಕ್ಕೆ ಉರುಳಿ ಇಬ್ಬರ ಸಾವು
ಮಂಗಳೂರು, ಫೆ.28: ಪಿಕ್ ಅಪ್ ವಾಹನವೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮವಾಗಿ ಇಬ್ಬರು ಮೃತಪಟ್ಟ ಘಟನೆ ಮಂಗಳವಾರ ಗುಂಡ್ಯ ಸಮೀಪದ ಶಿರಾಡಿ ಘಾಟ್ ನಲ್ಲಿ ನಡೆದಿದೆ.
ಪಿಕ್ ಅಪ್ ವಾಹನದಲ್ಲಿದ್ದ ವಿಕಾಸ್ (26) ಹಾಗೂ ಆಶಿಕ್(25) ಎಂಬುವರು ಮೃತಪಟ್ಟ ದುರ್ದೈವಿಗಳು. ಶಿರಾಡಿ ಸುರಂಗಮಾರ್ಗ ಸರ್ವೇ ನಡೆಸುತ್ತಿದ್ದ ವೇಳೆ ಪಿಕ್ ಅಪ್ ವಾಹನ ಸುಮಾರು 60 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ.

ಈ ಘಟನೆಯಲ್ಲಿ ಪರಿಣಾಮ ವಿಕಾಸ್ ಮತ್ತು ಆಶಿಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications