ಮಂಗಳೂರು ಬಂದರಿಗೆ ಬಂದ ಇಬ್ಬರು ಹೊಸ ಅತಿಥಿಗಳು

ವಿಶ್ವದ ಐಷಾರಾಮಿ ಹಡಗುಗಳಲ್ಲೊಂದಾಗಿರುವ ಎಂ.ವಿ. ನಾವೆಜಿನಾ ಸ್ಟಾರ್ ಮತ್ತು ಎಂ. ವಿ. ನಾಟಿಕಾ ಹಡಗುಗಳು ಮಂಗಳೂರು ಬಂದರಿಗೆ ಬುಧವಾರ ಆಗಮಿಸಿವೆ.

ಮಂಗಳೂರು, ಡಿಸೆಂಬರ್, 1: ಕರಾವಳಿಯ ನವ ಮಂಗಳೂರು ಬಂದರಿಗೆ ಬುಧವಾರ ಮೊದಲ ಬಾರಿಗೆ ಎರಡು ಐಷಾರಾಮಿ ಪ್ರಯಾಣಿಕರ ಹಡಗುಗಳು ಎನ್ಎಂಪಿಟಿಯಲ್ಲಿ ನಿಲುಗಡೆ ಆಗಿರುವುದು ವಿಶೇಷ. ಈ ಐಷಾರಾಮಿ ಹಡಗುಗಳು ಗೋವಾದಿಂದ ಮಂಗಳೂರು ಕಡಲ ತಡಿ ಸೇರಿವೆ.

ಎಂ.ವಿ. ನಾವೆಜಿನಾ ಸ್ಟಾರ್ ಮತ್ತು ಎಂ. ವಿ. ನಾಟಿಕಾ ಹಡಗುಗಳಿಗೆ ಎನ್ಎಂಪಿಟಿಯ ಮೂರು ಮತ್ತು ನಾಲ್ಕು ಬಂದರುಗಳಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಇಂತಹ ಅಪೂರ್ವ ಐಷಾರಾಮಿ ಹಡಗುಗಳು ನಗರಕ್ಕೆ ಕಾಲಿಟ್ಟಿದ್ದು ನಿಜಕ್ಕೂ ಸಂತಸದ ವಿಷಯ.

Two cruise vessels arrive at New Mangalore Port

2,064 ಪ್ರಯಾಣಿಕರು ಹಾಗೂ 1,084 ಹಡುಗು ಸಿಬ್ಬಂದಿಯನ್ನ ತಂದ 294 ಮೀಟರ್ ಉದ್ದದ ಎಂ.ವಿ. ನಾವೆಜಿನಾ ಸ್ಟಾರ್ ಹಾಗೂ 590 ಪ್ರಯಾಣಿಕರು ಹಾಗೂ 398 ಸಿಬ್ಬಂದಿಯನ್ನು ಹೊತ್ತು ತಂದ ಎಂ.ವಿ. ನಾಟಿಕಾ ಹಡಗುಗಳು ಎನ್ಎಂಪಿಟಿ ಬಂದರಿಗೆ ಬಂದಿವೆ. ಇದರ ಜತೆಗೆ ಮುಂಬೈನಿಂದ ವಿಮಾನದ ಮೂಲಕ ಮಂಗಳೂರಿಗೆ ಬಂದ 186 ಪ್ರವಾಸಿಗರು, ಹಡಗಿನ ಪ್ರಯಾಣಕ್ಕೆ ಸೇರಿಕೊಂಡರು.

ಈ ಎರಡು ಹಡಗಿನ ಪ್ರಯಾಣಿಕರಲ್ಲಿ ಹೆಚ್ಚಿನವರು ಅಮೆರಿಕ, ಇಂಗ್ಲೆಂಡ್, ಕೆನಡಾ ಹಾಗೂ ಬ್ರೆಜಿಲ್ ದೇಶಗಳ ಪ್ರವಾಸಿಗರು. ಕರಾವಳಿಯ ಪ್ರಕೃತಿ ಸೌಂದರ್ಯವನ್ನು ಸವಿಯಲು ಬಹಳ ದೂರದಿಂದ ಇಲ್ಲಿಗೆ ಆಗಮಿಸಿದ್ದಾರೆ.

ಈ ಪ್ರವಾಸಿಗರು ಮೂಡಬಿದ್ರೆಯ ಸಾವಿರ ಕಂಬ ಬಸದಿ, ಗೊಮ್ಮಟೇಶ್ವರ ಮೂರ್ತಿ, ಗೋಕರ್ಣನಾಥ ದೇವಾಲಯ, ಸೈಂಟ್ ಅಲೋಶಿಯಸ್ ಚಾಪೆಲ್ ಚರ್ಚ್‌‌, ಕದ್ರಿ ದೇವಸ್ಥಾನ, ಗೇರು ಸಂಸ್ಕರಣಾ ಘಟಕ, ನಗರದ ಮಾರುಕಟ್ಟೆ ಪ್ರದೇಶಗಳಿಗೆ ಭೇಟಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+