ಪ್ರಯಾಣಿಕರ ಬೋಟ್‌ಗೆ ಟ್ರಾಲ್ ಬೋಟ್ ಢಿಕ್ಕಿ ಕೆಲವರಿಗೆ ಗಾಯ
ಮಂಗಳೂರು, ಫೆಬ್ರವರಿ 06: ಪ್ರಯಾಣಿಕರಿದ್ದ ದೋಣಿಗೆ ಟ್ರಾಲ್ ಬೋಟ್ ಒಂದು ಡಿಕ್ಕಿ ಹೊಡೆದು ಹಲವರಿಗೆ ಗಾಯವಾಗಿದೆ.
ಮಂಗಳೂರಿನ ತೋಟಬೆಂಗ್ರೆ ದ್ವೀಪ ಪ್ರದೇಶ ಮತ್ತು ಬಂದರು ನಡುವೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಬೋಟ್‌ಗೆ ಟ್ರಾಲ್ ಬೋಟ್ ಡಿಕ್ಕಿ ಹೊಡೆದಿದೆ. ಆದರೆ ಆಗಬಹುದಾಗಿದ್ದ ಭಾರಿ ಅನಾಹುತ ತಪ್ಪಿ ಕೆಲವರಷ್ಟೆ ಗಾಯಗೊಂಡಿದ್ದಾರೆ.

ಪ್ರಯಾಣಿಕರನ್ನು ಬೋಟ್‌ಗೆ ಹತ್ತಿಸುವಾಗ ಟ್ರಾಲ್‌ಬೋಟ್ 'ಸಾಹಿಲ್ ಹಸನ್' ಪ್ರಯಾಣಿಕರ ಬೋಟ್‌ಗೆ ಡಿಕ್ಕಿಯಾಗಿದೆ. ಢಿಕ್ಕಿ ಸಮಯ ಆಯ ತಪ್ಪಿ ಮಹಿಳೆಯೊಬ್ಬರು ನೀರಿಗೆ ಬದಿದ್ದಾರೆ ಅವರನ್ನು ರಕ್ಷಿಸಲಾಗಿದೆ.

ಪ್ರಯಾಣಿಕರ ಬೋಟಿನಲ್ಲಿದ್ದ ಹಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಢಿಕ್ಕಿ ರಭಸಕ್ಕೆ ಪ್ರಯಾಣಿಕರ ಬೋಟ್ ಜಖಂ ಆಗಿದೆ. ಎರಡೂ ಬೋಟ್‌ಗಳಿಗೆ ಹಾನಿ ಆಗಿದ್ದು, ಪ್ರಯಾಣಿಕರ ಬೋಟ್ ಭಾಗಷಃ ಮುರಿದಿದೆ.












Click it and Unblock the Notifications