ತುಳುಭಾಷೆ, ಸಂಸ್ಕೃತಿಯ ಸಂಶೋಧಕ ಪ್ರೊ.ಪೀಟರ್ ಜೆ ಕ್ಲಾಸ್ ಇನ್ನಿಲ್ಲ

ಮಂಗಳೂರು, ಜನವರಿ 01: ತುಳು ಭಾಷೆ, ಸಂಸ್ಕೃತಿ, ಪರಂಪರೆ, ಆಚರಣೆಗಳ ಬಗ್ಗೆ ಅಪಾರ ಅಸಕ್ತಿ ಹೊಂದಿ ಸಂಶೋಧನೆಯಲ್ಲಿ ತೊಡಗಿದ್ದ ಅಮೆರಿಕದ ಕ್ಯಾಲಿಫೋರ್ನಿಯಾ ಸ್ಟೇಟ್‌ ಯೂನಿವರ್ಸಿಟಿ ಹೇವಾರ್ಡ್‌ನ ಮಾನವ ವಿಜ್ಞಾನ ಪ್ರಾಧ್ಯಾಪಕ ಹಾಗೂ ಜಾನಪದ ವಿದ್ವಾಂಸ ಪ್ರೊ ಪೀಟರ್ ಜೆ ಕ್ಲಾಸ್ (76) ನಿಧನರಾಗಿದ್ದಾರೆ.

ತುಳುನಾಡಿನಲ್ಲಿ ಮೂರೂವರೆ ದಶಕಗಳ ಕಾಲ ಜನರೊಂದಿಗೆ ಬೆರೆತು ತುಳು ಭಾಷೆಯನ್ನು ಕಲಿತು, ತುಳು ಪಾಡ್ದನಗಳ ಬಗ್ಗೆ ಅನೇಕ ಲೇಖನ ಹಾಗೂ ಪುಸ್ತಕಗಳನ್ನು ಪ್ರೊ. ಪೀಟರ್ ಜೆ ಕ್ಲಾಸ್ ಪ್ರಕಟಿಸಿದ್ದಾರೆ.

ಪ್ರೊ ಪೀಟರ್ ಜೆ ಕ್ಲಾಸ್ 1967ರಲ್ಲಿ ಸಂಶೋಧಕರಾಗಿ ಭಾರತದ ಪರ್ಯಟನೆ ಕೈಗೊಂಡಿದ್ದರು. ಈ ನಡುವೆ ತುಳುನಾಡಿನ ಜನರ ಜೀವನಕ್ರಮ ಹಾಗೂ ಪ್ರಕೃತಿಯ ಚಿತ್ರಣ ಅವರನ್ನು ಆಕರ್ಷಿಸಿತು. ಈ ಹಿನ್ನೆಲೆಯಲ್ಲಿ ಸಂಸಾರ ಸಮೇತ ಪೀಟರ್ ತುಳು ನಾಡಿಗೆ ಬಂದಿದ್ದರು. ತಮ್ಮೊಂದಿಗೆ ಸಣ್ಣ ಟೇಪ್‌, ಫೋಟೋ ರೀಲ್ ಕ್ಯಾಮೆರಾ, ಮೂಕಿ ಚಿತ್ರಣದ ಯಂತ್ರವನ್ನು ತಂದಿದ್ದರು.

Tulu researcher Prof Peter J Claus passes away

ಜನಪದೀಯ ಶೋಧನೆ ನಡೆಸುತ್ತ ಬಜಪೆ ಸಮೀಪದ ಕಿನ್ನಿಕಂಬಳದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ| ಸಂತೋಷ್‌ ಹೆಗ್ಡೆ ಅವರ ತಂದೆ ಕೆ.ಎಸ್‌. ಹೆಗ್ಡೆ ಅವರ ಮನೆಯಲ್ಲಿ ಪ್ರೊ ಪೀಟರ್ ಜೆ ಕ್ಲಾಸ್ ಆಶ್ರಯ ಪಡೆದಿದ್ದರು.

ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಡಿಸೆಂಬರ್ 28ರಂದು ಕ್ಯಾಲಿಫೋರ್ನಿಯಾದಲ್ಲಿ ನಿಧನ ಹೊಂದಿದ್ದಾರೆ. ತುಳು ಸಂಪನ್ಮೂಲ ಹಾಗೂ ಕರಾವಳಿ ಕರ್ನಾಟಕದ ಜನಜೀವನದ ಬಗ್ಗೆ ವಿಶೇಷವಾಗಿ ಅಧ್ಯಯನ ನಡೆಸಿದ್ದ ಅವರು 1970ರಲ್ಲಿ ಡ್ನೂಕ್ ವಿವಿಯಿಂದ ಡಾಕ್ಟರೇಟ್‌ ಪಡೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+