ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ ಕಡ್ಡಾಯ ಖಂಡಿಸಿ ತುಳುಭಾಷಾ ಸಂರಕ್ಷಣಾ ಸಮಿತಿ ಪ್ರತಿಭಟನೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 29: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕದ ಮೂಲಕ ರಾಜ್ಯದಲ್ಲಿ ಕನ್ನಡ ಕಡ್ಡಾಯ ಮಾಡುವ ಮೂಲಕ ತುಳುನಾಡಿನಲ್ಲಿ ಮಾತೃಭಾಷೆಯನ್ನು ಕಡೆಗಣನೆ ಮಾಡಲಾಗುತ್ತಿದೆ ಎಂದು ಸರಕಾರದ ನೀತಿಯನ್ನು ಖಂಡಿಸಿ ಮಂಗಳೂರಿನಲ್ಲಿ ತುಳುಭಾಷಾ ಸಂರಕ್ಷಣಾ ಸಮಿತಿ ನಗರದ ಕ್ಲಾಕ್ ಟವರ್ ಮುಂಭಾಗ ಪ್ರತಿಭಟನೆ ನಡೆಸಿದೆ.

ಕರ್ನಾಟಕದಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯ ಮಾಡಲು ರಾಜ್ಯ ಸರ್ಕಾರ ಕಾಯ್ದೆ'ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ'ವನ್ನು ಜಾರಿಗೆ ತಂದಿದ್ದು, ವಿಧಾನಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ವಿದೇಯಕ ಮಂಡಿಸಿದ್ದರು. ಇದೀಗ ಮಂಗಳೂರಿನ ಬಸ್‌ಗಳಲ್ಲಿ ಕನ್ನಡ ನಾಮ ಫಲಕ ಕಡ್ಡಾಯಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಈ ಎರಡು ಆದೇಶವನ್ನು ವಿರೋಧಿಸಿ ತುಳು ಭಾಷಾ ಸಂರಕ್ಷಣಾ ಸಮಿತಿಯ ಕಾರ್ಯಕರ್ತರು, ರಾಜ್ಯ ಸರಕಾರದ ವಿರುದ್ದ, ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ಸುನೀಲ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಳಿನ್‌ ವಿಕೃತ ಖುಷಿ ಪಡೆಯುವುದರಲ್ಲಿ ಹೆಸರುವಾಸಿ; ಮಂಗಳೂರಿನಲ್ಲಿ ಖಾದರ್ ವಾಗ್ದಾಳಿ ನಳಿನ್‌ ವಿಕೃತ ಖುಷಿ ಪಡೆಯುವುದರಲ್ಲಿ ಹೆಸರುವಾಸಿ; ಮಂಗಳೂರಿನಲ್ಲಿ ಖಾದರ್ ವಾಗ್ದಾಳಿ

ತುಳು ಭಾಷೆಗೆ ಎರಡೂವರೆ ಸಾವಿರ ವರ್ಷಗಳ‌ ಹಿಂದಿನ ಇತಿಹಾಸವಿದೆ. ಹಲವು ಪ್ರಸಿದ್ಧ ರಾಜವಂಶಸ್ಥರ ಕಾಲಾವಧಿಯಲ್ಲಿ ತುಳು ಭಾಷೆಯೂ ಸಂವಹನ ಭಾಷೆಯಾಗಿತ್ತು ಎಂಬುವುದರ ಕುರಿತು ಐತಿಹ್ಯವಿದೆ. ಆದರೂ ತುಳು ಭಾಷೆಗೆ ಅಧಿಕೃತ ರಾಜ್ಯ ಭಾಷೆಯ ಮಾನ್ಯತೆ ನೀಡದೆ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗ ಸಮಸ್ತ ತುಳುವರ ಮಾತೃ ಭಾಷೆಯಾದ ತುಳುವಿಗೆ ಸರಕಾರ ಈ ಮೂಲಕ ಅಪಮಾನ ಮಾಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಕನ್ನಡವೇ ನಿತ್ಯ ಆದರೆ ನಮಗೆ ತುಳು ಅಗತ್ಯ

ಕನ್ನಡವೇ ನಿತ್ಯ ಆದರೆ ನಮಗೆ ತುಳು ಅಗತ್ಯ

ಪ್ರತಿಭಟನೆಯ ಸಂದರ್ಭದಲ್ಲಿ ಸರಕಾರದ ಆದೇಶವನ್ನು ವಿರೋಧಿಸಿ ಪ್ರತಿಭಟನಾಕಾರರು ಬಸ್ ಅನ್ನು ತಡೆದು ತುಳುಲಿಪಿಯ ಸ್ಟಿಕ್ಕರ್ ಅಂಟಿಸಿದ ಪ್ರತಿಭಟನಾಕಾರರು 'ಕನ್ನಡ ಕಡ್ಡಾಯ ತುಳು ಭಾಷೆಗೆ ಅನ್ಯಾಯ', 'ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಿಗೆ ಧಿಕ್ಕಾರ', ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಆದರೆ ನಮಗೆ ತುಳು ಅಗತ್ಯ' ಎಂಬಂತಹ ಪೋಸ್ಟರ್ ಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

 ಅಧಿಕೃತ ರಾಜ್ಯ ಭಾಷೆಯನ್ನಾಗಿ ಮಾಡಲು ಒತ್ತಾಯ

ಅಧಿಕೃತ ರಾಜ್ಯ ಭಾಷೆಯನ್ನಾಗಿ ಮಾಡಲು ಒತ್ತಾಯ

ಈ ವೇಳೆ ತುಳು ಭಾಷಾ ಸಂರಕ್ಷಣಾ ಸಮಿತಿಯ ಮುಖಂಡ ವಿಕಾಸ್ ಮಾತನಾಡಿ, "ತುಳುಭಾಷೆ ಒಂದು ಸಮುದಾಯದ ಒಂದು ಜಾತಿಯ ಭಾಷೆಯಲ್ಲ. ಇದೊಂದು ಪ್ರದೇಶದ ಭಾಷೆಯಾಗಿದೆ. ಸಾವಿರ ವರ್ಷಕ್ಕಿಂತ ಅಧಿಕ ವರ್ಷಗಳಲ್ಲಿ ಬಳಕೆಯಲ್ಲಿರುವ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರಕುವ ಎಲ್ಲಾ ಅರ್ಹತೆಗಳಿರುತ್ತದೆ‌. ಆದರೆ ಸರಕಾರ ಇಂದು ತುಳುಭಾಷೆಗೆ ರಾಜ್ಯಭಾಷೆಯ ಸ್ಥಾನಮಾನವನ್ನು ಇನ್ನೂ ಕೊಟ್ಟಿಲ್ಲ. ಇದರಿಂದ ಕನಿಷ್ಠ ಪಕ್ಷ ಗ್ರಾಮಪಂಚಾಯತ್‌ನಲ್ಲೂ ತುಳು ಭಾಷೆಯಲ್ಲಿ ಮಾತನಾಡುವ ಅಧಿಕಾರವಿಲ್ಲ‌. ಆದ್ದರಿಂದ ಡಬ್ಬಲ್ ಇಂಜಿನ್ ಸರಕಾರ ತುಳುಭಾಷೆಯನ್ನು ತಮ್ಮ ಅಧಿಕಾರವನ್ನು ಬಳಸಿಕೊಂಡು ಅಧಿಕೃತ ರಾಜ್ಯ ಭಾಷೆಯನ್ನಾಗಿ ಮಾಡಲಿ," ಎಂದು ಹೇಳಿದ್ದಾರೆ.

 ತುಳುನಾಡಿನಲ್ಲಿ ತುಳುವೇ ಪ್ರಧಾನ ಭಾಷೆ

ತುಳುನಾಡಿನಲ್ಲಿ ತುಳುವೇ ಪ್ರಧಾನ ಭಾಷೆ

ಇನ್ನು ತುಳುಪರ ಹೋರಾಟಗಾರ ಸುದರ್ಶನ್ ಸುರತ್ಕಲ್ ಮಾತನಾಡಿ, ಸರಕಾರ ತುಳುಭಾಷೆಯ ವಿರುದ್ಧದ ಅಸಡ್ಡೆಯನ್ನು ಮುಂದುವರಿಸಿದೆ. ತುಳುನಾಡಿನಲ್ಲಿ ತುಳುವೇ ಪ್ರಧಾನ ಭಾಷೆ. ತುಳುನಾಡಿನ ಜನರು ಮಾತೃಭಾಷೆಯನ್ನು ತುಳು ಎಂದು ಒಪ್ಪಿಕೊಂಡ ಸಂದರ್ಭದಲ್ಲಿ ಸರಕಾರ ಜನರ ಭಾವನೆಗಳನ್ನು ದಮನಿಸಲು ಮುಂದಾಗಿದೆ. ಜಿಲ್ಲಾಧಿಕಾರಿ ಯವರು ಕನ್ನಡ ಕಡ್ಡಾಯ ಗೊಳಿಸಿ ಆದೇಶ ಮಾಡಿದ್ದು, ಈ ಆದೇಶದ ಬಗ್ಗೆ ಸಮಸ್ತ ತುಳುನಾಡಿನ ಜನರು ಹೋರಾಟ ಮಾಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

 ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಶಾಸಕ

ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಶಾಸಕ

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ವೇದವ್ಯಾಸ್ ಕಾಮತ್ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು. ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ತುಳುಭಾಷೆಗೆ ಸ್ಥಾನ ಮಾನ ತರುವ ಬಗ್ಗೆ ಹೇಳಿದ್ದರು. ಆದರೆ ಇಲ್ಲಿಯವರೆಗೆ ಅವರು ತಾಂತ್ರಿಕ ದೋಷ ಎಂದು ಹೇಳುತ್ತಾ ಬರುತ್ತಿದ್ದಾರೆ. ಆದರೆ ಮೊನ್ನೆ, ಯಾವುದೇ ಭಾಷೆಗೆ ಅಧಿಕೃತ ಭಾಷೆ ಎಂದು ಸ್ಥಾನ ಮಾನ ಕೊಡಲು ಸಾಧ್ಯವಿಲ್ಲ, ಇಲ್ಲಿ ಕನ್ನಡ ಭಾಷೆ ಮಾತ್ರ ಅಧಿಕೃತ ಎಂದಿದ್ದಾರೆ ಎಂದು ಕಿಡಿಕಾರಿದರು.

ಪ್ರತಿಭಟನಾಕಾರರ ಮನವಿ ಆಲಿಸಿದ ಶಾಸಕ ವೇದವ್ಯಾಸ್ ಕಾಮತ್, ಈ ಬಗ್ಗೆ ಸಚಿವ ಸುನೀಲ್ ಕುಮಾರ್ ಜೊತೆಗೆ ಚರ್ಚಿಸಿ, ಪ್ರಾಮಾಣಿಕವಾಗಿ ಸಮಸ್ಯೆ ಬಗೆ ಹರಿಸಲು ಪ್ರಯತ್ನಿಸುತ್ತೇವೆ. ಹಂತ ಹಂತವಾಗಿ ಸಮಸ್ಯೆಗಳನ್ನು ಬಗೆ ಹರಿಸುವ ಭರವಸೆ ನೀಡಿದರು. ತಾವೂ ತಮ್ಮಿಂದಾಗುವ ಎಲ್ಲಾ ಪ್ರಯತ್ನವನ್ನು ಮಾಡುವುದಾಗಿ ಭರವಸೆ ನೀಡಿದರು

English summary
Tulu Language Samraksha Samiti protested in front of the Clock Tower in Mangaluru, condemning the government's policy of the Kannada language being compulsory in Karnataka,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X