ಪಣಂಬೂರು ಬೀಚ್‌ನಲ್ಲಿ 11 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ

ಮಂಗಳೂರು, ಜೂ. 09 : ಪಣಂಬೂರು ಬೀಚ್‌ನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರಿನಿಂದ ಸುಮಾರು 11.7 ಲಕ್ಷ ರೂ. ಮೌಲ್ಯದ 520 ಗ್ರಾಂ ಚಿನ್ನಾಭರಣವನ್ನು ಕಳವು ಮಾಡಲಾಗಿದೆ. ಬೀಚ್‌ಗೆ ಆಗಮಿಸಿದ್ದ ಕನಕಪುರ ಮೂಲದ ಹಾರೋಹಳ್ಳಿಯ ಲಕ್ಷ್ಮೀ ಎಂಬುವವರು ಈ ಕುರಿತು ಪಣಂಬೂರು ಠಾಣೆಗೆ ದೂರು ನೀಡಿದ್ದಾರೆ.

ಲಕ್ಷ್ಮೀ ಎಂಬುವವರು ಬೆಂಗಳೂರಿನಲ್ಲಿ ಗೃಹ ರಕ್ಷಕ ದಳದ ಉದ್ಯೋಗಿಯಾಗಿದ್ದಾರೆ. ಭಾನುವಾರ ಪಣಂಬೂರಿಗೆ ಆಗಮಿಸಿದ್ದ ಅವರು ಕ್ವಾಲಿಸ್ ಕಾರಿನಲ್ಲಿ ಚಿನ್ನಾಭರಣಗಳನ್ನು ಕಾರಿನಲ್ಲಿಟ್ಟು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೀಚ್‌ಗೆ ಹೋಗಿದ್ದರು. [ಚಿನ್ನ ಕಳ್ಳ ಸಾಗಣೆಯ ಹೊಸ ಮಾರ್ಗಗಳು ಯಾವವು!]

Panambur

ಸಂಜೆ 5 ಗಂಟೆ ಸುಮಾರಿಗೆ ವಾಪಸ್ ಬಂದು ನೋಡಿದಾಗ ಕಾರಿನ ಗಾಜು ಒಡೆಯಲಾಗಿತ್ತು. ಕಾರಿನಲ್ಲಿದ ನೆಕ್ಲೇಸ್, ಬಳೆ ಸೇರಿದಂತೆ ಸುಮಾರು 520 ಗ್ರಾಂ ಚಿನ್ನಾಭರಣವನ್ನು ಕಳವು ಮಾಡಲಾಗಿತ್ತು. ಈ ಕುರಿತು ಲಕ್ಷ್ಮೀ ಅವರು ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. [ಮಂಗಳೂರು : ದುಬೈನಿಂದ ಬಂದಿತ್ತು 16 ಚಿನ್ನದ ಬಿಸ್ಕೆಟ್]

ಸಿಸಿ ಕ್ಯಾಮರಾ ಇದ್ದರೂ ಉಪಯೋಗವಿಲ್ಲ : ಸೋಮವಾರ ಬೆಳಗ್ಗೆ ಪಾರ್ಕಿಂಗ್ ಲಾಟ್‌ಗೆ ಪಣಂಬೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಪಾರ್ಕಿಂಗ್ ಸ್ಥಳದಲ್ಲಿ ಪೊಲೀಸರು ಸಿಸಿಟಿವಿ ಆಳವಡಿಸಿದ್ದು, ಅದಕ್ಕೆ ಅಡ್ಡಲಾಗಿ ಜಾಹೀರಾತು ಫಲಕ ಅಳವಡಿಸಲಾಗಿದೆ.

ಕೂಡಲೇ ಜಾಹೀರಾತು ಫಲಕವನ್ನು ತೆರವುಗೊಳಿಸಬೇಕು ಎಂದು ಪೊಲೀಸರು ಸೂಚನೆ ನೀಡಿದ್ದಾರೆ. ಕಳೆದ ಒಂದು ತಿಂಗಳಿನಲ್ಲಿ ನಡೆದ ಮೂರನೇ ಕಳವು ಪ್ರಕರಣವಿದಾಗಿದ್ದು, ಇತರ ಎರಡು ಪ್ರಕರಣಗಳಲ್ಲಿ ಲಿಖಿತ ದೂರು ಸಲ್ಲಿಕೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+