ಒಂದಲ್ಲ..ಎರಡಲ್ಲ..ಬರೋಬ್ಬರಿ 80 ಪ್ರಕರಣ: ಕೊನೆಗೂ 'ಇತ್ತೆ ಬರ್ಪೆ' ಕುಖ್ಯಾತಿ ಅಬೂಬಕರ್ ಬಂಧನ
ಮಂಗಳೂರು, ಡಿಸೆಂಬರ್ 07: ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಸುಮಾರು ಐದು ಜಿಲ್ಲೆಗಳಲ್ಲಿ ಬರೋಬ್ಬರಿ 80ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಅಬೂಬಕ್ಕರ್ ಎಂಬಾತನನ್ನು ಬಜಪೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅಬೂಬಕ್ಕರ್ ಇತ್ತೆ ಬರ್ಪೆ ಅಬೂಬಕ್ಕರ್ ಎಂದೇ ಕುಖ್ಯಾತಿ ಪಡೆದಿದ್ದ
ಇತ್ತೆ ಬರ್ಪೆ ಅಂದರೆ ಈಗ ಬರುವೆ ಎಂದರ್ಥ. ಈತ ತನ್ನ ಎಲ್ಲಾ ಪರಿಚಯಿಸ್ಥರಲ್ಲಿ ಇತ್ತೆ ಬರ್ಪೆ ಅಂತಾನೇ ಹೇಳುತ್ತಿದ್ದ. ಪದೇ ಪದೇ ಇತ್ತೆ ಬರ್ಪೆ ಅಂತಾ ಹೇಳುತ್ತಿದ್ದರಿಂದ ಅಬೂಬಕ್ಕರ್ ಇತ್ತೆ ಬರ್ಪೆ ಅಬೂಬಕ್ಕರ್ ಅಂತಾನೇ ಪ್ರಸಿದ್ಧಿಯಾಗಿದ್ದ. ಜನ ಕರೆಯುವ ಅಡ್ಡ ಹೆಸರಿನಿಂದ ಅಬೂಬಕ್ಕರ್ ತುಂಬಾ ಖುಷಿಯಾಗುತ್ತಿದ್ದ.

ಅಲ್ಲದೇ ತನ್ನ ದ್ವಿಚಕ್ರ ವಾಹನಕ್ಕೆ ಇತ್ತೆ ಬರ್ಪೆ ಅಂತಾ ಸ್ಟಿಕ್ಕರ್ ಹಾಕಿಸಿಕೊಂಡಿದ್ದ. ಹೀಗಾಗಿ ಜನ ಅವನನ್ನು ಕಂಡೊಡನೇ ಇತ್ತೆ ಬರ್ಪೆ ಅಬೂಬಕ್ಕರ್ ಅಂತಾನೇ ಗುರುತಿಸುತ್ತಿದ್ದರು. ಇದೆಲ್ಲಾ ಒಂದೆಡೆಯಾದರೆ ಅಬೂಬಕ್ಕರ್ ಮೇಲೆ ಸುಮಾರು 80 ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದವು.
ಮಂಗಳೂರು, ಬಂಟ್ವಾಳ, ಪುತ್ತೂರು, ಮೂಡಬಿದಿರೆ, ಸುರತ್ಕಲ್, ಕಾರ್ಕಳ, ಉಡುಪಿ ಹಾಗೂ ಚಿಕ್ಕಮಗಳೂರು ಸೇರಿದಂತೆ ನಾನಾ ಕಡೆಗಳಲ್ಲಿ ಇತ್ತೆ ಬರ್ಪೆ ವಿರುದ್ಧ ಎಂಭತ್ತಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆ.
ನವೆಂಬರ್22ರಂದು ಪುತ್ತೂರು ತಾಲೂಕಿನ ಕೆದಿಲ ಗ್ರಾಮದ ರಮ್ಲಾ ಎಂಬುವವರ ಮನೆಯಿಂದ 2 ಲಕ್ಷ ರೂಪಾಯಿ ಮತ್ತು ಉಮ್ಮರ್ ಎಂಬುವವರ ಮನೆಯಿಂದ ಸ್ಕೂಟರ್ ಕಳವಾಗಿತ್ತು. ಈ ಪ್ರಕರಣವನ್ನು ಭೇಧಿಸಿದ ಪುತ್ತೂರು ಪೊಲೀಸರು ಆರೋಪಿ ಅಬೂಬಕ್ಕರ್‌ನನ್ನು ಬಂಧಿಸಿದ್ದಾರೆ.
ಅಬೂಬಕ್ಕರ್ ಪ್ರಸ್ತುತ ಚಿಕ್ಕಮಗಳೂರು ಜಿಲ್ಲೆಯ ಉಪ್ಪಳ್ಳಿ ಎಂಬಲ್ಲಿ ವಾಸಿಸುತ್ತಿದ್ದು ಈತನ ಮೇಲೆ ಅತೀ ಹೆಚ್ಚು ಕಳ್ಳತನ ಪ್ರಕರಣವೇ ಜಾಸ್ತಿಯಾಗಿತ್ತು. ಸದ್ಯ ಈತ ವಿಟ್ಲ ಸಮೀಪದ ಕಡಂಬು ಎಂಬಲ್ಲಿ ವಾಸವಾಗಿದ್ದ ಎನ್ನಲಾಗಿದೆ.

ಅನಧಿಕೃತ ಕ್ಲಿನಿಕ್‌ಗಲಿಗೆ ಬಿಸಿ ಮುಟ್ಟಿಸಿದ ಅಧಿಕಾರಿಗಳು
ಮಂಗಳೂರು ನಗರದಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕ್ಲಿನಿಕ್, ಪ್ರಯೋಗಾಲಯಗಳ ವಿರುದ್ಧ ದಕ್ಷಿಣ ಕನ್ನಡ ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಕೆಲವು ಕ್ಲಿನಿಕ್‌ಗಳಿಗೆ ಬೀಗ ಹಾಕಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೆ.ಪಿ.ಎಂ.ಇ.ಎ ಕಾಯ್ದೆ-2017ರ ಅಡಿಯಲ್ಲಿ ಖಾಸಗಿ ಸಂಸ್ಥೆ, ಕ್ಲಿನಿಕ್‌ಗಳು, ಲ್ಯಾಬೋರೇಟರಿಗಳು ನೋಂದಾವಣೆಯಾಗದೆ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಎಚ್ಚೆತ್ತುಕೊಂಡ ಅಧಿಕಾರಿಗಳು ಬುಧವಾರ ದಿಢೀರ್ ಕಾರ್ಯಾಚರಣೆಗಳಿದಿದ್ದು, ಏಕಾಏಕಿ ಕ್ಲಿನಿಕ್‌ಗಳ ಮೇಲೆ ದಾಳಿ ಮಾಡಿದ್ದಾರೆ. ದಾಖಲೆಗಳ ಪರಿಶೀಲನೆ ಬಳಿಕ ಮೂಡುಶೆಡ್ಡೆ, ವಾಮಂಜೂರು ವ್ಯಾಪ್ತಿಯ ಕ್ಲಿನಿಕ್ ಹಾಗೂ ಲ್ಯಾಬೋರೇಟರಿ ಮತ್ತು ಹಂಪನಕಟ್ಟೆಯಲ್ಲಿನ ಒಂದು ಕ್ಲಿನಿಕ್‌ಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.












Click it and Unblock the Notifications