ಮುತ್ತೂಟ್ ಫೈನಾನ್ಸ್ ದರೋಡೆ ಯತ್ನ, ಮಂಗ್ಳೂರಲ್ಲಿ 3 ಬಂಧನ

ಮಂಗಳೂರು, ಡಿಸೆಂಬರ್.19: ಕಳೆದ ಕೆಲವು ದಿನಗಳ ಹಿಂದೆ ಮುತ್ತೂಟ್ ಫೈನಾನ್ಸ್ ನಲ್ಲಿ ದರೋಡೆಗೆ ಯತ್ನಿಸಿದ್ದ ಮೂರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದು, 3,40,000 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪಿರಿಯಾಪಟ್ಟಣದ ಟಿ. ನರಸೀಪುರ ನಿವಾಸಿ ಅನಿಲ್ ಕುಮಾರ್ ವೈ.ಎಂ. ಯಾನೆ ಅಹರಾನ್ (29), ಹಾಸನ ಸಕಲೇಶಪುರದ ಬ್ಯಾಕರವಹಳ್ಳಿಯ ಪ್ರಸಾದ್ (21), ಮೈಸೂರು ಪಿರಿಯಪಟ್ಟಣ ಕುಂದನಹಳ್ಳಿಯ ಹರೀಶ್ (28) ಬಂಧಿತ ಆರೋಪಿಗಳು.[ಬಸ್ ಸಿಗಲ್ಲ ಎಂದು ಕಂಡ ಕಂಡ ಕ್ಯಾಬ್ ಏರಿದ್ರೇ ಅಷ್ಟೇ!]

Muthoot Finance robbery

ಈ ಮೂವರು ಮಾರುಕಟ್ಟೆಯಲ್ಲಿ ಬಂಗಾರಕ್ಕೆ ಇರುವ ಬೆಲೆ ಕೇಳುವ ನೆಪದಲ್ಲಿ ದಿಸೆಂಬರ್ 5ರ ಶನಿವಾರ ಫೈನಾನ್ಸ್ ಗೆ ಬಂದಿದ್ದರು. ಇವರಲ್ಲಿ ಒಬ್ಬ ಪಿಸ್ತೂಲ್ ತೋರಿಸಿ ಬಂಗಾರ ಹಾಗೂ ಹಣ ನೀಡುವಂತೆ ಕೇಳಿದ್ದಾನೆ.

ಆಗ ಕಚೇರಿಯಲ್ಲಿದ್ದ ಮಹಿಳಾ ಸಿಬ್ಬಂದಿ ಸೈರನ್ ಬಟನ್ ಒತ್ತಿದ್ದಾರೆ. ಸೈರನ್ ಶಬ್ಧ ಕೇಳಿ ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ಮುತ್ತೂಟ್ ಮಿನಿ ಫೈನಾನ್ಸ್ ಕಚೇರಿ ಅಧಿಕಾರಿ ಕೆ. ಮನೋಹರ ಶೆಟ್ಟಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.[ಉಬರ್ ವಿರುದ್ಧ ತೊಡೆತಟ್ಟಿದ ಒಲಾ ತಂತ್ರ ಕೇಳಿದ್ರೇ ದಂಗು ಬೀಳ್ತಿರಾ!]

ಆರೋಪಿಗಳು ಪರಾರಿಯಾದ ಕಾರಿನ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು, ಆರೋಪಿಗಳ ಬಳಿ ಇದ್ದ ಕಾರಿನ ಬಗ್ಗೆ ವಿವಿಧೆಡೆ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳ ಪೈಕಿ ಅನಿಲ್ ಕುಮಾರ್ ಈ ಹಿಂದೆ ಮಂಗಳೂರು ನಗರ ಹಾಗೂ ವಿವಿಧ ಕಡೆಗಳಲ್ಲಿ ಗೃಹಪಯೋಗಿ ವಸ್ತುಗಳನ್ನು ಲೈನ್ ಸೇಲ್ ಮಾಡುತ್ತಿದ್ದ. ಉಳಿದವರು ಅನಿಲ್ ಕುಮಾರ್‌ನ ಸ್ನೇಹಿತರಾಗಿದ್ದು, ಮಂಗಳೂರಿನಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದರು.[ಮೊಬೈಲ್ ಕರೆಗೆ ಓಗೊಟ್ಟು ಬ್ಯಾಂಕ್ ಮಾಹಿತಿ ಕೊಟ್ಟೀರಾ ಜೋಕೆ!]

ಶ್ರೀಮಂತರಾಗುವ ಆಸೆ ಹೊಂದಿದ್ದ ಇವರು ಯಾವುದಾದರೂ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ದರೋಡೆ ಮಾಡುವ ಸಂಚು ರೂಪಿಸಿ ಈ ಕೃತ್ಯ ಎಸಗಿದ್ದಾರೆ. ಆರೋಪಿಗಳಿಂದ 3 ಏರ್‌ಗನ್, 2 ಚೂರಿ, 3 ಮೊಬೈಲ್, ಹಗ್ಗ, ಒಮ್ನಿ ಕಾರು ಸಹಿತ ಒಟ್ಟು 3,40,000 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+