ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇಶಕ್ಕಾಗಿ ಮೋದಿ : ಮಂಗಳೂರಿನಲ್ಲಿ ನಮೋ ಬ್ರಿಗೇಡ್ ಬದಲಿಗೆ ಟೀಂ ಮೋದಿ!

|
Google Oneindia Kannada News

ಮಂಗಳೂರು, ಡಿಸೆಂಬರ್ 15 : ಲೋಕಸಭಾ ಚುನಾವಣೆ ಹತ್ತಿರ ವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದ 'ನಮೋ ಬ್ರಿಗೇಡ್' ಹೊಸರೂಪದಲ್ಲಿ ಚಾಲನೆಗೆ ಬಂದಿದೆ. ಈ ಬಾರಿ 'ನಮೋ ಬ್ರಿಗೇಡ್' ಬದಲು ಈ ಬಾರಿ 'ಟೀಂ ಮೋದಿ' ರಸ್ತೆಗೆ ಇಳಿಯಲಿದೆ.

ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಯುವಕರ ಪಡೆ ಮತ್ತೆ ಸಜ್ಜಾಗುತ್ತಿದೆ. ಈ ಬಾರಿ ಮೋದಿಗಾಗಿ ತರುಣರ ತಂಡ 'ಟೀಂ ಮೋದಿ' ಹೆಸರಿನಲ್ಲಿ ರಸ್ತೆ ಗಿಳಿಯಲಿದೆ. ಕಳೆದ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಪಾಳಯದಲ್ಲಿ ಸೋಲಿನ ಪರಾಮರ್ಶೆ ಆರಂಭವಾಗಿದೆ. ಮುಂದಿನ ಚುನಾವಣೆಗೆ ಕಾರ್ಯತಂತ್ರವನ್ನು ಬದಲಿಸಲು ಚಿಂತನೆ ನಡೆಸಲಾಗಿದೆ. ಈ ನಡುವೆ ಯುದ್ಧ ವಿಮಾನದ ರಫೇಲ್ ಡೀಲ್ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿ ವಿಪಕ್ಷಗಳಿಗೆ ಚಾಟಿ ಏಟು ಬೀಸಿದೆ. ಇದು ಟೀಂ ಮೋದಿಯ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ.

ಬಿಜೆಪಿಗೆ ಶಾಕ್, ರಾಮಮಂದಿರ ವಿಚಾರಕ್ಕೆ ಇನ್ನು ಬ್ರೇಕ್; ಇನ್ನೇನಿದ್ದರೂ 'ಪ್ಲ್ಯಾನ್ ಬಿ'! ಬಿಜೆಪಿಗೆ ಶಾಕ್, ರಾಮಮಂದಿರ ವಿಚಾರಕ್ಕೆ ಇನ್ನು ಬ್ರೇಕ್; ಇನ್ನೇನಿದ್ದರೂ 'ಪ್ಲ್ಯಾನ್ ಬಿ'!

ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರನ್ನು ಸೋಲಿಸಲು ವಿರೋಧ ಪಕ್ಷಗಳು ಒಂದಾಗಿವೆ. ಆಡಳಿತ ವಿರೋಧಿ ಅಲೆಯೆಬ್ಬಿಸಲು ತೃತೀಯ ರಂಗ ಸಜ್ಜಾಗಿವೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ಈ ದೇಶದಲ್ಲಿ ಯಾಕಾಗಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವ ಅರಿವು ಮೂಡಿಸುವ ಪ್ರಯತ್ನ ಉದ್ದೇಶದಿಂದ ಡಿಸೆಂಬರ್ 16ಕ್ಕೆ ಟೀಂ ಮೋದಿ ತಂಡವು ಸಕ್ರೀಯವಾಗಿ ಕಾರ್ಯನಿರ್ವಹಿಸಲಿದೆ. ಖ್ಯಾತ ಚಿಂತಕ ಚಕ್ರವರ್ತಿಯವರು ಈ ತಂಡದ ನೇತೃತ್ವವಹಿಸಲಿದ್ದಾರೆ.

Team Modi going to launch on December 16

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಾದ ಹಲವು ಬದಲಾವಣೆಗಳು ಜನರ ಕಣ್ಣಿಗೆ ಕಾಣದಿರುವಂತೆ ಮಾಡಲು ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿರುವ ರಾಜಕೀಯ ಪಕ್ಷಗಳ ಕಾರ್ಯಕರ್ತರಂತಲ್ಲದೆ, ವಿಭಿನ್ನವಾಗಿ ಮೂರನೇ ವ್ಯಕ್ತಿಯಾಗಿ ಚುನಾವಣಾ ಪ್ರಚಾರದ ಉದ್ದೇಶ ಟೀಂ ಮೋದಿ ಹೊಂದಿದ್ದು ಅದಕ್ಕಾಗಿಯೇ ರಾಜ್ಯದಾದ್ಯಂತ 300 ಕಡೆ ಟೀಂ ಮೋದಿ ಏಕಕಾಲಕ್ಕೆ ಚಟುವಟುಕೆ ಆರಂಭಿಸಲಿವೆ.

ಮೋದಿ ಪಿಎಂ ಆದ ಮೇಲೆ ಬಿಜೆಪಿ ನಿಜಕ್ಕೂ ಅಜೇಯವಾಗಿಯೇ ಉಳಿದಿದೆಯಾ?! ಮೋದಿ ಪಿಎಂ ಆದ ಮೇಲೆ ಬಿಜೆಪಿ ನಿಜಕ್ಕೂ ಅಜೇಯವಾಗಿಯೇ ಉಳಿದಿದೆಯಾ?!

ಇದರ ಭಾಗವೆಂಬಂತೆ ಡಿಸೆಂಬರ್ 16ರಂದು ವಿವಿಧೆಡೆ ಬೈಕ್ ಜಾಥಾ, ಕಾಲ್ನಡಿಗೆ ಜಾಥಾ, ಕಾರ್ಯಾಲಯಗಳ ಉದ್ಘಾಟನೆ ಹೀಗೆ ವಿವಿಧ ಕಾರ್ಯಕ್ರಮಗಳ ಜೊತೆ ಟೀಂ ಮೋದಿ ತಂಡ ತೊಡಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಾಲ್ನಡಿಗೆ ಜಾಥಾ ಮೂಲಕ ಟೀಂ ಮೋದಿಯ ಉದ್ಘಾಟನೆಗೊಳ್ಳಲಿದ್ದು ಈಗಾಗಲೇ ಹಲವು ಯುವಕರು ಈ ಕಾರ್ಯಕ್ಕೆ ಜೊತೆಯಾಗಿ ನಿಲ್ಲುವ ಆಸಕ್ತಿಯೊಂದಿಗೆ ಜೊತೆಗೂಡಿದ್ದಾರೆ.

Team Modi going to launch on December 16

ಮೋದಿಜಿಯ ಹಲವು ಯೋಜನೆಗಳ ಬಗ್ಗೆ ಜನರಿಗೆ ತಲುಪಿಸುವುದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸರಕಾರ ಸಾಧಿಸಿದ ಸಾಧನೆಗಳ ಬಗ್ಗೆ ಅರಿವು, ಜನಸಾಮಾನ್ಯರಿಗೆ ತಲುಪಿಲ್ಲದ ಯೋಜನೆಗಳ ಬಗ್ಗೆ ಅರಿವು ಪ್ರಚಾರ ಮಾಹಿತಿ ಹೀಗೆ ಹಲವು ಮೋದಿಪರ ಪ್ರಚಾರದ ದೃಷ್ಟಿಯಿಂದ ಮಾತ್ರ ಈ ಟೀಂ ಸಿದ್ದವಾಗಿದೆ.

ಸೋಲಿನ ಬಳಿಕ ಎಚ್ಚೆತ್ತ ಬಿಜೆಪಿ, ರೈತರ ಸಾಲಮನ್ನಾಕ್ಕೆ ಚಿಂತನೆ? ಸೋಲಿನ ಬಳಿಕ ಎಚ್ಚೆತ್ತ ಬಿಜೆಪಿ, ರೈತರ ಸಾಲಮನ್ನಾಕ್ಕೆ ಚಿಂತನೆ?

ಮಂಗಳೂರಿನ ಹಂಪನಕಟ್ಟೆಯಿಂದ ಕೇಂದ್ರ ಮೈದಾನದವರೆಗೆ ಡಿಸೆಂಬರ್ 16ರಂದು ಸಂಜೆ ಕಾಲ್ನಡಿಗೆ ಜಾಥಾ ಮೂಲಕ ಮಂಗಳೂರಿನ ಟೀಂ ಮೋದಿ ತಂಡ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ. 'ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು' ಎಂಬ ಘೋಷವಾಕ್ಯದೊಂದಿಗೆ ಟೀಂ ಮಂಗಳೂರು ಚಟುವಟಿಕೆ ಆರಂಭಿಸಲಿದೆ.

English summary
Team Modi will be come into effect in Mangaluru in place of NaMo Brigade from December 16. The aim of these youth is to make Narendra Modi prime minister for another term.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X