ಚಲಿಸುತ್ತಿರುವ ಬುಲೆಟ್ ಬೈಕ್ ನಲ್ಲಿ ಕಾಣಿಸಿಕೊಂಡ ನಾಗರಹಾವು, ಮುಂದೇನಾಯ್ತು?

ಮಂಗಳೂರು, ನವೆಂಬರ್. 20: ಬೈಕ್ ಸವಾರರೇ, ನಿಮ್ಮ ಜತೆ ವಿಷಕಾರಿ ಹಾವುಗಳು ಸವಾರಿ ಮಾಡಬಹುದು. ಎಚ್ಚರವಹಿಸಿ! ಯಾಕೆಂದರೆ ನಾಗರಹಾವೊಂದು ಬೈಕ್ ನಲ್ಲಿ ಅಡಗಿ ಕುಳಿತು ಬೈಕ್ ಸವಾರನನ್ನೇ ಬೆಚ್ಚಿ ಬೀಳಿಸಿದ ಪ್ರಸಂಗವೊಂದು ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಬೈಕ್ ನಲ್ಲಿ ಸ್ಟೈಲ್ ಆಗಿ ರೌಂಡ್ಸ್ ಹೊಡಿಬೇಕು ಅನ್ಕೊಂಡಿದ್ರೆ, ಹೊರಡೋ ಮುನ್ನ ಒಮ್ಮೆ ಬೈಕ್ ಚೆಕ್ ಮಾಡಿ. ಇಲ್ಲದಿದ್ದರೆ ಬೈಕ್ ನಲ್ಲಿ ಬೆಚ್ಚಗೆ ಮಲಗಿದ್ದ ಹಾವು ನಿಮ್ಮೊಂದಿಗೆ ರೈಡ್ ಗೆ ಬರಬಹುದು. ಅಂದಹಾಗೆ ನಾಗ ಪ್ರತ್ಯಕ್ಷವಾಗಿರುವುದು ಬುಲೆಟ್ ಬೈಕ್ ನಲ್ಲಿ.

ಘಟನೆಯ ವಿವರ
ಚಲಿಸುತ್ತಿರುವ ಬುಲೆಟ್ ಬೈಕ್ ನ ಒಳಗಿನಿಂದ ಧಿಡೀರನೆ ಹೊರ‌ಬಂದ ನಾಗರಹಾವು ಬುಸುಗುಟ್ಟಿರುವ ಘಟನೆ ಮರಕಡ ಎಂಬಲ್ಲಿ ಬೆಳಕಿಗೆ ಬಂದಿದೆ.

Snake hiding inside bike

ಮರಕಡ ನಿವಾಸಿ ಬದ್ರುದ್ದೀನ್ ಕುಳೂರು ಎಂಬುವವರು ಬುಲೆಟ್ ಬೈಕ್ ನಲ್ಲಿ ಸಂಚರಿಸುತ್ತಿರುವ ವೇಳೆಯಲ್ಲಿ ಮೀಟರ್ ಗೇಜ್ ಪಕ್ಕದಿಂದಲೇ ದಿಢೀರ್ ಎಂದು ಹೊರಬಂದು ಹೆಡೆ ಎತ್ತಿ ನಿಂತಿದೆ. ವಿಚಲಿತರಾದ ಬದ್ರುದ್ದೀನ್ ನಂತರ ಸಮಾಧಾನವಾಗಿ ಭಯ ಪಡದೆ‌ ಬೈಕ್ ಪಕ್ಕಕ್ಕೆ ನಿಲ್ಲಿಸಿದ್ದಾರೆ.

Snake hiding inside bike

ನಂತರ ಉರಗ ಪ್ರೇಮಿ ಗಂಗಯ್ಯ ಬೋಳಾರ್ ಬುಲೆಟ್ ಒಳಗಿನಿಂದ ಹಾವನ್ನು ಹೊರತೆಗೆದು ರಕ್ಷಿಸಿದ್ದಾರೆ. ಮನೆಯಲ್ಲಿ ಬೈಕ್ ನಿಲ್ಲಿಸಿದ್ದ ಸಂದರ್ಭದಲ್ಲಿ ನಾಗರಹಾವು ಬುಲೆಟ್ ಹತ್ತಿರಬಹುದು ಎಂದು ಅಂದಾಜಿಸಲಾಗಿದೆ. ಬುಲೆಟ್ ನಲ್ಲಿದ್ದ ನಾಗರಹಾವು ಸಣ್ಣ ಮರಿಯಾಗಿದ್ದು, ಆಶ್ಚರ್ಯದಿಂದಲೇ ಜನ ನೋಡಲು ಮುಗಿಬಿದ್ದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+