ಶಿರಾಡಿ ರಸ್ತೆ ದುರಸ್ತಿ ಆಗುತ್ತಿರುವುದಕ್ಕೆ ಈ ಚಿತ್ರಗಳೇ ಸಾಕ್ಷಿ

ಮಂಗಳೂರು, ಫೆ. 23 : ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ರಸ್ತೆ ದುರಸ್ತಿ ಕಾಮಗಾರಿ ಆರಂಭವಾಗಿ ಒಂದು ತಿಂಗಳು ಕಳೆದಿದೆ. ಕಾಂಕ್ರಿಟ್ ರಸ್ತೆಯ ಕಾಮಗಾರಿ ಸೋಮವಾರದಿಂದ ಆರಂಭವಾಗಲಿದೆ. 13 ಕಿ.ಮೀ. ರಸ್ತೆ ಕಾಮಗಾರಿಯನ್ನು ಮೊದಲು ಆರಂಭಿಸಲಾಗಿದೆ.

ಕಾಂಕ್ರಿಟ್ ರಸ್ತೆ ಕಾಮಗಾರಿಗಾಗಿ ಶಿರಾಡಿ ಘಾಟ್‌ನಲ್ಲಿ ಜ.2ರಿಂದಲೇ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು, 2015ರ ಮೇ 15ರೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀಕ್ಷಕ ಇಂಜಿನಿಯರ್ ರಾಘವನ್ ಹೇಳಿದ್ದಾರೆ. [ಶಿರಾಡಿ ಬಂದ್ ಪರ್ಯಾಯ ಮಾರ್ಗಗಳು]

ಒಟ್ಟು 26 ಕಿ.ಮೀ ಉದ್ದದ ಶಿರಾಡಿ ಘಾಟ್ ರಸ್ತೆಯನ್ನು 13 ಕಿ.ಮೀ ನಂತೆ ಎರಡು ಭಾಗಗಳನ್ನಾಗಿ ಮಾಡಿಕೊಂಡು ರಸ್ತೆ ಕಾಮಗಾರಿಯನ್ನು ಮಾಡಲಾಗುತ್ತಿದೆ. ಕೆಂಪುಹೊಳೆ ಚೆಕ್‌ಪೋಸ್ಟ್‌ನಿಂದ ಮಾರನಹಳ್ಳಿವರೆಗಿನ 13 ಕಿ.ಮೀ ದೂರದ ರಸ್ತೆಯ ಕಾಮಗಾರಿ ಮೊದಲು ಆರಂಭಗೊಂಡಿದೆ. [ಕುಂಭಕರ್ಣನ ನಿದ್ದೆಗೆ ಜಾರಲಿರುವ ಶಿರಾಡಿಘಾಟ್!]

ಶಿರಾಡಿ ಘಾಟ್ ಪ್ರದೇಶದಲ್ಲಿ 500 ಮಿ.ಮೀ ನಷ್ಟು ಮಳೆ ಬೀಳುವುದರಿಂದ ಹಾಗೂ ಬಿದ್ದ ಮಳೆ ನೀರು ಮೋರಿಗಳಿಗೆ ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆ ಹಾಳಾಗುತ್ತಿದೆ. ಈ ಮಾರ್ಗದಲ್ಲಿ ಬಾರಿ ವಾಹನಗಳು ಸಂಚಾರ ನಡೆಸುವುದರಿಂದಲೂ ರಸ್ತೆ ಪದೇ-ಪದೇ ಹಾಳಾಗುತ್ತಿದೆ. ಆದ್ದರಿಂದ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಕಾಮಗಾರಿಯ ಚಿತ್ರಗಳು ಇಲ್ಲಿವೆ

ಸೋಮವಾರದಿಂದ ಕಾಮಗಾರಿ ಆರಂಭ

ಸೋಮವಾರದಿಂದ ಕಾಮಗಾರಿ ಆರಂಭ

ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ರಸ್ತೆ ದುರಸ್ತಿ ಕಾಮಗಾರಿ ಆರಂಭವಾಗಿ ಒಂದು ತಿಂಗಳು ಕಳೆದಿದೆ. ರಸ್ತೆಯ ಕಾಂಕ್ರಿಟ್ ಕಾಮಗಾರಿ ಸೋಮವಾರದಿಂದ ಆರಂಭವಾಗಲಿವೆ. ಕೆಂಪುಹೊಳೆ ಚೆಕ್‌ಪೋಸ್ಟ್‌ನಿಂದ ಮಾರನಹಳ್ಳಿವರೆಗಿನ 13 ಕಿ.ಮೀ ದೂರದ ರಸ್ತೆಯ ಕಾಮಗಾರಿ ಮೊದಲು ನಡೆಯಲಿದೆ.

ಕಾಮಗಾರಿಗೆ ಯಂತ್ರೋಪಕರಣಗಳು ಸಿದ್ಧ

ಕಾಮಗಾರಿಗೆ ಯಂತ್ರೋಪಕರಣಗಳು ಸಿದ್ಧ

ಕಾಮಗಾರಿಗೆ ಅಗತ್ಯವಿರುವ ಭೂಮಿ ಸಿದ್ಧಪಡಿಸುವ ಕೆಲಸ ಪೂರ್ಣಗೊಂಡಿದೆ. ಮರಳು, ಸಿಮೆಂಟ್ ಯಂತ್ರೋಪಕರಣ ಮತ್ತಿತರ ಸಾಮಗ್ರಿಗಳನ್ನು ಶೇಕಡ 60ರಷ್ಟು ದಾಸ್ತಾನು ಪೂರ್ಣಗೊಂಡಿದ್ದು, ಉಳಿದ ಸಾಮಗ್ರಿಗಳನ್ನು ನೇರವಾಗಿ ಕಾಮಗಾರಿ ಸ್ಥಳಕ್ಕೆ ರವಾನಿಸಲಾಗುತ್ತದೆ.

45 ಮೋರಿಗಳ ಕಾಮಗಾರಿ ಪೂರ್ಣ

45 ಮೋರಿಗಳ ಕಾಮಗಾರಿ ಪೂರ್ಣ

13 ಕಿ.ಮೀ.ಉದ್ದದ ರಸ್ತೆಯಲ್ಲಿ 69 ಮೋರಿಗಳಿವೆ ಇವುಗಳಲ್ಲಿ 67 ಮೋರಿಗಳ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 45 ಮೋರಿಗಳ ಕಾಮಗಾರಿ ಪೂರ್ಣಗೊಂಡಿದೆ. 3 ರಿಂದ 4 ಕಿರು ಸೇತುವೆ ಕಾಮಗಾರಿಗಳೂ ಕೂಡ ಪ್ರಗತಿಯಲ್ಲಿದೆ. ಪ್ರತಿಯೊಂದು ಕಾಮಗಾರಿಗಳಿಗೆ ಬಳಸುವ ಸಾಮಗ್ರಿಗಳನ್ನು ಪ್ರಯೋಗಾಲಯದಲ್ಲಿ ದೃಢೀಕರಿಸಿಕೊಂಡು ಕಾಮಗಾರಿ ಕೈಗೊಳ್ಳಲಾಗುತ್ತಿದೆ.

16 ಕಿ.ಮೀ.ಕಾಮಗಾರಿ ಮೊದಲು ಪೂರ್ಣ

16 ಕಿ.ಮೀ.ಕಾಮಗಾರಿ ಮೊದಲು ಪೂರ್ಣ

ಒಟ್ಟು 26 ಕಿ.ಮೀ ಉದ್ದದ ಶಿರಾಡಿ ಘಾಟ್ ರಸ್ತೆಯನ್ನು 13 ಕಿ.ಮೀ ನಂತೆ ಎರಡು ಭಾಗಗಳನ್ನಾಗಿ ಮಾಡಿಕೊಂಡು ರಸ್ತೆ ಕಾಮಗಾರಿಯನ್ನು ಮಾಡಲಾಗುತ್ತಿದೆ. ಇದರಲ್ಲಿ 13 ಕಿ.ಮೀ. ಕಾಂಕ್ರಿಟ್, 21 ಕಿ.ಮೀ.ಡಾಂಬರ್ ರಸ್ತೆ ನಿರ್ಮಿಸಲಾಗುತ್ತಿದೆ.

2015ರ ಮೇ 15ರೊಳಗೆ ಕಾಮಗಾರಿ

2015ರ ಮೇ 15ರೊಳಗೆ ಕಾಮಗಾರಿ

ಶಿರಾಡಿ ಘಾಟ್ ರಸ್ತೆ ದುರಸ್ತಿಯ ಮೊದಲ ಹಂತದ ಕಾಮಗಾರಿಯನ್ನು 2015r ಮೇ ತಿಂಗಳೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ. ಮೊದಲ ಹಂತದ ಕಾಮಗಾರಿ ಪೂರ್ಣಗೊಂಡ ಬಳಿಕ ಉಳಿದ ಕಾಮಗಾರಿಯನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+