ಬೆಳ್ತಂಗಡಿ: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನ

ಮಂಗಳೂರು, ಜುಲೈ 31: ಪ್ರೀತಿಸಲು ನಿರಾಕರಿಸಿದ ಯುವತಿ ಹಾಗು ಆಕೆಯ ಸಹೋದರಿಯನ್ನು ಮಾನಭಂಗಕ್ಕೆ ಯತ್ನಿಸಿದ ಆರೋಪಿಯೊಬ್ಬನನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಗಂಡಿಬಾಗಿಲು ಎಂಬಲ್ಲಿ ಈ ಘಟನೆ ನಡೆದಿದ್ದು, ಆರೋಪಿ ನೆರಿಯಾ ನಿವಾಸಿ ಬಿಜಿ ಥಾಮಸ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಧರ್ಮಸ್ಥಳದ ಅಣಿಯೂರಿನ ಗಂಡಿಬಾಗಿಲು ನಿವಾಸಿ ಯುವತಿಗೆ ಆರೋಪಿ ಬಿಜಿ ಥಾಮನ್ ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ. ಈ ಹಿನ್ನೆಲೆಯಲ್ಲಿ ಥಾಮಸ್ ವಿರುದ್ಧ ಕಳೆದ ಕೆಲ ದಿನಗಳ ಹಿಂದೆ ಅಕ್ಕ-ತಂಗಿಯರಿಬ್ಬರು ಸೇರಿ ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದರು.ಇದರಿಂದ ಕೋಪಗೊಂಡಿದ್ದ ಥಾಮಸ್ ಸೇಡು ತೀರಿಸಿಕೊಳ್ಳಲು ಯತ್ನಿಸಿದ್ದಾನೆ.

Sexually harassing woman, accused arrested

ನಿನ್ನೆ ಸಂಜೆ ಉಜಿರೆಯಿಂದ ಕೆಲಸ ಮುಗಿಸಿ ಯುವತಿಯರು ಮನೆ ಕಡೆಗೆ ಆಟೋ ಹತ್ತಿದರು. ಆರೋಪಿ ಥಾಮಸ್ ಪಿಕ್ ಅಪ್ ವಾಹನ ಮೂಲಕ ಯುವತಿಯರಿದ್ದ ಆಟೋವನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ . ಆಟೋ ಗಂಡಿಬಾಗಿಲು ಬಳಿ ಬರುತ್ತಿದ್ದಂತೆಯೇ ಥಾಮಸ್ ಚಲಾಯಿಸುತ್ತಿದ್ದ ಪಿಕ್ ಅಪ್ ವಾಹನವನ್ನು ಆಟೋಗೆ ಡಿಕ್ಕಿ ಹೊಡೆಸಿದ್ದಾನೆ.

ಡಿಕ್ಕಿಯಾದ ರಭಸಕ್ಕೆ ಯುವತಿಯರಿಬ್ಬರೂ ಆಟೋದಿಂದ ಹೊರಗೆ ಬಿದ್ದಿದ್ದು, ಘಟನೆಯಲ್ಲಿ ಗಾಯಗೊಂಡಿದ್ದ ಯುವತಿಯರ ಮೇಲೆ ಥಾಮಸ್ ಏಕಾಏಕಿ ದಾಳಿ ನಡೆಸಿದ್ದಾನೆ. ಯುವತಿಯರಿಗೆ ಮನಬಂದಂತೆ ಕಚ್ಚಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಸಂದರ್ಭದಲ್ಲಿ ಯುವತಿಯರ ರಕ್ಷಣೆಗೆ ಬಂದ ಆಟೋ ಚಾಲಕನ ಮೇಲೂ ಥಾಮಸ್ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ.

Sexually harassing woman, accused arrested

ಆಟೋ ಚಾಲಕ ಪೊಲೀಸ್ ಗೆ ಕರೆ ಮಾಡುತ್ತಿದ್ದಂತೆಯೇ ಆರೋಪಿ ಥಾಮಸ್ ಸ್ಥಳದಿಂದ ಪರಾರಿಯಾಗಿದ್ದಾನೆ. ಕೊನೆಗೆ ಸಂತ್ರಸ್ತ ಯುವತಿಯರಿಬ್ಬರು ಧರ್ಮಸ್ಥಳ ಠಾಣೆಗೆ ತೆರಳಿ ಅತ್ಯಾಚಾರ ಮತ್ತು ಕೊಲೆ ಯತ್ನ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿ ಥಾಮಸ್ ನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+