2ನೇ ಮಗುವಿಗೂ ಆಂಬ್ಯುಲೆನ್ಸ್ ನಲ್ಲೇ ಜನ್ಮ ನೀಡಿದ ಮಹಾತಾಯಿ

ಮಂಗಳೂರು, ಸೆಪ್ಟೆಂಬರ್ 28 : ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೋರ್ವರು 108 ಆಂಬ್ಯುಲೆನ್ಸ್ ವಾಹನದಲ್ಲಿಯೇ ಹೆಣ್ಣು ಮಗುವಿಗೆ ಜನ್ಮ‌ ನೀಡಿದ ಘಟನೆ ಕಡಬದಲ್ಲಿ ನಡೆದಿದೆ.

ಕೋಡಿಂಬಾಳ ಗ್ರಾಮದ ದಂಡುಗುರಿ ನಿವಾಸಿ ರವೀಂದ್ರ ಎಂಬುವರ ಪತ್ನಿ ಭವಾನಿ ಹಾಗು ಮಗು ಆರೋಗ್ಯವಾಗಿದ್ದು, ಮಗು ಹಾಗು ತಾಯಿಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭವಾನಿಯವರ ಮೊದಲನೇ ಹೆರಿಗೆಯೂ 108 ಆಂಬ್ಯುಲೆನ್ಸ್ ನಲ್ಲೇ ಆಗಿತ್ತು. ಇದೀಗ ಎರಡನೇ ಹೆರಿಗೆಯೂ 108 ಆಂಬ್ಯುಲೆನ್ಸ್ ನಲ್ಲೇ ಆಗಿರುವುದು ವಿಶೇಷ

Second-time women gave birth to baby in ambulance at Mangaluru

ಭವಾನಿ ಇಂದು (ಸೆ.28) ಮುಂಜಾನೆ ಹೆರಿಗೆ ನೋವು ಕಂಡು ಬಂದ ಕಾರಣ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾಗಿದ್ದರು. ದಾಖಲಾಗಿ ತಾಸು ಕಳೆದರೂ ವೈದ್ಯರು ಅಗಮಿಸದ ಕಾರಣ ಆಸ್ಪತ್ರೆಯ ದಾದಿಯರು ಕೊನೆಯ ಕ್ಷಣದಲ್ಲಿ ತುರ್ತಾಗಿ ಪುತ್ತೂರಿಗೆ ತೆರಳಲು ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ 108 ಆಂಬ್ಯುಲೆನ್ಸ್ ಮೂಲಕ ಪುತ್ತೂರಿಗೆ ಕೊಂಡೊಯ್ಯುತ್ತಿದ್ದಾಗ ಪದವು ಎಂಬಲ್ಲಿ ಭವಾನಿ ಹೆಣ್ಣು ಮಗುವಿಗೆ ಜನ್ಮ‌ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+