ಕಳ್ಳರ ಕೈ ಚಳಕ: ಉಪ್ಪಿನಂಗಡಿಯಲ್ಲಿ ಒಂದೇ ರಾತ್ರಿ 8 ಅಂಗಡಿ ಕಳವು

ಮಂಗಳೂರು, ಸೆಪ್ಟೆಂಬರ್ 27 : ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಒಂದೇ ರಾತ್ರಿಯಲ್ಲಿ ಕಳ್ಳರು 8 ಕಡೆ ತಮ್ಮ ಕೈ ಚಳಕ ತೋರಿಸಿದ್ದಾರೆ.

ನಿನ್ನೆ ತಡರಾತ್ರಿ (ಸೆಪ್ಟೆಂಬರ್ 26) ಉಪ್ಪಿನಂಗಡಿಯ ಸರ್ಕಾರಿ ಪದವಿ ಕಾಲೇಜು ಸೇರಿದಂತೆ ಬ್ಯಾಂಕ್ ರಸ್ತೆಯಲ್ಲಿರುವ ಎಂಟು ಅಂಗಡಿಗಳಿಗೆ ಕಳ್ಳರು ನುಗ್ಗಿದ್ದು, ಇಂದು ಮುಂಜಾನೆ ಈ ಸರಣಿ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ.

Robbers steal from shops at 8 places in uppinangady

ಬ್ಯಾಂಕ್ ರಸ್ತೆಯಲ್ಲಿರುವ ಮರ್ಚೆಂಟ್ ಅಂಗಡಿ, ಜೆರಾಕ್ಸ್ ಅಂಗಡಿ, ಫರ್ನಿಚರ್ ಅಂಗಡಿ ಸೇರಿದಂತೆ ಸುಮಾರು 8 ಅಂಗಡಿಗಳಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಇಲ್ಲಿಯ ಚಿನ್ನದ ಆಭರಣ ಮಳಿಗೆಗೆ ನುಗ್ಗಲು ಯತ್ನಿಸಿದ್ದಾರೆ.

Robbers steal from shops at 8 places in uppinangady

ಕಳೆದ ರಾತ್ರಿ ಅಂಗಡಿಗೆ ನುಗ್ಗಿದ ಕಳ್ಳರ ಕರಾಮತ್ತು ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ . ಈ ಘಟನೆಯ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಕಳ್ಳರ ಬಂಧನಕ್ಕೆ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+