ನದಿ ಪ್ರೀತಿ ಹೆಚ್ಚಿಸುವ ರಿವರ್ ಫೆಸ್ಟ್ ಗೆ ಮಂಗಳೂರಿನಲ್ಲಿ ಭರದ ಸಿದ್ಧತೆ

ಮಂಗಳೂರು, ಜನವರಿ 9: ಕರ್ನಾಟಕ ಕರಾವಳಿಯ ಕಡಲ ತಡಿಗಳು ಎಷ್ಟು ಸುಂದರವೋ ನದಿ ತಟಗಳು ಅಷ್ಟೇ ಆಕರ್ಷಣೀಯ. ಈ ಹಿನ್ನೆಲೆಯಲ್ಲಿ ನದಿ ತಟಗಳನ್ನು ಪ್ರವಾಸಿ ಕೇಂದ್ರವಾಗಿಸುವ ದೃಷ್ಟಿಯಿಂದ ಯೋಜನೆ ರೂಪಿಸಲಾಗುತ್ತಿದೆ. ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಅಯೋಜಿಸಲಾಗುತ್ತಿರುವ ನದಿ ಉತ್ಸವಕ್ಕೆ ಸಿದ್ಧತೆ ಭರದಿಂದ ಸಾಗಿದೆ.

ಇದೇ ಬರುವ ಜನವರಿ 12 ಮತ್ತು 13ರಂದು ನಡೆಯುವ ಮಂಗಳೂರು ರಿವರ್ ಫೆಸ್ಟ್ ನದಿ ಉತ್ಸವಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಸಿದ್ಧಗೊಳಿಸಲಾಗುತ್ತಿದೆ.

ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಜ.12 ಮತ್ತು 13ರಂದು ಕೂಳೂರು, ಬಂಗ್ರಕೂಳೂರು ಮತ್ತು ಸುಲ್ತಾನ್ ಬತ್ತೇರಿಯ ಫಲ್ಗುಣಿ ನದಿ ತೀರದಲ್ಲಿ ಈ ಉತ್ಸವ ನಡೆಯಲಿದೆ. ನದಿಗಳತ್ತ ಜನರನ್ನು ಆಕರ್ಷಿಸಲು ಹಾಗೂ ನದಿಗಳ ಬಗ್ಗೆ ಪ್ರೀತಿ ಹೆಚ್ಚಿಸುವುದು ಈ ಉತ್ಸವದ ಮುಖ್ಯ ಉದ್ದೇಶ.

River fest will be held in Mangaluru on Jan 12 and 13

ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿ ಹಾಗೂ ರಾಜ್ಯದ ಕರಾವಳಿಯ ನದಿ ತೀರಗಳನ್ನು ಪ್ರವಾಸೋದ್ಯಮದ ದೃಷ್ಠಿಯಿಂದ ಅಭಿವೃದ್ಧಿಗೊಳಿಸಲು ಈ ನದಿ ಉತ್ಸವ ಪೂರಕವಾಗಲಿದೆ. ಈ ನಿಟ್ಟಿನಲ್ಲಿ ನದಿ ಉತ್ಸವದ ಯಶಸ್ಸಿಗೆ ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥೀಲ್ ತಿಳಿಸಿದ್ದಾರೆ.

ಉತ್ಸವದ ಸಂದರ್ಭದಲ್ಲಿ ಪ್ರವಾಸಿಗರಿಗೆ ಮತ್ತು ಸಾರ್ವಜನಿಕರಿಗೆ ನದಿಯಲ್ಲಿ ವಿಹರಿಸಲು ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದಲ್ಲದೇ ಸಾರ್ವಜನಿಕರನ್ನು ಆಕರ್ಷಿಸಲು ನದಿಯಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ಉತ್ಸವದ ಅಂಗವಾಗಿ ಕಯಾಕಿಂಗ್ ದೋಣಿ ಸ್ಪರ್ಧೆ , ಬೋಟ್ ರೇಸ್, ಫೆರ್ರಿ, ವಿಂಡ್ ಸರ್ಫಿಂಗ್ ಕಾರ್ಯಕ್ರಮಗಳು ನಡೆಯಲಿವೆ.

ವಿವಿಧ ತಿಂಡಿ ತಿನಸುಗಳ ಆಹಾರೋತ್ಸವ ಕೂಡಾ ನದಿ ಉತ್ಸವದಲ್ಲಿ ನಡೆಯಲಿದೆ. ಇದರಲ್ಲಿ ತುಳುನಾಡಿನ ಸಾಂಪ್ರದಾಯಿಕ ತಿಂಡಿಗಳಲ್ಲದೇ, ಕರಾವಳಿಯ ಮೀನಿನ ವಿವಿಧ ಖಾದ್ಯಗಳ ಸ್ಟಾಲ್ ಗಳು ಪ್ರವಾಸಿಗರನ್ನು ಆಕರ್ಷಿಸಲಿದೆ. ಅದಲ್ಲದೇ ಹೆಸರಾಂತ ಗಾಯಕರ ಸಂಗೀತ ಕಾರ್ಯಕ್ರಮ, ಜನಪದ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

River fest will be held in Mangaluru on Jan 12 and 13

ನದಿಗಳ ಮಹತ್ವ ಸಾರುವ ಚಲನಚಿತ್ರಗಳ ಪ್ರದರ್ಶನ ಕೂಡ ಏರ್ಪಡಿಸಲಾಗಿದೆ. ನದಿಗಳ ಸುಸ್ಥಿರ ಬಳಕೆಯಿಂದ ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಕೋನವನ್ನಿರಿಸಿ ಉತ್ಸವ ಆಯೋಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+