3ರಿಂದ 63ಕ್ಕೆ ಕುಸಿತ, ಸ್ವಚ್ಛತೆಯಲ್ಲಿ ಮಂಗಳೂರು ಎಡವಿದ್ದೆಲ್ಲಿ?

ಮಂಗಳೂರು, ಮೇ 08 : ಈ ವರ್ಷದ ಸ್ವಚ್ಛ ನಗರಗಳ ಸಾಲಿಗೆ ಮಂಗಳೂರು ಆಯ್ಕೆಯಾಗಿದ್ದಕ್ಕೆ ಇಲ್ಲಿನ ಜನರ ಮುಖದಲ್ಲಿ ಖುಷಿ ಕಂಡಿತ್ತು. ಕಳೆದ ಬಾರಿ 3ನೇ ಸ್ಥಾನದಲ್ಲಿ ನಮ್ಮ ಜಿಲ್ಲೆ ಈ ಬಾರಿ ಅಗ್ರಸ್ಥಾನಕ್ಕೇರಲಿದೆ ಎಂದು ಅದೆಷ್ಟೋ ಆಸೆಗಳನ್ನು ಇಟ್ಟುಕೊಂಡಿದ್ದರು.

ಆದರೆ, ಇತ್ತೀಚೆಗೆ ಕೇಂದ್ರ ಸರ್ಕಾರ ಪ್ರಕಟಿಸಿದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮಂಗಳೂರಿಗೆ 63ನೇ ಸ್ಥಾನ ದಕ್ಕಿದೆ. ಇದರಿಂದ ಇಲ್ಲಿನ ಜನರು ಕಂಡಿದ್ದ ಮೊದಲ ಸ್ಥಾನದ ಕನಸು ಕನಸಾಗಿಯೇ ಉಳಿಯಿತು.

ಕಳೆದ ವರ್ಷ ದೇಶದಲ್ಲಿ ಮೂರನೇ ಅತ್ಯಂತ ಸ್ವಚ್ಛ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಂಗಳೂರು ಈ ಬಾರಿ 63ನೇ ಸ್ಥಾನದಲ್ಲಿದ್ದು 60 ಸ್ಥಾನಗಳನ್ನು ಕುಸಿದಿರುವುದು ನಿಜಕ್ಕೂ ಬೇಸರದ ಸಂಗತಿ.

ಮೂರರಿಂದ ಅರವತ್ತು ಮೂರಕ್ಕೆ ಜಾರಲು ಕಾರಣಗಳದರೂ ಏನು? ಈ ಬಾರಿ ಮನಪ ಸ್ವಚ್ಛತೆಗೆ ಒತ್ತು ಕೊಟ್ಟಿಲ್ಲವೇ? ಹೀಗೆ ಹತ್ತಾರೂ ಪ್ರಶ್ನೆಗಳು ಉದ್ಭವಿಸಿವೆ. ಇವುಗಳ ಪೈಕಿ ಕೆಲ ಕಾರಣಗಳ ಇಲ್ಲಿವೆ.

ತ್ಯಾಜ್ಯ ವಿಲೇವಾರಿಗೆ ಮಾತ್ರ ಒತ್ತು

ತ್ಯಾಜ್ಯ ವಿಲೇವಾರಿಗೆ ಮಾತ್ರ ಒತ್ತು

ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕೆಲವು ಸಂಘಟನೆಗಳ ಪ್ರಕಾರ ಮಂಗಳೂರು ಮಹಾನಗರಪಾಲಿಕೆ ಸ್ವಚ್ಛತೆಯ ವಿಚಾರ ಬಂದಾಗ ಕೇವಲ ತ್ಯಾಜ್ಯ ವಿಲೇವಾರಿ ವ್ಯವಸ್ಥೆಗೆ ಮಾತ್ರ ಒತ್ತು ನೀಡುತ್ತಿದೆ.

ರಸ್ತೆ ಬದಿಗಳಲ್ಲಿ ತ್ಯಾಜ್ಯ ಸಮಸ್ಯೆ

ರಸ್ತೆ ಬದಿಗಳಲ್ಲಿ ತ್ಯಾಜ್ಯ ಸಮಸ್ಯೆ

ಸದ್ಯ ಮಂಗಳೂರಿನಲ್ಲಿ ಅತ್ಯಾಧುನಿಕ ಮನೆ ಮನೆ ತ್ಯಾಜ್ಯ ಸಂಗ್ರಹಣಾ ವ್ಯವಸ್ಥೆ ಇದ್ದರೂ ಅದು ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ಹೇಳಲು ಸಾಧ್ಯವಾಗದು. ಹಲವು ರಸ್ತೆ ಬದಿಗಳಲ್ಲಿ ತ್ಯಾಜ್ಯ ಸಮಸ್ಯೆ ಈಗಲೂ ಜೀವಂತವಾಗಿದೆ.

ಸ್ವಚ್ಛ ಭಾರತ ಅಭಿಯಾನಕ್ಕೆ ಸಹಕಾರ ಇಲ್ಲ

ಸ್ವಚ್ಛ ಭಾರತ ಅಭಿಯಾನಕ್ಕೆ ಸಹಕಾರ ಇಲ್ಲ

ಮೇಲಾಗಿ ಮನಪಾ ತಾನೇ ಖುದ್ದಾಗಿ ಸ್ವಚ್ಛ ಭಾರತ ಅಭಿಯಾನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿಲ್ಲ ಹಾಗೂ ಸ್ವಚ್ಛತಾ ಅಭಿಯಾನವನ್ನು ಸ್ವಯಂ ಪ್ರೇರಣೆಯಿಂದ ಕೈಗೆತ್ತಿಕೊಂಡಿರುವ ಸಂಘಟನೆಗಳಿಗೂ ಹೆಚ್ಚಿನ ಸಹಕಾರ ನೀಡುವ ಗೋಜಿಗೆ ಹೋಗಿಲ್ಲವೆಂಬುವುದು ಹಲವರ ಅಳಲು.

ಭಾರತ ಅಭಿಯಾನದ ಸಂಚಾಲಕ ಏನಂದ್ರು?

ಭಾರತ ಅಭಿಯಾನದ ಸಂಚಾಲಕ ಏನಂದ್ರು?

ಮಂಗಳೂರಿನಲ್ಲಿ ಸ್ವಚ್ಛ ಭಾರತ ಆಪ್ ಜನಪ್ರಿಯಗೊಳಿಸಲು ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದನ್ನು ಜನಪ್ರಿಯಗೊಳಿಸಿದ್ದೇ ಆಗಿದ್ದಲ್ಲಿ ಮಂಗಳೂರಿಗೆ ಬಹಳಷ್ಟು ಲಾಭಕರವಾಗುತ್ತಿತ್ತು ಎನ್ನುತ್ತಾರೆ ರಾಮಕೃಷ್ಣ ಮಿಶನ್ನಿನ ಸ್ವಚ್ಛ ಭಾರತ ಅಭಿಯಾನದ ಸಂಚಾಲಕರಾದ ಆತ್ಮರೂಪ ಚೈತನ್ಯ.

ಮೇಯರ್ ಕವಿತಾ ಸನಿಲ್ ಅಭಿಪ್ರಾಯ

ಮೇಯರ್ ಕವಿತಾ ಸನಿಲ್ ಅಭಿಪ್ರಾಯ

ಘನ ತ್ಯಾಜ್ಯ ನಿರ್ವಹಣಾ ಗುತ್ತಿಗೆದಾರರು ಮನೆ ಮನೆ ತ್ಯಾಜ್ಯ ಸಂಗ್ರಹಣೆಯಲ್ಲಿ ಶೇ 100 ಯಶಸ್ಸು ಸಾಧಿಸಿದರೆ ಮಂಗಳೂರು ಪ್ರಥಮ ಸ್ಥಾನ ಪಡೆಯಲು ಸಾಧ್ಯವಿದೆ ಎಂದು ಮೇಯರ್ ಕವಿತಾ ಸನಿಲ್ ಅಭಿಪ್ರಾಯ ಪಟ್ಟಿದ್ದಾರೆ.

ಸಾರ್ವಜನಿಕರ ಅಭಿಪ್ರಾಯ

ಸಾರ್ವಜನಿಕರ ಅಭಿಪ್ರಾಯ

ಇನ್ನು ಹಲವು ಪ್ರಶ್ನೆಗಳು ಇವೆ. ಇವುಗಳನೆಲ್ಲ ಮಂಗಳೂರು ಮಹಾನಗರ ಪಾಲಿಕೆ ಗಮನಿಸಿ ಸ್ವಚ್ಛತೆಯತ್ತ ದೃಷ್ಠಿ ಇಟ್ಟರೇ ಮುಂದಿನ ವಾರಿ ಖಂಡಿತವಾಗಿಯೂ ಮಂಗಳೂರು ದೇಶದ ಪ್ರಥಮ ಸ್ವಚ್ಛ ನಗರ ಎನಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+