ವಿಡಿಯೋ; ಪೊಲೀಸರ ಮೇಲೆ ರೇಗಾಡಿದ ರಮಾನಾಥ್ ರೈ

ಮಂಗಳೂರು, ಏಪ್ರಿಲ್ 11; ಮಂಗಳೂರಿನಲ್ಲಿ ಕೊರೊನಾ ಕರ್ಫ್ಯೂ ಸಮಯದಲ್ಲಿ ಪೊಲೀಸರ ಮೇಲೆ ಮಾಜಿ ಸಚಿವ ಬಿ. ರಮಾನಾಥ ರೈ ರೇಗಾಡಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಲ್ಲಿ ಶನಿವಾರ ರಾತ್ರಿಯಿಂದ ಕರ್ಫ್ಯೂ ಜಾರಿಯಲ್ಲಿದೆ.

ಮಂಗಳೂರು ನಗರದ ಹೊರವಲಯದ ಪಡೀಲ್‌ನಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆದಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಬಂದ ಮಾಜಿ ಸಚಿವ ರಮಾನಾಥ್ ರೈ ಪೊಲೀಸರ ವಿರುದ್ಧ ರೇಗಾಡಿದರು.

ರಸ್ತೆಯಲ್ಲಿ ಕಿಲೊಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು. ಇದರಿಂದಾಗಿ ಸಿಟ್ಟಿಗೆದ್ದ ರಮಾನಾಥ್ ರೈ ಕಾರಿನಿಂದ ಇಳಿದು ನೇರ ಬ್ಯಾರಿಕೇಡ್ ಹಾಕಿದ ಪೊಲೀಸರ ಬಳಿ ತೆರಳಿದರು. ಪೊಲೀಸರಿಗೆ ಬೈದ ಅವರು, ಸರ್ಕಾರದ ನಿರ್ಧಾರದ ಬಗ್ಗೆ ರೇಗಾಡಿದ್ದಾರೆ.

 Ramanatha Rai Upset With Police During Corona Curfew

ಪೊಲೀಸರಿಂದ ಬ್ಯಾರಿಕೇಡ್ ತೆರವುಗೊಳಿಸಿ ವಾಹನ ಸಂಚಾರಕ್ಕೆ ಆರಂಭಿಸಲು ಸೂಚನೆ ನೀಡಿದ್ದಾರೆ. ರಮಾನಾಥ್ ರೈ ವರ್ತನೆ ಬಗ್ಗೆ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಕರ್ಫ್ಯೂ ಇದ್ದರೂ ಮಾಜಿ ಸಚಿವರು ಸರ್ಕಾರದ ಆದೇಶ ಉಲ್ಲಂಘಿಸಿ ರಾತ್ರಿ ತಿರುಗಾಡಿದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಮಾಜಿ ಸಚಿವರು ಕನಿಷ್ಠ ಮಾಸ್ಕ್ ಸಹ ಧರಿಸದೇ ಪೊಲೀಸರಿಗೆ ಧಮ್ಕಿ‌ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+