Get Updates
Get notified of breaking news, exclusive insights, and must-see stories!

ಮಾತು ಕೇಳದ ಅಧಿಕಾರಿ ನೀರಿಲ್ಲದ ಜಾಗಕ್ಕೆ ವರ್ಗ: ವಿಡಿಯೋ ವೈರಲ್

ಮಂಗಳೂರು, ಮೇ 5: ತಾವು ಸೂಚಿಸಿದ ಕೆಲಸ ಮಾಡಿಲ್ಲ ಎಂದು ಅಧಿಕಾರಿಗಳಿಗೆ ನೀರಿಲ್ಲದ ಜಾಗಕ್ಕೆ ವರ್ಗಾವಣೆ ಮಾಡಿಸುವ ಧಮ್ಕಿ ನೀಡುವ ರಾಜಕೀಯ ಪುಡಾರಿಗಳ ದರ್ಪ ಮೆರೆದ ಪ್ರಸಂಗ ಸರ್ವೇ ಸಾಮಾನ್ಯ. ಆದರೆ ಶಾಸಕಿ ಯೊಬ್ಬರು ಈ ರೀತಿಯ ಹೇಳಿಕೆ ನೀಡಿರುವ ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಹೇಳಿದ ಕೆಲಸ ಮಾಡದೇ ಮಾತು ಮೀರಿದ ಅಧಿಕಾರಿಗಳನ್ನು ನೀರಿಲ್ಲದ ಕಡೆ ವರ್ಗಾವಣೆ ಮಾಡುವುದಾಗಿ ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ದರ್ಪ ಪ್ರದರ್ಶಿಸಿದ ವಿಡಿಯೋವೊಂದು ಇದೀಗ ಸಾಮಾಜೀಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪುತ್ತೂರು ನಗರಸಭಾ ವ್ಯಾಪ್ತಿಯ ದರ್ಬೆ ವೃತ್ತದ ಬಳಿ ಚರಂಡಿ ಕಾಮಗಾರಿಗೆ ಸಂಬಂಧಿದಂತೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಶಾಸಕಿ ಶಕುಂತಲಾ ಶೆಟ್ಟಿ ಈ ದರ್ಪ ಪ್ರದರ್ಶಿಸಿದ್ದಾರೆ ಎಂದು ಹೇಳಲಾಗಿದೆ .

Puttur MLA Shakutala Shettys video goes extremely viral

ನಗರಸಭಾ ಆಯುಕ್ತೆ ರೂಪಾ ಶೆಟ್ಟಿ ಸೇರಿದಂತೆ ಹಲವು ಅಧಿಕಾರಿಗಳು ಸೇರಿದಂತೆ ಕಾಂಗ್ರೇಸ್ ಪಕ್ಷದ ಕೆಲವು ಮುಖಂಡರೂ ಶಾಸಕಿ ಜೊತೆಗಿದ್ದ ಸಂದರ್ಭದಲ್ಲಿ ಶಾಸಕಿ ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆ. ಈ ವಿಡಿಯೋ 6 ತಿಂಗಳ ಹಿಂದೆ ಚಿತ್ರಿಸಲಾಗಿದೆ ಯಾದರೂ ಈಗ ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿಹರಿಬಿಡಲಾಗಿದೆ.

ಚುನಾವಣಾ ವಿಡಿಯೋಗಳು

ಕೊಳಚೆ ನೀರಿಗೆ ಸಂಬಂಧಪಟ್ಟಂತೆ ಬಂದ ದೂರಿನ ಹಿನ್ನೆಲೆಯಲ್ಲಿ ಶಾಸಕಿ ಶಕುಂತಲಾ ಶೆಟ್ಟಿ ತನ್ನ ಮಾತು ಕೇಳದ ಅಧಿಕಾರಿಯನ್ನು ನೀರಿಲ್ಲದ ಕಡೆ ವರ್ಗಾವಣೆ ಮಾಡುತ್ತೇನೆ ಎಂದಿದ್ದಾರೆ. ಅದು ಗುಲ್ಬರ್ಗಾ, ಬೀದರ್ ಕೂಡಾ ಆಗಬಹುದು ಎಂದು ತನ್ನ ದರ್ಪವನ್ನು ಮೆರೆದಿದ್ದಾರೆ ಎಂದು ಅರೋಪಿಸಲಾಗಿದೆ. ಇದೀಗ ಚುನಾವಣೆ ಸಂದರ್ಭದಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣಗಳ ವೈರಲ್ ಆಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+