ಸ್ಮಾರ್ಟ್ ಸಿಟಿ ಮಂಗಳೂರಿಗೆ ಜನರು ನೀಡಿದ ಸಲಹೆಗಳೇನು?
ಮಂಗಳೂರು, ಡಿಸೆಂಬರ್, 04: ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯನ್ನು ಮಂಗಳೂರು ನಗರ, ನವ ಮಂಗಳೂರು ನಗರ, ಕೋಸ್ಟ ಲ್ ನಗರ ಎಂದು ಗುರುತಿಸಿ ಅಭಿವೃದ್ಧಿ ಪಡಿಸಬೇಕು. ಫುಟ್ ಪಾತ್ ಗಳು ಮತ್ತು ಸೈಕಲ್ ವೇ ಗಳನ್ನು ನಿರ್ಮಾಣ ಮಾಡಬೇಕು, ಕೈಗಾರಿಕಾ ಪ್ರದೇಶಗಳನ್ನು ಚೀನಾ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು. ಇದೇನಿದು ಅಂತ ಯೋಚಿಸ್ತಿದ್ದೀರಾ?
ಏನಿಲ್ಲಾರೀ...ಪ್ರಧಾನ ಮಂತ್ರಿ ನರೇಂದ್ರಮೋದಿ ಅವರ ಕನಸಿನ ಕೂಸಾದ ಸ್ಮಾರ್ಟ್ ಸಿಟಿಗೆ ಆಯ್ಕೆಯಾದ ಮಂಗಳೂರು ಯಾವ ರೀತಿಯಲ್ಲಿ ರೂಪುಗೊಳ್ಳಬೇಕು ಎಂದು ಎಮ್.ಎಲ್.ಸಿ ಐವನ್ ಡಿಸೋಜಾರವರು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿದ್ದು, ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಾರ್ಜನಿಕರ ಅಭಿಲಾಷೆ ಪ್ರಕಾರ ರೂಪಿಸಿದ ಯೋಜನೆಗಳ ಪಟ್ಟಿ ಪ್ರಸ್ತುತ ಪಡಿಸಿದ್ದಾರೆ.[ಸ್ಮಾರ್ಟ್ ಸಿಟಿಗೆ ಕನ್ನಡದ ಹೆಸರು ಸಮರ್ಥ ನಗರ]

ಸ್ಮಾರ್ಟ್ ಸಿಟಿಗೆ ಸಜ್ಜಾಗುತ್ತಿರುವ ಮಂಗಳೂರು ನಗರದ ಹೊಸ ಯೋಜನೆಗಳೇನು?
* ಸೋಲಾರ್ ಮೇಲ್ಛಾವಣಿ ಘಟಕ ಮತ್ತು ಸೋಲಾರ್ ಪಾರ್ಕ್ ಗಳನ್ನು ರಚಿಸಿ ನಗರಕ್ಕೆ ಬೇಕಾದ ವಿದ್ಯುತ್ ನ್ನು ನಾವೇ ಉತ್ಪಾದಿಸುವುದು.
* ಕರಾವಳಿಯಲ್ಲಿನ ಬೀಚ್ ಅಭಿವೃದ್ಧಿಪಡಿಸಿ ನಿರಂತರವಾಗಿ ಸಾಮಾಜಿಕ, ಸಾಂಸ್ಕೃತಿಕ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಬೇಕು.
* 24×7ನೀರು ಸರಬರಾಜಿಗೆ ನಗರದ ಒಳಗಡೆ ಇರುವ ಕೆರೆಗಳನ್ನು ಅಭಿವೃದ್ಧಿಪಡಿಸಬೇಕು
* ಸಾರ್ವಜನಿಕರಿಗೆ ರಸ್ತೆ ದಾಟಲು ಎಸ್ಕಲೇಟರ್ ಮತ್ತು ಸಬ್ ವೇ ನಿರ್ಮಾಣ ಮಾಡಬೇಕು.[ಸ್ಮಾರ್ಟ್ ಸಿಟಿಯಾಗಲಿರುವ 98 ನಗರಗಳ ಪಟ್ಟಿ]
* ನಗರದ ಕೆಲವು ಪ್ರದೇಶಗಳಲ್ಲಿ ವಾಹನ ರಹಿತ ಝೋನ್ ಗಳಾಗಿ ಮಾರ್ಪಡಿಸಿ ಗುರುತಿಸಿಕೊಳ್ಳಬೇಕು
* ಎಲ್ಲಾ ಸರಕಾರಿ ವಸತಿಗೃಹಗಳನ್ನು ಬಹುಮಹಡಿ ಕಟ್ಟಡಗಳನ್ನಾಗಿ ನಿರ್ಮಿಸುವುದು
* ಬಹುಮಹಡಿ ಪಾರ್ಕಿಂಗ್ ಕಟ್ಟಡಗಳ ಮುಖಾಂತರ ವಾಹನಗಳನ್ನು ಲಿಫ್ಟ್ ಮುಖಾಂತರ ಕೊಂಡೊಯ್ಯುವ ವ್ಯವಸ್ಥೆ ಮಾಡಬೇಕು.
* ಶಾಲಾ ಕಾಲೇಜುಗಳ ಪ್ರಾರಂಭ ಸಮಯವನ್ನು ವಿವಿಧ ಸ್ತರಗಳಲ್ಲಿ ನಿಗದಿಗೊಳಿಸಬೇಕು.
* ನಗರದಲ್ಲಿ ಸಂಚರಿಸುವ ಸಾರಿಗೆಗಳಿಗೆ ಯೂನಿಫಾರಂ ನಿಗದಿಪಡಿಸುವುದು[ಸ್ಮಾರ್ಟ್ ಸಿಟಿ : ಕರ್ನಾಟಕಕ್ಕೆ 6 ಮಿಕ್ಕ ರಾಜ್ಯಕ್ಕೆ ಎಷ್ಟು?]
* ಟೂರಿಸ್ಟ್ ಸಿಟಿ ಮತ್ತು ಸರ್ವೀಸ್ ನಿಲ್ದಾಣಗಳು ಬೇರೆ ಬೇರೆ ಸ್ಥಳಗಳಲ್ಲಿ ಗುರುತಿಸುವುದು.
* ನಗರಗಳಲ್ಲಿ ಶಾಪಿಂಗ್ ಸ್ಟ್ರೀಟ್ ಮತ್ತು ಫುಡ್ ಸ್ಟ್ರೀಟ್ ಗಳನ್ನು ನಿರ್ಮಾಣ ಮಾಡುವುದು.
* ಮೆಟ್ರೋ ಟ್ರೈನ್ ಗಳನ್ನು ಅಂಡರ್ ಗ್ರೌಂಡ್ ನಲ್ಲಿ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವುದು.
* ಮಾರುಕಟ್ಟೆ ಅಭಿವೃದ್ದಿ ಪಡಿಸುವುದು, ರಿಂಗ್ ರೋಡ್ ಗಳನ್ನು ನಿರ್ಮಾಣ ಮಾಡುವುದು
* ನಗರ ಪಾಲಿಕೆ ಆಡಳಿತವನ್ನು ಸುಗಮಗೊಳಿಸಲು ಝೋನ್ ಕಚೇರಿಗಳನ್ನು ಸ್ಥಾಪಿಸುವುದು.
* ನಗರದ ವಿಮಾನ ನಿಲ್ದಾಣ ಮತ್ತು ಅದರ ಪರಿಸರವನ್ನು ನಗರ ಪಾಲಿಕೆಯ ಒಳಗಡೆ ಸೇರಿಸಿಕೊಳ್ಳುವುದು












Click it and Unblock the Notifications