ಮನೆಯಲ್ಲೇ ವೇಶ್ಯಾವಾಟಿಕೆ, 4 ಯವತಿಯರನ್ನು ರಕ್ಷಿಸಿದ ಮಂಗಳೂರು ಪೊಲೀಸರು

ಮಂಗಳೂರು, ಫೆಬ್ರವರಿ 07: ಮನೆಯಲ್ಲಿ ವೇಶ್ಯಾವಾಟಿಕೆಯನ್ನು ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಿ 4 ಯುವತಿಯರನ್ನು ಮಂಗಳೂರು ಪೊಲೀಸರು ರಕ್ಷಿಸಿದ್ದಾರೆ. ಮಂಗಳೂರು ಹೊರವಲಯದ ಬಜಪೆ ಎಂಬಲ್ಲಿ ಡೈಮಂಡ್ ಹೋಮ್ ಎದುರು ಇರುವ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪೊಲೀಸರಿಗೆ ದೊರೆತಿತ್ತು.

ದಾಳಿ ಸಂದರ್ಭದಲ್ಲಿ ಮನೆಯಲ್ಲಿದ್ದ 4 ಯುವತಿಯರನ್ನು ರಕ್ಷಿಸಿದ ಪೊಲೀಸರು ವೇಶ್ಯಾವಾಟಿಕೆ ನಡೆಸುತ್ತಿದ್ದ 4 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಉಡುಪಿ ನಿವಾಸಿ ಶಿವಾನಂದ (45), ಮಂಗಳೂರು ಪಂಜಿಮೊಗರು ನಿವಾಸಿ ನಿರಂಜನ್ ಆರ್ ಕೋಟ್ಯಾನ್ (42) ಮಂಗಳೂರಿನ ಕುತ್ತಾರುಪದವು ನಿವಾಸಿ ಎಂ.ಬಿ. ಇಸ್ಮಾಯಿಲ್ (35) , ಕೇರಳ ಮಂಜೇಶ್ವರ ನಿವಾಸಿ ಕಡವಲಪ್ಪು ಮಹಮ್ಮದ್ ಅಬ್ಬುಸಲೀಂ (42) ಎಂದು ಗುರುತಿಸಲಾಗಿದೆ.

Prostitution racket busted in Managluru

ಆರೋಪಿಗಳು ಹಲವಾರು ದಿನಗಳಿಂದ ಈ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದು, ಗ್ರಾಹಕರನ್ನು ಮೊಬೈಲ್ ನಲ್ಲೇ ಸಂಪರ್ಕಿಸಿ ಮನೆಗೆ ಆಹ್ವಾನಿಸುತ್ತಿದ್ದರು ಎಂದು ಹೇಳಲಾಗಿದೆ. ಈ ಕುರಿತು ಖಚಿತ ಮಾಹಿತಿ ಕಲೆ ಹಾಕಿ ಪೊಲೀಸರು ದಾಳಿ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+