ಮಂಗಳೂರಿನಲ್ಲಿ ಹೈಟೆಕ್ ವೇಶ್ಯಾಟಿಕೆ ಜಾಲ, ನಾಲ್ವರ ಬಂಧನ

ಮಂಗಳೂರು , ಅಕ್ಟೋಬರ್ 15: ಮಂಗಳೂರು ನಗರದ ಹೃದಯ ಭಾಗದಲ್ಲಿ ನಡೆಯುತಿದ್ದ ಹೈಟೆಕ್ ವೇಶ್ಯಾವಾಟಿಕೆ ಜಾಲವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ.

ನಗರದ ಕರಂಗಲ್ಪಾಡಿ ಎಂಬಲ್ಲಿ ಫ್ಲಾಟ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ 4 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Prostitution Racket Busted At Mangaluru, Four Arrested

ಕರಂಗಲ್ಪಾಡಿಯ ದಿವ್ಯಮಹಲ್ ಆಪಾರ್ಟ್ ಮೆಂಟ್ ನ 5 ನೇ ಮಹಡಿಯ 502 ಫ್ಲಾಟ್ ನಲ್ಲಿ ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿ ಸಿಸಿಬಿ ಪೊಲೀಸರಿಗೆ ದೊರೆತಿತ್ತು.

ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಂಟ್ವಾಳ ವಗ್ಗದ ಸಂತೋಷ್ ಕುಮಾರ್, ಬಿಜೈ ಕಾಪಿಕಾಡಿನ ದೀಪಕ್, ತೊಕ್ಕೊಟ್ಟು ಪೆರ್ಮನ್ನೂರು ಬಬ್ಬುಕಟ್ಟೆಯ ನವೀನ್ ಹಾಗೂ ಅಶಾ ಜಿ. ಎಂಬುವವರನ್ನು ಬಂಧಿಸಲಾಗಿದೆ.

ಬಂಧಿತರಿಂದ 31,500 ರೂಪಾಯಿ ನಗದು, 7 ಮೊಬೈಲ್ ಫೋನ್ ಗಳು, 2 ಬೈಕ್ ಸೇರಿದಂತೆ ಒಟ್ಟು ರೂ. 2,06,100 ಮೌಲ್ಯದ ಸೊತ್ತನ್ನು ಪೊಲೀಸರು ವಶಪಡಿಸಕೊಂಡಿದ್ದಾರೆ .

ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದ್ದ ಇಬ್ಬರು ಯುವತಿಯರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+