ಮಂಗಳೂರು: ಚರ್ಚ್ ಫಾದರ್‌ಗಳಿಂದ ಮನೆ ನೆಲಸಮ
ಮಂಗಳೂರು, ಜೂ.26: ನಗರದ ಬಂಟ್ಸ್ ಹಾಸ್ಟೇಲ್ ಸಮೀಪದ ನಿವಾಸಿಯೊಬ್ಬರ ಮನೆಯನ್ನು ಸಿನಿಮೀಯ ರೀತಿಯಲ್ಲಿ ನೆಲಸಮ ಮಾಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ.
ಅಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿಯವರ ಸೂಚನೆ ಮೇರೆಗೆ 45 ಜನರ ತಂಡವೊಂದು ಗುರುವಾರ ಮಧ್ಯಾಹ್ನ 2.30ಕ್ಕೆ ಜಾನ್ ಬ್ಯಾಪಿಸ್ಟ್(47) ಎಂಬವರ ಮನೆಯನ್ನು ಜೆಸಿಬಿ ಮೂಲಕ ಸಂಪೂರ್ಣವಾಗಿ ಕೆಡವಿ ಹಾಕಿದೆ.
ಜಾನ್ ಬ್ಯಾಪಿಸ್ಟ್ ಮನೆಯಲ್ಲಿ ಇಲ್ಲದ ವೇಳೆ ಸಂತ ಅಲೋಷಿಯಸ್ ಚರ್ಚಿನ ರೆ.ಫಾ.ಫ್ರಾನ್ಸಿಸ್ ಡಿ. ಅಲ್ಮೇಡಾ ಮತ್ತು ಫ್ರಾನ್ಸಿಸ್ ಸಿರಿಲ್ ನೇತ್ರತ್ವದಲ್ಲಿ ನಮ್ಮ ಮನೆಯನ್ನು ಸಂಪೂರ್ಣವಾಗಿ ಕೆಡವಿ ಹಾಕಿದ್ದಾರೆ ಎಂದು ಜಾನ್ ಬ್ಯಾಪಿಸ್ಟ್ ಅವರ ಮಗಳು ಮೆಲಿಟಾ ಮಾಧ್ಯಮದವರೊಂದಿಗೆ ತಮ್ಮಅಳಲನ್ನು ತೋಡಿಕೊಂಡಿದ್ದಾರೆ.

ಜಾನ್ ಬ್ಯಾಪಿಸ್ಟ್ ಪತ್ನಿ ವಿದೇಶದಲ್ಲಿದ್ದು ಇಬ್ಬರು ಮಕ್ಕಳೊಂದಿಗೆ ಬಂಟ್ಸ್ ಹಾಸ್ಟೇಲ್ ಸಮೀಪ ನೆಲೆಸಿದ್ದಾರೆ. ಕಳೆದ 45 ವರ್ಷಗಳಿಂದ ಜಾನ್ ಬ್ಯಾಪಿಸ್ಟ್ ಅವರ ಕುಟುಂಬ ಇಲ್ಲಿ ನೆಲೆಸಿದ್ದು, ಅಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿ ಬ್ಯಾಪಿಸ್ಟ್ ಅವರು ನೆಲೆಸಿರುವ ಜಾಗ ತಮ್ಮದು ಎಂದು ವಾದಿಸುತ್ತಿದ್ದು ಪ್ರಕರಣ ಕೊರ್ಟ್‌ನಲ್ಲಿದೆ.
ಈ ನಡುವೆ ಯಾವುದೇ ಸೂಚನೆ ನೀಡದೇ ಇದ್ದಕ್ಕಿದ್ದಂತೆ ಮನೆಯನ್ನು ಸಂತ ಅಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿ ಕೆಡವಿದ್ದು ಬ್ಯಾಪಿಸ್ಟ್ ಅವರ ಕುಟಂಬ ಬೀದಿಗೆ ಬಂದಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಚರ್ಚಿನ ಫಾದರ್ ಫ್ರಾನ್ಸಿಸ್ ಸಿರಿಲ್ ಅವರು ಈ ಜಾಗ ನಮ್ಮದು. ಈ ಜಾಗಕ್ಕೆ ಸಂಬಂಧಿಸಿದಂತೆ ದಾಖಲೆ ಪತ್ರ ನಮ್ಮಲ್ಲಿದೆ. ಹಲವಾರು ವರ್ಷಗಳಿಂದ ಈ ಜಾಗವನ್ನು ತೆರವು ಮಾಡಿ ಎಂದು ನಾವು ಬ್ಯಾಪಿಸ್ಟ್ ಅವರಿಗೆ ಹೇಳುತ್ತಿದ್ದರೂ ಅವರು ತೆರವು ಮಾಡಿಲ್ಲ. ಈ ಹಿನ್ನಲೆಯಲ್ಲಿ ಮನೆಯನ್ನು ನಾವು ನೆಲಸಮ ಮಾಡಿದ್ದೇವೆ ಎಂದು ಹೇಳಿದ್ದಾರೆ.













Click it and Unblock the Notifications