ವಿಡಿಯೋ: ಪೋಸ್ಟ್‌ಕಾರ್ಡ್ ಮಹೇಶ್ ಹೆಗಡೆಗೆ ಯುವತಿಯಿಂದ 'ವಂದೇ ಮಾತರಂ' ಚಾಲೆಂಜ್
ಮಂಗಳೂರು, ಜನವರಿ 31: ಪತ್ರಕರ್ತ ಅರ್ನಬ್ ಗೋಸ್ವಾಮಿಗೆ ವಿಮಾನದಲ್ಲಿ ಕಾಮಿಡಿಯನ್ ಕುನಾಲ್ ಕಾಮ್ರಾ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೋಸ್ಟ್ ಕಾರ್ಡ್ ಖ್ಯಾತಿಯ ಮಹೇಶ್ ವಿಕ್ರಂ ಹೆಗಡೆಗೂ ಇದೇ ರೀತಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಯುವತಿಯರು ಪ್ರಶ್ನೆಗಳನ್ನು ಕೇಳಿದ ವಿಡಿಯೋ ವೈರಲ್ ಆಗುತ್ತಿದೆ.
ಮುಸ್ಲಿಂ ಯುವತಿ ಹಾಗೂ ಇನ್ನಿತರೆ ಕೆಲವು ಸ್ನೇಹಿತರು ಮಹೇಶ್ ವಿಕ್ರಂ ಹೆಗಡೆ ಬಳಿ ಬಂದು ಕುಳಿತು 'ವಂದೇ ಮಾತರಂ' ಗೀತೆ ಹಾಡಿ ಎಂದು ಕೇಳುತ್ತಿರುವ ಒಂದೂವರೆ ನಿಮಿಷಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪೋಸ್ಟ್‌ಕಾರ್ಡ್ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣದ ಖಾತೆಗಳ ಮೂಲಕ ಹಿಂದೂ ಪರವಾದ ಪೋಸ್ಟಿಂಗ್‌ಗಳನ್ನು ಹಾಕುತ್ತಿರುವ ವಿಕ್ರಂ ಹೆಗಡೆ ಈ ಯುವತಿಯರಿಂದ ಪ್ರಶ್ನೆಗಳಿಗೆ ಒಳಗಾಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ನೀವು ನಮ್ಮನ್ನು ಪೀಡಿಸುತ್ತಿರುತ್ತೀರಿ ಒಂದೇ ಮಾತರಂ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಿರುತ್ತೀರಿ, ರಾಷ್ಟ್ರೀಯವಾದಿಯಾಗಿರುವ ನೀವು ದೇಶವಿರೋಧಿಗಳ ಎದುರು ವಂದೇ ಮಾತರಂ ಹಾಡಿ ತೋರಿಸಿ ಎಂದು ಅಲ್ಲಿದ್ದ ಯುವತಿಯರು ಸವಾಲೆಸೆದಿರುವ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ.
ಇಂಡಿಗೋ 6ಇ 5317 ಮುಂಬೈ-ಲಕ್ನೋ ನಡುವಿನ ವಿಮಾನದಲ್ಲಿ ಕುನಾಲ್ ಕಾಮ್ರಾ ವಿಡಿಯೋವೊಂದನ್ನು ಮಾಡಿದ್ದಾರೆ. ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದಾರೆ. ಈ ವಿಡಿಯೋವನ್ನು ಟ್ವೀಟರ್‌ನಲ್ಲಿ ಹಾಕಿದ್ದಾರೆ.
ಕುನಾಲ್ ಟ್ವಿಟರ್‌ನಲ್ಲಿ 5 ಗಂಟೆ ಹಿಂದೆ ಹಾಕಿರುವ 1.51 ನಿಮಿಷದ ವಿಡಿಯೋವನ್ನು 1.1 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದಾರೆ. 19.1ಕೆ ರಿಟ್ವೀಟ್ ಆಗಿದೆ. 52.8ಕೆ ಜನರು ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. 10.6ಕೆ ಕಮೆಂಟ್‌ಗಳು ಬಂದಿತ್ತು.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications