ಐಕಳದ ಕಾಂತಾಬಾರೆ ಬೂದಬಾರೆ ಕಂಬಳ ರದ್ದು

ಮಂಗಳೂರು: ಇತಿಹಾಸ ಪ್ರಸಿದ್ಧ ಹಾಗೂ ಮುಲ್ಕಿ ಮಾಗಣೆಯ ಒಂಭತ್ತು ಮಾಗಣೆಯ ಕಂಬಳ ಎಂಬ ಹೆಸರು ಪಡೆದಿದ್ದ ಐಕಳದ ಕಾಂತಾಬಾರೆ ಬೂದಬಾರೆ ಕಂಬಳವನ್ನು ಮಾರ್ಚ್ 25ರಂದು ನಡೆಸಲು ತೀರ್ಮಾನಿಸಲಾಗಿದ್ದರೂ, ಆದರೆ ಕೊನೆ ಕ್ಷಣದಲ್ಲಿ ಕಾನೂನು ತೊಡಕು ಉಲ್ಬಣವಾಗಿದ್ದರಿಂದಾಗಿ ಕಂಬಳದ ಆಟದ ಬದಲಿಗೆ ಕೇವಲ ಸಂಪ್ರದಾಯಿಕ ಪೂಜೆ ನೆರವೇರಿಸಿ ಸಾಂಕೇತಿಕವಾಗಿ ಇತಿಶ್ರೀ ಹಾಡಲಾಯಿತು.

Popular Aikala Kambla Cancelled at Mulki in Mangaluru

ಐಕಳದ ಕಾಂತಾಬಾರೆ ಬೂದಬಾರೆ ಕಂಬಳವನ್ನು ಸಂಪ್ರದಾಯದೊಂದಿಗೆ ಈ ಹಿಂದೆ ನಡೆಯುತ್ತಿದ್ದಂತೆ ಜಿಲ್ಲೆಯ ಎಲ್ಲಾ ಕಂಬಳದ ಕೋಣಗಳನ್ನು ಆಹ್ವಾನಿಸಿ ನಡೆಸಲು ಸಮಿತಿ ತೀರ್ಮಾನಿಸಲಾಗಿತ್ತು. ಆದರೆ ಎಲ್ಲ ತಯಾರಿ ನಡೆಸಿದ ಬೆನ್ನಿಗೆ ನಿನ್ನೆ ಸಂಜೆ ಪೊಲೀಸ್ ಪ್ರವೇಶಿಸಿ ಕಂಬಳಕ್ಕೆ ನಿಷೇಧ ಹೇರಿದೆ.

Popular Aikala Kambla Cancelled at Mulki in Mangaluru

ಸದ್ಯದ ಪರಿಸ್ಥಿತಿಯಲ್ಲಿ ಕಂಬಳ ವಿವಾದವು ನ್ಯಾಯಾಲಯದಲ್ಲಿ ಬಾಕಿ ಉಳಿದಿರುವುದರಿಂದ ಕಂಬಳವನ್ನು ನಡೆಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಹಾಗಾಗಿ, ಕೇವಲ ಪೂಜೆ ಮಾತ್ರ ನೆರವೇರಿಸಲು ಅವಕಾಶ ನೀಡಲಾಗಿತ್ತು.

Popular Aikala Kambla Cancelled at Mulki in Mangaluru

ಈ ಹಿಂದೆ ನಡೆದ ಮುಲ್ಕಿ ಸೀಮೆಯ ಪಡುಪಣಂಬೂರು ಅರಸು ಕಂಬಳದಲ್ಲಿ ನಡೆದಂತೆ ಸಂಪ್ರದಾಯಿಕ ಪೂಜೆ ಮಾತ್ರ ಪಾಲಿಸಲು ಸೂಚಿಸಲಾಯಿತು. ಹೊರಭಾಗದಿಂದ ಬಂದಂಥ ಕೋಣಗಳನ್ನು ಹಿಂದೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+