ಮಂಗಳೂರಿನ ರೌಡಿ ಶೀಟರ್ ಉಮರ್ ಫಾರುಕ್‌ಗೆ ಪೊಲೀಸರ ಗುಂಡೇಟು

ಮಂಗಳೂರು ಮೇ 29: ಮಂಗಳೂರನ್ನು ಗುಂಡಿನ ಸದ್ದು ಮತ್ತೇ ಬೆಚ್ಚಿ ಬೀಳಿಸಿದೆ. ಮಂಗಳೂರು ಹೊರವಲಯದಲ್ಲಿ ಶೂಟೌಟ್ ನಡೆದಿದೆ. ಮಂಗಳೂರಿನ ನಟೋರಿಯಸ್ ರೌಡಿ ಉಮರ್ ಫಾರುಕ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಮಂಗಳೂರು ಹೊರವಲಯದ ಪಚ್ಚನಾಡಿ ಎಂಬಲ್ಲಿ ಈ ಘಟನೆ ನಡೆದಿದೆ.

ಎರಡು ಪ್ರಮುಖ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ನಟೋರಿಸ್ ರೌಡಿ ಉಮರ್ ಫಾರೂಕ್ ಪಚ್ಚನಾಡಿ ಪ್ರದೇಶಕ್ಕೆ ಆಗಮಿಸುವ ಮಾಹಿತಿ ಪೊಲೀಸರು ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಉಮರ್ ಫಾರೂಕ್ ಬಂಧನಕ್ಕೆ ಬಲೆ ಬೀಸಲಾಗಿತ್ತು. ತಡರಾತ್ರಿ ಉಮರ್ ಫಾರೂಕ್ ಆಗಮಿಸುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಲು ಮುಂದಾಗಿದ್ದಾರೆ. ಆದರೆ ಉಮರ್ ಪೊಲೀಸರ ಮೇಲೆ ದಾಳಿಗೆ ಮುಂದಗಿದ್ದಾನೆ ಎಂದು ಹೇಳಲಾಗಿದೆ.

Police open fire on rowdy sheeter Umer in Mangaluru

ಈ ಹಿನ್ನೆಲೆಯಲ್ಲಿ ಉಮರ್ ಫಾರೂಕ್ ಮತ್ತು ಪೊಲೀಸ್ ತಂಡದ ನಡುವೆ ಘರ್ಷಣೆ ಸಂಭವಿಸಿದೆ. ಈ ವೇಳೆ ಉಮರ್ ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ದಾಳಿ ನಡೆಸಿದ್ದಾನೆ. ಈ ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಸಂದೀಪ್ ಗಾಯ ಗೊಂಡಿದ್ದಾರೆ. ಈ ಪರಿಣಾಮ ಪೊಲೀಸರು ಆತ್ಮರಕ್ಷಣೆಗಾಗಿ ಉಮರ್ ಫಾರೂಕ್ ಮೇಲೆ ಗುಂಡು ಹಾರಿಸಿದ್ದಾರೆ ಘಟನೆಯಲ್ಲಿ ಗಾಯಗೊಂಡ ಉಮರ್ ಫಾರೂಕ್ ಮತ್ತು ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದ ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Police open fire on rowdy sheeter Umer in Mangaluru

ಪೊಲೀಸರ ಗುಂಡಿನ ದಾಳಿಗೆ ಒಳಗಾಗಿರುವ ಉಮರ್ ಫಾರೂಕ್ ಮಂಗಳೂರಿನ ನಟೋರಿಯಸ್ ಟಾರ್ಗೆಟ್ ಗ್ಯಾಂಗ್ ನ ಇಲಿಯಾಸ್ ಮರ್ಡರ್ ಪ್ರಕರಣದ ಆರೋಪಿ ಸಮೀರ್ ಕೊಲೆ‌ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗಿದೆ. ಉಮರ್ ಫಾರೂಕ್ ಟಾರ್ಗೆಟ್ ಗ್ರೂಪ್ ಇಲಿಯಾಸ್‌ನ ಅಳಿಯ.

vaPolice open fire on rowdy sheeter Umer in Mangaluru

ಉಮರ್ ಫಾರೂಕ್, ಸುರ್ಮಾ ಇಮ್ರಾನ್ ಹಾಗೂ ಇತರರೊಂದಿಗೆ ಸೇರಿ ಸಮೀರ್ ಕೊಲೆಗೆ ಸ್ಕೆಚ್ ಹಾಕಿದ್ದರು ಎಂದು ಹೇಳಲಾಗಿದೆ. ಅದಲ್ಲದೇ ನಗರದಲ್ಲಿ ನಡೆದ ಹಲವಾರು ಕೊಲೆ,ಕೊಲೆ ಬೆದರಿಕೆ , ಹಫ್ತಾ ವಸೂಲಿ ಕೃತ್ಯಗಳಲ್ಲಿ ಈತ ಭಾಗಿಯಾಗಿದ್ದ ಎಂದು ಪೊಲೀಸ್ ಮೂಲಗಳ ತಿಳಿಸಿವೆ .

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+