ಮಂಗಳೂರು : ಬಜ್ಪೆಯಲ್ಲಿ 8 ಪೆಟ್ರೋಲ್ ಬಾಂಬ್ ಪತ್ತೆ
ಮಂಗಳೂರು, ಮಾರ್ಚ್ 31 : ಮಂಗಳೂರಿನಲ್ಲಿ 8 ಪೆಟ್ರೋಲ್ ಬಾಂಬ್, 2 ತಲವಾರ್ ಪತ್ತೆಯಾಗಿವೆ. ಬಜ್ಪೆ ಪೊಲೀಸರು ಸ್ಥಳಕ್ಕೆ ತೆರಳಿ ಅವುಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಮುರುಗನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾ.30ರ ಸೋಮವಾರ ರಾತ್ರಿ ಗಂಜಿಮಠದಲ್ಲಿರುವ ಟೆಲಿಫೋನ್ ಕಚೇರಿ ಕಾಪೌಂಡ್‌ನಲ್ಲಿ ಚೀಲದಲ್ಲಿ ತುಂಬಿಟ್ಟಿದ್ದ 8 ಪೆಟ್ರೋಲ್ ಬಾಂಬ್, 2 ತಲವಾರ್, ಬೆಂಕಿ ಪೊಟ್ಟಣ ಪತ್ತೆಯಾಗಿದೆ. ಇದನ್ನು ನೋಡಿದ ಸ್ಥಳೀಯರು ಬಜ್ಪೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. [ಮಂಗಳೂರು : ಪಾಲಿಕೆ ಬಜೆಟ್ ಮುಖ್ಯಾಂಶಗಳು]
ಟೆಲಿಫೋನ್ ಕಚೇರಿ ಕಾಪೌಂಡ್‌ನಲ್ಲಿ ವಾಸಿಸುವವರು ಸೋಮವಾರ ರಾತ್ರಿ ಕಸವನ್ನು ಬಿಸಾಡಲು ಆಗಮಿಸುತ್ತಿದ್ದಾಗ ಪೊದೆಯಲ್ಲಿ ಚೀಲವನ್ನು ನೋಡಿದ್ದಾರೆ. ಅದನ್ನು ತೆರದು ನೋಡಿದಾಗ ಬಾಂಬ್ ಮತ್ತು ತಲವಾರ್ ಪತ್ತೆಯಾಗಿದೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. [ಮಂಗಳೂರು : ಕಡಿಮೆ ಸಂಬಳ ಕೊಟ್ಟರೆಂದು ಚರ್ಚ್‌ಗೆ ಕಲ್ಲೆಸದ]

ಬಜ್ಪೆ ಪೊಲೀಸರು ಸ್ಥಳಕ್ಕೆ ತೆರಳಿ ಬಾಂಬ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇವುಗಳು ಯಾರಿಗೆ ಸೇರಿದ್ದು? ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಗಲಭೆ ನಡೆಸಲು ಸಂಚು ರೂಪಿಸಿ ಇವುಗಳನ್ನು ತಂದಿರಬಹುದು ಎಂದು ಪೊಲೀಸರು ಶಂಕಿಸಿದ್ದು, ತನಿಖೆ ಮುಂದುವರೆದಿದೆ.













Click it and Unblock the Notifications