ಪಾಟ್ನಾ ಸ್ಫೋಟದ ಆರೋಪಿಗಳು ಬಿಹಾರಕ್ಕೆ

ಮಂಗಳೂರು, ನ. 13 : ಪಾಟ್ನಾ ಸರಣಿ ಬಾಂಬ್ ಸ್ಫೋಟದ ಆರೋಪ ಎದುರಿಸುತ್ತಿರುವ ಮಂಗಳೂರು ಮೂಲದ ಜುಬೇರ್ ಮತ್ತು ಆಯಿಷಾ ದಂಪತಿಗಳನ್ನು ಬಿಹಾರ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದಿದ್ದಾರೆ. ಆಯಿಷಾ ಪತಿ ಜುಬೇರ್ ಬ್ಯಾಂಕ್ ಖಾತೆಯಲ್ಲಿ 5 ಕೋಟಿ ರೂ. ನಗದು ಇರುವ ವಿಚಾರ ಬೆಳಕಿಗೆ ಬಂದಿದೆ.

ಬುಧವಾರ ಆಯಿಷಾಳನ್ನು ಪೊಲೀಸರು ಮಂಗಳೂರಿನ 3ನೇ ಜೆಎಮ್‌ಎಫ್ಸಿ ಕೋರ್ಟ್ ಗೆ ಹಾಜರು ಪಡಿಸಿದರು. ನಂತರ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಬಿಹಾರ ಪೊಲೀಸರು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಕೋರ್ಟ್, ಆಯಿಷಾ ದಂಪತಿಗಳನ್ನು ಬಿಹಾರ ಪೊಲೀಸರ ವಶಕ್ಕೆ ನೀಡಿದೆ. ಈ ನಡುವೆ ಆಯಿಷಾ ತನ್ನ ಕುಟುಂಬವದರೊಂದಿಗೆ ಸಂಪರ್ಕ ಕಡಿದು ಕೊಂಡಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ.

Ayisha

ಮಂಗಳವಾರ ರಾತ್ರಿಯಿಂದ ಆಯಿಷಾಳ ವಿಚಾರಣೆ ನಡೆಸಿದ ಮಂಗಳೂರು ಪೊಲೀಸರು, ಅವರಿಂದ ವಿವಿಧ ಬ್ಯಾಂಕ್‌ಗಳ 7 ಪಾಸ್‌ಬುಕ್, 6 ಎಟಿಎಂ ಕಾರ್ಡ್, 10 ಮೊಬೈಲ್ ಹಾಗೂ 10 ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆಯಿಷಾ ಅವರ ಬ್ಯಾಂಕ್ ಖಾತೆಗೆ ಪಾಕಿಸ್ತಾನದಿಂದ ಪ್ರತಿಬಾರಿ ಲಕ್ಷಾಂತರ ರೂ ಹಣ ವರ್ಗಾವಣೆಗೆ ಆಗಿರುವ ಕುರಿತು ಅವರ ಮೊಬೈಲ್‌ ಗೆ ಸಂದೇಶಗಳು ಬಂದಿರುವುದು ತನಿಖೆ ವೇಳೆ ತಿಳಿದು ಬಂದಿದೆ.

ಆಯಿಷಾ ಅವರ ಮಂಗಳೂರಿನ ಹಂಪನಕಟ್ಟೆ ಐಸಿಐಸಿಐ ಬ್ಯಾಂಕ್‌ನಲ್ಲಿ 2 ಕೋಟಿಗೂ ಅಧಿಕ ವ್ಯವಹಾರ ನಡೆದಿದೆ. ಇನ್ನು ಐಸಿಐಸಿಐ ಬ್ಯಾಂಕ್‌ನಲ್ಲಿ ಆಯಿಷಾ ಪತಿ ಹೆಸರಿನಲ್ಲಿದ್ದ ಅಕೌಂಟ್‌ನಲ್ಲಿ 5 ಕೋಟಿ ರುಪಾಯಿ ನಗದು ಪತ್ತೆಯಾಗಿದೆ. ಆಯಿಷಾ ಅಕೌಂಟ್‌ಗೆ ಹಣ ಬಂದ ತಕ್ಷಣ, ಬಿಹಾರ, ದೆಹಲಿ, ಪಾಟ್ನಾ, ಗುಜರಾತ್ ಹಾಗೂ ಕಟಕ್ ಎಟಿಎಂಗಳಲ್ಲಿ ಅದು ಡ್ರಾ ಆಗಿರುವ ಬಗ್ಗೆಯೂ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

ಆಯಿಷಾ ತನ್ನ ಬ್ಯಾಂಕ್ ಖಾತೆ ತೆರೆಯಲು ತಪ್ಪು ವಿಳಾಸ ನೀಡಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಆಯಿಷಾಗೆ ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದರು. ಆದರೆ ಒಮದು ವರ್ಷದ ಹಿಂದೆ ಪಂಜಿಮೊಗೇರಲ್ಲಿ 20 ಲಕ್ಷಕ್ಕೆ ಮನೆಯೊಂದನ್ನು ಖರೀದಿಸಿದ್ದಾರೆ. ಪಾಕ್ ನಿಂದ ಬರುತ್ತಿದ್ದ ಹಣದಲ್ಲಿ ಆಯಿಷಾಗೆ ಶೇ 10ರಷ್ಟು ದೊರೆಯುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಓಡಿ ಹೋಗಿ ವಿವಾಹವಾಗಿದ್ದರು : ಮೂಲತಃ ಕೊಡಗು ಜಿಲ್ಲೆ ವಿರಾಜಪೇಟೆಯವರಾದ ಆಯಿಷಾ ಮೂಲ ಹೆಸರು ಪುತ್ತೋಳಿ. ಕಾವೇರಮ್ಮ ಅವರ 8 ಮಕ್ಕಳ ಪೈಕಿ ಪುತ್ತೋಳಿ ಅಲಿಯಾಸ್ ಆಯೇಷಾ ಕೊನೆಯವರು. ಮಗಳ ಬಂಧನದ ಕುರಿತು ಪ್ರತಿಕ್ರಿಯೆ ನೀಡಿರುವ ಕಾವೇರಮ್ಮ ನಮ್ಮ ಮಗಳಿಗೆ ನಾವು ಮದುವೆ ಮಾಡಿಲ್ಲ. ಅವಳು ಜುಬಿ ಎಂಬ ಯುವಕನೊಂದಿಗೆ ಓಡಿ ಹೋಗಿ ವಿವಾಹವಾಗಿದ್ದಾಳೆ ಎಂದು ಹೇಳಿದ್ದಾರೆ.

ಆಯಿಷಾ ಬಂಧನದ ಕುರಿತು ನಮಗೆ ಯಾವುದೇ ಮಾಹಿತಿ ಇಲ್ಲ. ಅವಳು ಮತ್ತು ಅವಳ ಗಂಡ ನಮ್ಮೊಂದಿಗೆ ಸಂಪರ್ಕದಲಿಲ್ಲ. ಮಂಗಳೂರಿನಲ್ಲಿ ನೆಲೆಸಿದ್ದಾರೆ ಎಂಬ ಬಗ್ಗೆ ಮಾತ್ರ ಮಾಹಿತಿ ಇತ್ತು ಎಂದು ಆಯಿಷಾ ಸಹೋದರ ಮೋಟಪ್ಪ ಹೇಳಿದ್ದಾರೆ. ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದು, ತನಿಖೆಯ ನಂತರ ಆಯಿಷಾ ಅವರ ಪಾತ್ರ ಪಾಟ್ನಾ ಸರಣಿ ಸ್ಫೋಟದಲ್ಲಿ ಏನು? ಎಂಬುದು ತಿಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+