ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಳಿನ್ ಖಾಸಗಿ ಮಾಹಿತಿ ಸೋರಿಕೆ, ಏರ್ ಟೆಲ್ ಗೆ ನೋಟಿಸ್

By Mahesh
|
Google Oneindia Kannada News

ಮಂಗಳೂರು, ಏ.22: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರ ಖಾಸಗಿ ದೂರವಾಣಿ ಕರೆಗಳ ವಿವರಗಳನ್ನು ಸೋರಿಕೆ ಮಾಡಿರುವ ಭಾರ್ತಿ ಏರ್ ಟೆಲ್ ಸಂಸ್ಥೆಗೆ ಬಂದರು ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ತನ್ನ ಖಾಸಗಿ ಮೊಬೈಲ್ ನಂಬರ್ ‌ನಿಂದ ಮಾಡಿದ ಕರೆಯ ಮಾಹಿತಿ ಬಹಿರಂಗಗೊಂಡ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಬಂದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ವಿವರ ಕೋರಿ ಬಂದರು ಠಾಣೆ ಪೊಲೀಸರು ಭಾರ್ತಿ ಏರ್ ‌ಟೆಲ್ ಕಂಪೆನಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ತನ್ನ ಖಾಸಗಿ ಮೊಬೈಲ್ ನಂಬರ್ ‌ನಿಂದ ಮಾಡಿದ ಕರೆಯ ಮಾಹಿತಿ ಸಂಗ್ರಹಿಸಿ ಪಕ್ಷೇತರ ಅಭ್ಯರ್ಥಿ ಸುದತ್ತ ಜೈನ್ ಹಾಗೂ ಕ್ರಿಮಿನಲ್ ವಕೀಲರೊಬ್ಬರು ಚುನಾವಣೆ ಸಮಯದಲ್ಲಿ ಅಪಪ್ರಚಾರಕ್ಕೆ ಬಳಸಿದ್ದಾರೆ ಎಂದು ಸಂಸದ ನಳಿನ್ ‌ಕುಮಾರ್ ಅವರು ಇವರಿಬ್ಬರ ಮೇಲೆ ಕಳೆದ ವಾರ ದೂರು ದಾಖಲಿಸಿದ್ದರು.

Mangalore: Notice Served on Airtel over Leakage of Details of Nalin kumar Kateel's Personal Calls

ಸಂಸದರ ವೈಯಕ್ತಿಕ ದೂರವಾಣಿ ಕರೆಯ ಮಾಹಿತಿಯನ್ನು ಅನ್ಯ ವ್ಯಕ್ತಿಗಳಿಗೆ ನೀಡಿದ್ದು ಹೇಗೆ? ಏಕೆ? ಎಂಬ ಬಗ್ಗೆ ಬಂದರ್ ಪೊಲೀಸರು ಬಾರ್ತಿ ಏರ್ ‌ಟೆಲ್ ಕಂಪೆನಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ವಿಷಯದಲ್ಲಿ ಹೆಚ್ಚಿನ ದಾಖಲೆಗಳಿದ್ದರೆ ಒದಗಿಸುವಂತೆ ಸಂಸದರಿಗೂ ನೋಟಿಸ್ ನೀಡಲಾಗಿದೆ.

ಜೈನ್ ಏನು ಹೇಳುತ್ತಾರೆ?: ಭಾರ್ತಿ ಏರ್ ಟೆಲ್ ಸಂಸ್ಥೆಯ ಹುಡುಗರಿಂದ ನಳಿನ್ ಕುಮಾರ್ ಕಟೀಲು ಅವರ ಕಾಲ್ ಡೀಟೈಲ್ಸ್ ಸಿಕ್ಕಿದ್ದು ನಿಜ. ಆದರೆ, ಇದು ಬಿಜೆಪಿ, ಸಂಘಪರಿವಾರದಲ್ಲಿರುವ ನಳಿನ್ ವಿರೋಧಿ ಬಣದವರ ಕೃತ್ಯ ಎಂದು ಸುದತ್ತ ಜೈನ್ ಹೇಳಿದ್ದಾರೆ. ನಳಿನ್ ಕುಮಾರ್ ಅವರು ಅದ್ಯಾರ್ ಮೂಲದ ಬಿಲ್ಲವ ಹುಡುಗಿಯೊಬ್ಬಳಿಗೆ ಕಳೆದ ಮೂರು ವರ್ಷಗಳಲ್ಲಿ ಸುಮಾರು 3,642 ಕರೆಗಳನ್ನು ಮಾಡಿದ್ದಾರೆ ಎಂದು ತಿಳಿದು ಬಂದಿತ್ತು.

ಇದು ನಳಿನ್ ಅವರ ಖಾಸಗಿ ವಿಷಯ, ಭಾರ್ತಿ ಏರ್ ಟೆಲ್ ನಲ್ಲೂ ಸಂಘ ಪರಿವಾರದ ಹಿತೈಷಿಗಳಿದ್ದಾರೆ ಇವರಿಂದಲೇ ನಳಿನ್ ಅವರ ದೂರವಾಣಿ ಕರೆ ದಾಖಲೆ ಬಹಿರಂಗವಾಗಿದೆ ಮಾಹಿತಿ ಸೋರಿಕೆ ಬಗ್ಗೆ ತನಿಖೆ ನಡೆಯಲಿ ಎಂದು ಜೈನ್ ಹೇಳಿದ್ದಾರೆ.

English summary
Mangalore: Notice Served on Airtel over Leakage of Details of Nalin kumar Kateel's Personal Calls. Kateel is said to have filed a complaint against Jain and a criminal lawyer in the Bunder police station for gathering information about his phone calls, releasing it to the media and used it as propaganda
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X