ಮಂಗಳೂರಿಗೆ ನೂತನ ಪೊಲೀಸ್ ಕಮಿಷನರ್‌ ನೇಮಕ, ಕುಲದೀಪ್ ಕುಮಾರ್ ಆರ್.ಜೈನ್ ವರ್ಗಾವಣೆ

ಮಂಗಳೂರು, ಸೆಪ್ಟೆಂಬರ್‌, 05: ಕಳೆದ ಐದು ತಿಂಗಳಿನಿಂದ ಡ್ರಗ್ಸ್ ದಂಧೆಕೋರರಿಗೆ ಬಿಸಿ ಮುಟ್ಟಿಸಿದ್ದ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್. ಜೈನ್ ಅವರು ವರ್ಗಾವಣೆಗೊಂಡಿದ್ದಾರೆ. ಇದೀಗ 2008ರ ಬ್ಯಾಚ್‌ನ ಅನುಪಮ್ ಅಗರ್ ವಾಲ್ ಅವರನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ನೇಮಿಸಲಾಗಿದೆ.

ಕುಲದೀಪ್ ಕುಮಾರ್ ಆರ್. ಜೈನ್ ಅವರಿಗೆ‌ ಇನ್ನೂ ಯಾವುದೇ ಹುದ್ದೆಯನ್ನು ತೋರಿಸಿಲ್ಲ. ಕಳೆದ ಐದು ತಿಂಗಳ ಅವಧಿಯಲ್ಲಿ ಕುಲದೀಪ್ ಕುಮಾರ್ ಆರ್. ಜೈನ್ ಅವರು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಡ್ರಗ್ಸ್, ಗಾಂಜಾ, ಎಂಡಿಎಂಎ ಮಾದಕ ದ್ರವ್ಯ ದಂಗೆಕೋರರನ್ನು ಮಟ್ಟಹಾಕಿ ಹಲವರನ್ನು ಕಂಬಿ ಹಿಂದೆ ಕಳುಹಿಸಿದ್ದರು. ಕೋಟ್ಯಂತರ ಮೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದರು‌‌.

New Police Commissioner appointed for Mangaluru

ಅದೇ ರೀತಿ ಸಾರಿಗೆ ನಿಯಮ ಮೀರುವವರ ವಿರುದ್ಧವೂ ಚಾಟಿ ಬೀಸಿ ಸಾಕಷ್ಟು ದಂಡ ವಿಧಿಸಿದ್ದರು‌. ಜೊತೆಗೆ ಮಟ್ಕಾ ದಂಧೆ, ಸೈಬರ್ ಕ್ರೈಮ್ ವಿರುದ್ಧವೂ ಕ್ರಮ ಕೈಗೊಂಡಿದ್ದರು. ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಬಲಿಯಾಗದಂತೆ ಡ್ರಗ್ಸ್ ಜಾಗೃತಿ ಮೂಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಮಂಗಳೂರು ನಾಗರಿಕರ ಪಾಲಿಗೆ ಯಮದೂತನಂತೆ ಕಾಡಿದ್ದ ಖಾಸಗಿ ಬಸ್‌ಗಳನ್ನು ಹತೋಟಿಗೆ ತರುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಅಲ್ಲದೆ ಯಾವುದೇ ಪ್ರಕರಣವನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ 24 ಗಂಟೆಯೊಳಗೆ ಬೇಧಿಸಿದ ದಕ್ಷ ಅಧಿಕಾರಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+