ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜಯ ಸಂಕೇಶ್ವರ್ ಹೇಳಿಕೆ ಬರೀ ಬೊಗಳೆ; ನರೇಂದ್ರ ನಾಯಕ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 28; ಮೂಗಿಗೆ ಎರಡು ಹನಿ ಲಿಂಬೆ ರಸ ಹಾಕಿದರೆ ದೇಹದಲ್ಲಿರುವ ಆಕ್ಸಿಜನ್ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಉದ್ಯಮಿ, ವಿಆರ್‌ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ವಿಜಯ ಸಂಕೇಶ್ವರ ಹೇಳಿಕೆ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದೆ.

ಕೆಲವು ಮಂದಿ ವಿಜಯ ಸಂಕೇಶ್ವರರ ಹೇಳಿಕೆಗೆ ಸರಿ ಅಂತಾ ಹೇಳಿದರೆ ಇನ್ನೂ ಕೆಲವರು ಇದು ಮೂರ್ಖತನದ ಪರಮಾವಧಿ ಅಂತಾ ಜರಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿರುವ ಹೇಳಿಕೆಗೆ ಮಂಗಳೂರಿನ ವಿಚಾರವಾದಿ ಚಿಂತಕ ಪ್ರೊ. ನರೇಂದ್ರ ನಾಯಕ್ ವಿರೋಧ ವ್ಯಕ್ತಪಡಿಸಿದ್ದಾರೆ.

"ಲಿಂಬೆ ರಸವನ್ನು ಮೂಗಿಗೆ ಹಾಕಿದರೆ ಆಕ್ಸಿಜನ್ ಸಮಸ್ಯೆ ನಿವಾರಣೆ ಆಗುತ್ತದೆ ಅನ್ನೋದು ತಪ್ಪು ಮಾಹಿತಿ. ಮೂಗಿನಲ್ಲಿ ಲಿಂಬೆ ರಸ ಹಾಕಿದರೆ ಕಫ ಹೋಗಿ ಉಸಿರಾಟ ಸರಾಗವಾಗುತ್ತದೆ ಅನ್ನೋದು ಮೂರ್ಖತನದ ಪರಮಾವಧಿಯಾಗಿದೆ‌. ಲಿಂಬೆ ರಸ ಹಾಕೋದು ಮೂಗಿಗೆ. ಮೂಗಿನಿಂದ ಬರೋದು ಸಿಂಬಳ. ಕಫ ಬರೋದು ಶ್ವಾಸಕೋಶದಿಂದ. ಹಾಗಿರುವ ಇದು ಯಾವ ರೀತಿ ಪರಿಣಾಮಕಾರಿಯಾಗುತ್ತದೆ?" ಎಂದು ಪ್ರಶ್ನಿಸಿದ್ದಾರೆ.

ನಿಂಬೆ ಹಣ್ಣು ಮಂತ್ರಿಸಿ 'ಕೊರೊನಾ ಗೋ' ಎಂದ ಮೈಸೂರಿನ ಕಲಾವಿದನಿಂಬೆ ಹಣ್ಣು ಮಂತ್ರಿಸಿ 'ಕೊರೊನಾ ಗೋ' ಎಂದ ಮೈಸೂರಿನ ಕಲಾವಿದ

Narendra Nayak Opposes Vijay Sankeshwar Statement

"ತುಂಬಾ ಅಸಿಡಿಕ್ ಆಗಿರುವ ಲಿಂಬೆಯನ್ನು ಮೂಗಿನ ಒಳಗೆ ಹಾಕಿದರೆ ಆಗುವ ಪರಿಣಾಮದ ಬಗ್ಗೆ ತಜ್ಞರೇ ಉತ್ತರಿಸಬೇಕಾಗುತ್ತದೆ. ಹೊರಗಿನ ಅಸ್ವಾಭಾವಿಕ ರಸವನ್ನು ಮೂಗಿಗೆ ಹಾಕಿದರೆ ಆರೋಗ್ಯಕ್ಕೆ ತುಂಬಾ ಅಪಾಯಕಾರಿಯಾಗಲಿದೆ" ಅಂತಾ ನರೇಂದ್ರ ನಾಯಕ್ ಅಭಿಪ್ರಾಯ ಪಟ್ಟಿದ್ದಾರೆ‌‌.

ಮಂಗಳೂರು; ಕೋವಿಡ್‌ಗೆ ಆರು ತಿಂಗಳ ಗರ್ಭಿಣಿ ವೈದ್ಯೆ ಬಲಿ ಮಂಗಳೂರು; ಕೋವಿಡ್‌ಗೆ ಆರು ತಿಂಗಳ ಗರ್ಭಿಣಿ ವೈದ್ಯೆ ಬಲಿ

ವಿಜಯ ಸಂಕೇಶ್ವರ ಅವರು ಲಿಂಬೆ ಕೇವಲ ಆಕ್ಸಿಜನ್ ವೃದ್ಧಿಮಾಡುತ್ತದೆ ಅಂತಾ ಹೇಳಿಕೆ ನೀಡಿದ್ದಾರೆ ಹೊರತು ಕೊರೊನಾವನ್ನು ನಿವಾರಣೆ ಮಾಡುತ್ತದೆ ಅಂತಾ ಹೇಳಿಕೆ ನೀಡೋದಿಲ್ಲ ಅಂತಾ ಸ್ಪಷ್ಟೀಕರಣಗೂ ಉತ್ತರಿಸಿದ ನರೇಂದ್ರ ನಾಯಕ್, "ದೇಶದ ಮೆಡಿಕಲ್ ಕಾಯಿದೆ ಪ್ರಕಾರ ಇರುವ ರೋಗದ ಪಟ್ಟಿಗೆ ಯಾವುದೇ ಜೌಷಧ ಉಪಯೋಗಕಾರಿ ಅಂತಾ ಹೇಳುವ ಹಾಗಿಲ್ಲ. ಹಾಗೆ ಹೇಳಿದರೆ ಅದು ಕ್ರಿಮಿನಲ್ ಅಪರಾಧವಾಗುತ್ತದೆ".

ಮಂಗಳೂರು; ಕರ್ಫ್ಯೂ ನಡುವೆ ಬ್ರಹ್ಮರಥೋತ್ಸವ, ಎಫ್ಐಆರ್‌ಗೆ ಸೂಚನೆ ಮಂಗಳೂರು; ಕರ್ಫ್ಯೂ ನಡುವೆ ಬ್ರಹ್ಮರಥೋತ್ಸವ, ಎಫ್ಐಆರ್‌ಗೆ ಸೂಚನೆ

"ಕಳೆದ ಫ್ರೆಬ್ರವರಿಯಲ್ಲಿ ಕೊರೊನಾವನ್ನೂ ಆ ಪಟ್ಟಿಗೆ ಸೇರಿಸಲಾಗಿದೆ. ಹಾಗಾಗಿ ವಿಜಯ ಸಂಕೇಶ್ವರ ಕೊರೊನಾಗೆ ಔಷಧಿ ಅಂತಾ ಹೇಳಿಲ್ಲ. ಆದರೆ ಮಾತಿನಲ್ಲಿ ಅದನ್ನು ವ್ಯಕ್ತಪಡಿಸಿದ್ದಾರೆ. ಜನರಿಗೆ ರೋಗದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕೇ ಹೊರತು ಇಂತಹ ನಾನ್ ಸೆನ್ಸ್ ಮಾಡಬಾರದು..ಜೀವರಸಾಯನ ಶಾಸ್ತ್ರಜ್ಞ ನಾಗಿ ಹೇಳೋದಾದ್ರೆ ವಿಜಯ ಸಂಕೇಶ್ವರರ ಹೇಳಿಕೆ ಅದು ಬರಿ ಬೊಗಳೆ" ಅಂತಾ ನರೇಂದ್ರ ನಾಯಕ್ ಹೇಳಿದ್ದಾರೆ.

English summary
Rationalist, Sceptic Narendra Nayak opposed for VRL group chairman Vijay Sankeshwar statement of 2 drops of lemon in nose can prevent Covid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X