ಕೆಎಸ್ಆರ್‌ಟಿಸಿಗೆ ಇಂಧನ ಪೂರೈಕೆ ಗುತ್ತಿಗೆ ಪಡೆದ ಎಂಆರ್‌ಪಿಎಲ್

ಬೆಂಗಳೂರು, ಸೆಪ್ಟೆಂಬರ್ 08: ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿಗೆ ಇನ್ನು ಮುಂದೆ ಎಂಆರ್‌ಪಿಎಲ್ ಉತ್ಪಾದನೆ ಮಾಡುವ ಡೀಸೆಲ್ ಪೂರೈಕೆಯಾಗಲಿದೆ. ಮೊದಲ ಹಂತದ ಡೀಸೆಲ್ ಈಗಾಗಲೇ ಪೂರೈಕೆಯಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಇಂಧನ ಪೂರೈಕೆಗಾಗಿ ಎಚ್‌ಪಿಸಿಎಲ್, ಎಂಆರ್‌ಪಿಎಲ್‌ನೊಂದಿಗೆ ಒಪ್ಫಂದವಾಗಿದೆ. ಆಗಸ್ಟ್ 29ರಿಂದಲೇ ಈ ಒಪ್ಪಂದ ಜಾರಿಗೆ ಬಂದಿದೆ.

ಎಂಆರ್‌ಪಿಎಲ್ ಮಾರುಕಟ್ಟೆ ವಿಭಾಗದ ಜಿಜಿಎಂ ಸತ್ಯನಾರಾಯಣ ಈ ಕುರಿತು ಮಾಹಿತಿ ನೀಡಿದ್ದಾರೆ. "ಈ ಒಡಂಬಡಿಕೆ ಅನ್ವಯ ನೇರ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಕಳೆದ ವರ್ಷಕ್ಕಿಂತ 20 ಪಟ್ಟು ಹೆಚ್ಚಿನ ಡೀಸೆಲ್ ಅನ್ನು ಈ ವರ್ಷದಲ್ಲಿ ಮಾರಾಟ ಮಾಡಲು ಸಾಧ್ಯವಾಗಲಿದೆ" ಎಂದು ಹೇಳಿದ್ದಾರೆ.

MRPL To Supply Diesel To KSRTC And BMTC Bus

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ತನ್ನ ಚಿಲ್ಲರೆ ಮಾರಾಟ ಜಾಲವನ್ನು ಕರ್ನಾಟಕ ಮತ್ತು ಕೇರಳದಲ್ಲಿ ವಿಸ್ತರಣೆ ಮಾಡುತ್ತಿದೆ.

ಅನೇಕ ಚಿಲ್ಲರೆ ಮಾರಾಟ ಮಳಿಗೆಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿಯೇ ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿಗೆ ಇಂಧನ ಪೂರೈಸುವ ಟೆಂಡರ್ ಸಿಕ್ಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+