ಜನರ ಸೇವೆಗೆ ಸಜ್ಜಾಗಿದೆ ಮೂಡಬಿದಿರೆ ಕೋರ್ಟ್ ಹೊಸ ಕಟ್ಟಡ

ಮೂಡಬಿದಿರೆ, ಫೆ.5 : ಮೂಡಬಿದಿರೆಯ ಪಶು ವೈದ್ಯಕೀಯ ಆಸ್ಪತ್ರೆಯ ಪಕ್ಕದಲ್ಲಿ 6.60ಕೋಟಿ ವೆಚ್ಚದಲ್ಲಿ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ರಾಜ್ಯದ ಹೋಬಳಿ ಕೇಂದ್ರಗಳಲ್ಲಿಯೇ ಸುಸಜ್ಜಿತ ಕಟ್ಟಡವನ್ನು ಹೊಂದಿರುವ ಏಕೈಕ ನ್ಯಾಯಾಲಯ ಎನ್ನುವ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.

ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯವನ್ನು ಮೂಡಬಿದರೆ ವಕೀಲ ಸಂಘದ ಸಹಯೋಗದೊಂದಿಗೆ 2004 ಅಕ್ಟೋಬರ್ 14ರಂದು ಉದ್ಘಾಟಿಸಲಾಗಿತ್ತು. ಅಂದಿನಿಂದ ಹತ್ತು ವರ್ಷಗಳ ಕಾಲ ಮಹಾವೀರ ಕಾಲೇಜು ರಸ್ತೆಯ ಬಾಡಿಗೆ ಕಟ್ಟಡದಲ್ಲಿ ನ್ಯಾಯಾಲಯದ ಕಲಾಪ ನಡೆಯುತ್ತಿತ್ತು.[ಸೂಕ್ಷ್ಮ ಪ್ರದೇಶ ಮಂಗಳೂರಿನಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ]

Moodbidri

ನ್ಯಾಯಾಲಕ್ಕೆ ಬರುವ ಜನರಿಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಇರಲಿಲ್ಲ. ಬಿಸಿಲು-ಮಳೆಯಲ್ಲಿ ಕಾಯುವುದು ಅನಿವಾರ್ಯವಾಗಿತ್ತು. ಶೌಚಾಲಯದ ವ್ಯವಸ್ಥೆ ಸರಿಯಲ್ಲದೇ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದರು. ಹೊಸ ಕಟ್ಟಡ ನಿರ್ಮಾಣದಿಂದ ಮೂಲಭೂತ ಸಮಸ್ಯೆಗಳು ದೂರವಾಗಿವೆ. [ಮೂಡಬಿದಿರೆಯ ಜನಪ್ರಿಯ 'ಗಾರ್ಡ್' ಗೆ ಅಂತಿಮ ನಮನ]

ಹಂತ-ಹಂತವಾಗಿ ಅನುದಾನ : ಲೊಕೋಪಯೋಗಿ ಇಲಾಖೆ 2010-11 ಸಾಲಿನಲ್ಲಿ ನ್ಯಾಯಾಂಗ ಇಲಾಖೆಗೆ 4 ಕೋಟಿ ರೂ. ಮಂಜೂರು ಮಾಡಿತ್ತು. ನೆಲ ಅಂತಸ್ತು, ಪ್ರಥಮ ಮಹಡಿ ವಿದ್ಯುತ್ ಸಂಪರ್ಕ ಹಾಗೂ 25 ಲಕ್ಷ ವೆಚ್ಚದ ಪಿಠೋಪಕರಣ ವ್ಯವಸ್ಥೆ ಆಗಿತ್ತು.

2ನೇ ಹಂತವಾಗಿ 2012-13ರಲ್ಲಿ ಮತ್ತೆ 2 ಕೋಟಿ ಅನುದಾನ ಮಂಜೂರಾಗಿದ್ದು, ಎರಡನೇ ಮಹಡಿ, ಆವರಣದ ಗೋಡೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಯಿತು. ಮೂರನೇ ಹಂತವಾಗಿ 2013-14ರಲ್ಲಿ 60 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ನೆಲ ಸಮತಟ್ಟು ಸಹಿತ ಇತರ ಅಭಿವೃದ್ಧಿ ಕೆಲಸವನ್ನು ಮಾಡಲಾಯಿತು.

ಪಶುವೈದ್ಯಕೀಯ ಆಸ್ಪತ್ರೆ ಪಕ್ಕದಲ್ಲಿನ 1.95 ಎಕರೆ ಜಾಗದಲ್ಲಿ 29,052 ಚದರ ಅಡಿ ವಿಸ್ತೀರ್ಣದ ನೆಲ ಅಂತಸ್ತು ಸಹಿತ 2 ಮಹಡಿ ಕಟ್ಟಡ ನಿರ್ಮಾಣಗೊಂಡಿದೆ. ನೆಲ ಅಂತಸ್ತಿನಲ್ಲಿ ಪಾರ್ಕಿಂಗ್‍ ವಿಶಾಲವಾದ ಜಾಗವಿದೆ. ನೆಲ ಅಂತಸ್ತು ಲೋಕ್ ಅದಾಲತ್ ಹಾಲ್, ವಕೀಲರಿಗೆ ಹಾಲ್, ಕಾನ್ಫೆರನ್ಸ್ ಹಾಲ್, ಸ್ಟೋರ್ ರೂಮ್ ಅಡುಗೆ ಕೋಣೆ ಸಹಿತ ಕ್ಯಾಂಟೀನ್, ಮಹಿಳೆಯರು ಹಾಗೂ ಪುರುಷರ ಶೌಚಾಲಯವನ್ನು ಒಳಗೊಂಡಿದೆ.

ಮೊದಲ ಮಹಡಿಯಲ್ಲಿ ನ್ಯಾಯಾಲಯದ ಕಲಾಪ ನಡೆಯುತ್ತದೆ. ಕೋರ್ಟ್‍ನ ಮುಖ್ಯ ಹಾಲ್, ನ್ಯಾಯಾಲದ ಕಚೇರಿ, ನ್ಯಾಯಾಧೀಶರ ಕಚೇರಿ, ರೆಕಾರ್ಡ್ ರೂಮ್, ಮಹಿಳಾ ಹಾಗೂ ಪುರುಷರ ಲಾಕಪ್ ಸಹಿತ ಪೊಲೀಸ್ ರೂಮ್, ವಕೀಲ ಸಂಘದ ಪದಾಧಿಕಾರಿಗಳಿಗೆ ಕೋಣೆಗಳಿವೆ. ಶೀಘ್ರದಲ್ಲೇ ಈ ಕಟ್ಟಡ ಉದ್ಘಾಟನೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+