ಕಾಲಿಯಾ ರಫೀಕ್ ಕೊಲೆ ಪ್ರಕರಣ: ಮೂವರ ಬಂಧನ
ಮಂಗಳೂರು, ಫೆಬ್ರವರಿ 28 : ಕುಖ್ಯಾತ ರೌಡಿ ಕಾಲಿಯಾ ರಫೀಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಮಂಗಳವಾರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾಸರಗೋಡಿನ ನೂರ್ ಅಲಿ, ರಶೀದ್ ಟಿ.ಎಸ್, ಬಂಟ್ವಾಳದ ಹುಸೈನಬ್ಬ ಬಂಧಿತ ಆರೋಪಿಗಳು. ಹತ್ಯೆಗೆ ಬಳಸಿದ ಪಿಸ್ತೂಲ್, ಎರಡು ತಲವಾರು, ಕಾರು ವಶಕ್ಕೆ ಪಡೆದುಕೊಳ್ಳಲಾಗಿದೆ.[ಸಿನಿಮೀಯ ಶೈಲಿಯಲ್ಲಿ ರೌಡಿ ಕಾಲಿಯಾ ರಫೀಕ್ ಕೊಲೆ]

ಆರೋಪಿಗಳು 3 ತಿಂಗಳಲ್ಲಿ 5 ಬಾರಿ ಕಾಲಿಯಾ ರಫೀಕ್ ಹತ್ಯೆಗೆ ಯತ್ನಿಸಿದ್ದರು. ಫೆಬ್ರವರಿ 14 ರಂದು ಉಳ್ಳಾಲ ದ ಕೋಟೆಕಾರು ಎಂಬಲ್ಲಿ ರೌಡಿ ಕಾಲಿಯಾ ರಫೀಕ್ ಹತ್ಯೆ ನಡೆದಿತ್ತು.












Click it and Unblock the Notifications