ರಸ್ತೆ ಮರುನಾಮಕರಣ ವಿರೋಧಿಸಿ ಅಲೋಶಿಯಸ್ ವಿದ್ಯಾರ್ಥಿಗಳ ಪ್ರತಿಭಟನೆ

ಮಂಗಳೂರು : "ಸಂತ ಅಲೋಶಿಯಸ್ ಕಾಲೇಜು ರಸ್ತೆ" ಎಂಬ ಹೆಸರನ್ನು ಬದಲಾಯಿಸುವುದರ ವಿರುದ್ಧ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ಸಾವಿರಾರು ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದರು.

ಸಂತ ಅಲೋಶಿಯಸ್ ಕಾಲೇಜು 137 ವರ್ಷಗಳ ಇತಿಹಾಸವನ್ನು ಹೊಂದಿದೆ. ಇಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ನಾನಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಕೊಡುಗೆಗಳನ್ನು ನೀಡಿದ್ದಾರೆ. ಅಂತಹ ಶಿಕ್ಷಣ ಸಂಸ್ಥೆಗೆ ನೀಡಲಾಗಿರುವ ಗೌರವವನ್ನು ಯಾವುದೇ ಕಾರಣಕ್ಕೂ ಹಿಂಪಡೆಯಬೇಡಿ. ನಗರದ ಬೇರೆ ಯಾವುದೇ ರಸ್ತೆಗೆ ಮುಲ್ಕಿ ಸುಂದರ ರಾಮ ಶೆಟ್ಟಿ ನಾಮಕರಣದ ಬಗ್ಗೆ ನಮಗೆ ಅಭ್ಯಂತರವಿಲ್ಲ ಎಂದು ಪ್ರತಿಭಟನಾ ನಿರತರು ಹೇಳಿದರು.

Mangaluru: Thousands of Aloysius students march in against the renaming of road

ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆಯಿಂದ ಪದವಿ, ಸ್ನಾತಕೋತ್ತರ ಪದವಿ ವರೆಗಿನ ಸುಮಾರು 10 ಸಾವಿರ ವಿದ್ಯಾರ್ಥಿಗಳು ಸಂಸ್ಥೆಯ ಮೈದಾನದಲ್ಲಿ ಜಮಾಯಿಸಿ ಅಲೋಶಿಯಸ್ ರಸ್ತೆಗೆ 'ಮುಲ್ಕಿ ಸುಂದರ ರಾಮ ಶೆಟ್ಟಿ' ಎಂದು ಮರು ನಾಮಕರಣ ಮಾಡುವ ಪ್ರಸ್ತಾಪದ ವಿರುದ್ಧ ಧ್ವನಿಯೆತ್ತಿದರು.

Mangaluru: Thousands of Aloysius students march in against the renaming of road

ಬಾವುಟಗುಡ್ಡೆಯಿಂದ ಅಂಬೇಡ್ಕರ್ ವೃತ್ತದ ಮೂಲಕ ಡಾನ್‌ಬಾಸ್ಕೊ ರಸ್ತೆಯಲ್ಲಿ ಸಾಗಿ ಲೈಟ್ ಹೌಸ್ ರಸ್ತೆಯಾಗಿ ಮತ್ತೆ ಕಾಲೇಜು ಕ್ಯಾಂಪಸ್ ವರೆಗೆ ಶಾಂತ ರೀತಿಯಲ್ಲಿ ಜಾಥಾ ನಡೆಸಿದರು.

Mangaluru: Thousands of Aloysius students march in against the renaming of road

"ಇದಕ್ಕೆ ಸಂತ ಅಲೋಶಿಯಸ್ ಕಾಲೇಜು ರಸ್ತೆ ಎಂದು ಈಗಾಗಲೇ ಹೆಸರಿಸಲಾಗಿದೆ. ಆದರೆ, ಮಂಗಳೂರು ನಗರ ಪಾಲಿಕೆ (ಮನಪಾ) ಇಲ್ಲಿಗೆ ಬೇರೊಂದು ಹೆಸರಿಡಲು ಪ್ರಯತ್ನಿಸುತ್ತಿದೆ. ಸಂತ ಅಲೋಶಿಯಸ್ ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿ ಎಂದು ಪುನರ್ ನಾಮಕರಣ ಮಾಡುವ ಮನಪಾ ಪ್ರಯತ್ನ ಅನಪೇಕ್ಷಿತ. ಪಾಲಿಕೆ ನಮಗೆ ಮಾಹಿತಿ ನೀಡದೆ, ಕೆಲವೇ ಜನರ ಸೊತ್ತಿನಂತೆ ಹೆಸರು ಬದಲಿಸಲು ಪ್ರಯತ್ನಿಸುತ್ತಿದೆ," ಎಂದು ಸೈಂಟ್ ಅಲೋಶಿಯಸ್ ಕಾಲೇಜಿನ ರೆಜಿಸ್ಟಾರ್ ರೆ. ಫಾ. ಡಿಯೋನಿಸಿಸ್ ವಾಝ್ ಮನಪಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+