ಮಂಗಳೂರು ; ವಿದ್ಯಾರ್ಥಿನಿ ನಾಪತ್ತೆಗೆ ತಿರುವು; ಅಣ್ಣನಿಂದ ಹತ್ಯೆ

ಮಂಗಳೂರು, ಅಕ್ಟೋಬರ್ 27 : ಮಂಗಳೂರಿನಲ್ಲಿ ನಾಪತ್ತೆಯಾದ ವಿದ್ಯಾರ್ಥಿನಿ ಶವ ಗುಡ್ಡದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಣ್ಣನೇ ಆಕೆಯನ್ನು ಹತ್ಯೆ ಮಾಡಿ ಶವವನ್ನು ಮನೆಯ ಹಿಂಬದಿಯಲ್ಲಿರುವ ಗುಡ್ಡದಲ್ಲಿ ಎಸೆದಿದ್ದ.

ಪ್ರಥಮ ಪಿಯುಸಿ ವಿದ್ಯಾರ್ಥಿನಿ ಫಿಯೋನಾ ಸ್ವೀಡಲ್ ಕುಟಿನ್ಹಾ (16) ನಾಪತ್ತೆಯಾಗಿದ್ದ ವಿದ್ಯಾರ್ಥಿನಿ. ಸಂತ ಆಗ್ನೆಸ್ ಕಾಲೇಜಿನ ವಿದ್ಯಾರ್ಥಿನಿ 18 ದಿನಗಳ ಹಿಂದೆ ನಾಪತ್ತೆಯಾಗಿದ್ದಳು. ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಸ್ವೀಡಲ್ ಕುಟಿನ್ಹಾ ಸಹೋದರ ಸ್ಯಾಮ್ಸನ್ (18) ಹತ್ಯೆ ನಡೆಸಿರುವ ಆರೋಪಿ. ಸುತ್ತಿಗೆಯಿಂದ ಹೊಡೆದು ತಂಗಿ ಕೊಲೆ ಮಾಡಿದ್ದ ಸ್ಯಾಮ್ಸ್‌ನ್ ಮುಡಿಪು ಗುಡ್ಡದಲ್ಲಿ ಹೆಣವನ್ನು ಎಸೆದಿದ್ದ. ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅಸ್ಥಿಪಂಜರ ಪತ್ತೆಯಾಗಿದೆ.

Mangaluru Student Murder Case Brother Arrested

ಘಟನೆ ವಿವರ: ಇಂಜಿನಿಯರಿಂಗ್ ವಿದ್ಯಾರ್ಥಿ ಸ್ಯಾಮ್ಸನ್ ಅಮಲು ಪದಾರ್ಥಗಳ ದಾಸನಾಗಿದ್ದ. ಅಕ್ಟೋಬರ್ 8ರಂದು ದಸರಾ ರಜೆ ಹಿನ್ನಲೆಯಲ್ಲಿ ಸ್ವೀಡಲ್ ಕುಟಿನ್ಹಾ ಮನೆಯಲ್ಲಿದ್ದಳು. ಮಕ್ಕಳಿಗೆ ತಿಂಡಿ ತರಲೆಂದು ತಂದೆ ಹೊರಗೆ ಹೋದಾಗ ತಂಗಿ ಜೊತೆ ಜಗಳವಾಡಿದ್ದ. ಸುತ್ತಿಗೆಯಿಂದ ಹೊಡೆದು ಆಕೆಯ ಹತ್ಯೆ ಮಾಡಿದ್ದ. ಭಯದಿಂದ ಶವವನ್ನು ಗುಡ್ಡಕ್ಕೆ ಸಾಗಿಸಿದ್ದ.

ತಂದೆ ಬಂದು ಸ್ವೀಡಲ್ ಕುಟಿನ್ಹಾ ಬಗ್ಗೆ ಕೇಳಿದಾಗ ಮಂಗಳೂರಿಗೆ ಹೋಗಿದ್ದಾಳೆ ಎಂದು ಸ್ಯಾಮ್ಸನ್ ಹೇಳಿದ್ದ. ಎಷ್ಟು ಹೊತ್ತಾದರೂ ಆಕೆ ವಾಪಸ್ ಬರದ ಕಾರಣ ಪೋಷಕರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಎರಡು ವಾರಗಳಾದರೂ ಸ್ವೀಡಲ್ ಕುಟಿನ್ಹಾ ಪತ್ತೆಯಾಗದ ಕಾರಣ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಗಿತ್ತು. ಆಯುಕ್ತರು ಪ್ರಕರಣದ ತನಿಖೆಯನ್ನು ಸಹಾಯಕ ಪೊಲೀಸ್ ಆಯುಕ್ತರಿಗೆ ವಹಿಸಿದ್ದರು. ಆದರೆ, ಆಕೆಯ ಪತ್ತೆಯಾಗಿರಲಿಲ್ಲ.

ವಿದ್ಯಾರ್ಥಿನಿ ಮೊಬೈಲ್ ಲೋಕೆಷನ್ ಮುಡಿಪುವಿನಲ್ಲಿ ಪತ್ತೆಯಾಗಿತ್ತು. ಕುಟುಂಬದವರನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ವಿಚಾರಣೆ ನಡೆಸಿದ್ದರು. ಶನಿವಾರ ಸಹೋದರ ಸ್ಯಾಮ್ಸನ್ ವಿಚಾರಣೆ ನಡೆಸಿದಾಗ ಸ್ವೀಡಲ್ ಕುಟಿನ್ಹಾ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಶನಿವಾರ ಭಾರಿ ಮಳೆ ಇದ್ದ ಕಾರಣ ಪೊಲೀಸರು ಅಸ್ಥಿ ಪಂಜರವನ್ನು ವಶಕ್ಕೆ ಪಡೆದಿದ್ದಾರೆ. ಭಾನುವಾರ ಆರೋಪಿಯನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಪಂಚನಾಮೆ ನಡೆಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+