ಮಾ.04ರಿಂದ ಸೂಟರ್ ಪೇಟೆ ಶ್ರೀ ಕೋರ್ದಬ್ಬು ವಾರ್ಷಿಕ ನೇಮೋತ್ಸವ
ಮಂಗಳೂರು, ಮಾರ್ಚ್. 02 : ನಗರದ ಸೂಟರ್ ಪೇಟೆಯಲ್ಲಿರುವ ಶ್ರೀ ಕೋರ್ದಬ್ಬು ದೇವಸ್ಥಾನದ ವಾರ್ಷಿಕ ನೇಮೋತ್ಸವ ಮಾರ್ಚ್ 04 ರಿಂದ 7ರವರೆಗೆ ನಡೆಯಲಿದೆ.
ಅತೀ ಪುರಾತನ ಬಬ್ಬುಸ್ವಾಮಿ ಕ್ಷೇತ್ರಗಳಲ್ಲಿ ಒಂದಾಗಿರುವ ಸೂಟರ್ ಪೇಟೆಯ ಶ್ರೀ ಕೋರ್ದಬ್ಬು ದೇವಸ್ಥಾನ ವಿಶಿಷ್ಠ ಭೂತಾರಾಧನೆಯ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ.
ಶ್ರೀ ಕ್ಷೇತ್ರ ಕಳೆದ ವರ್ಷ ಪುನರ್ ನಿರ್ಮಾಣಗೊಂಡು ಬ್ರಹ್ಮಕಲಶೋತ್ಸವದಲ್ಲಿ ಸಂಪನ್ನಗೊಂಡಿದ್ದು ಇದೀಗ ವರ್ಷಾವಧಿ ಉತ್ಸವಕ್ಕೆ ಶ್ರೀ ಕ್ಷೇತ್ರವು ಅಣಿಯಾಗಿದೆ.

ಮಾರ್ಚ್ 3 ರಂದು ವರ್ಷಂಪ್ರತಿ ನಡೆಯುವಂತೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಧರ್ಮದರ್ಶಿ ಭಾಸ್ಕರ ಐತಾಳ್ ರವರ ಪೌರೋಹಿತ್ಯದಲ್ಲಿ ಸಂಜೆ 6ಗಂಟೆಯಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ನೇಮೋತ್ಸವ ವಿವರ:
ಮಾರ್ಚ್ 4- ಬೆಳಿಗ್ಗೆ ಹೋಮ ನಂತರ ಶ್ರೀ ಬಬ್ಬುಸ್ವಾಮಿ, ಪಂಜುರ್ಲಿ, ಗುಳಿಗ ದೈವಗಳ ದರ್ಶನ ಸೇವೆಯೊಂದಿಗೆ ಭಂಡಾರ ಏರುವುದು, ರಾತ್ರಿ ಭಗವಾನ್ ಶ್ರೀ ಬಬ್ಬುಸ್ವಾಮಿ ಹಾಗೂ ತನ್ನಿಮಾನಿಗ ನೇಮೋತ್ಸವ ನಡೆಯಲಿದೆ.
ಮಾರ್ಚ್ 5- ಸಂಜೆ ರಾಹುಗುಳಿಗ ನೇಮ, ರಾತ್ರಿ ಶ್ರೀ ಪಂಜುರ್ಲಿ,ಗುಳಿಗ ನೇಮೋತ್ಸವ ನಡೆಯಲಿದೆ. ಮಾರ್ಚ್ 6- ಮಧ್ಯಾಹ್ನ ಧರ್ಮ ದೈವದ ನೇಮ ,ರಾತ್ರಿ ಸುಬ್ಬಿಗುಳಿಗ ಹಾಗೂ ಸುಬ್ಯಮ್ಮ ನೇಮೋತ್ಸವ ನಡೆಯಲಿದೆ.
ಮಾರ್ಚ್ 7- ಮಧ್ಯಾಹ್ನ ಸಂಕಳೆ ಗುಳಿಗ ನೇಮ, ರಾತ್ರಿ ಶ್ರೀ ಕೊರಗಜ್ಜ ನೇಮ ಹಾಗೂ ಭಂಡಾರ ಇಳಿಯುವುದು. ಈ ವರ್ಷಾವಧಿ ಉತ್ಸವದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ನಾಲ್ಕು ದಿನಗಳ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ದೈವಸ್ಥಾನದ ಗುರಿಕಾರರಾದ ಎಸ್.ರಾಘವೇಂದ್ರ ಅವರು ಮಾಹಿತಿ ನೀಡಿದ್ದಾರೆ.












Click it and Unblock the Notifications