ಎಸ್ಡಿಎಂಐಎಂಡಿಗೆ ಅಂತಾರಾಷ್ಟ್ರೀಯ ಮಾನ್ಯತೆ, ಹೆಗ್ಗಡೆ ಸ್ವೀಕಾರ
ಮಂಗಳೂರು : ಮೈಸೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲೆಪ್ಮೆಂಟ್ ಸಂಸ್ಥೆಯ (ಎಸ್ ಡಿಎಂಐಎಂಡಿ) ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ಇನ್ ಮ್ಯಾನೇಜ್ಮೆಂಟ್ ಕೋರ್ಸ್ ಗೆ ಅಮೆರಿಕದ ಅಕ್ರೆಡಿಟೇಷನ್ ಕೌನ್ಸಿಲ್ ಫಾರ್ ಬಿಸಿನೆಸ್ ಸ್ಕೂಲ್ಸ್ ಅಂಡ್ ಪ್ರೋಗ್ರಾಮ್ಸ್ (ಎಸಿಬಿಎಸ್ ಪಿ) ಅವರಿಂದ ಮಾನ್ಯತೆ ಪ್ರಶಸ್ತಿ ದೊರಕಿದೆ.
ಸೋಮವಾರ ಅಮೆರಿಕಾದ ಲಾಸ್ ಏಂಜಲೀಸ್‌ನ ಅನಹೆಮ್ ನಗರದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ ಡಿ. ವೀರೇಂದ್ರ ಹೆಗ್ಗಡೆ ಅವರು ಸಂಸ್ಥೆಯ ನಿರ್ದೇಶಕ ಡಾ ಎನ್. ಆರ್. ಪರಶುರಾಮನ್ ರೊಂದಿಗೆ, ಚೀಫ್ ಅಕ್ರೆಡಿಟೇಷನ್ ಆಫೀಸರ್ ಡಾ. ಸ್ಟೀವ್ ಪಾರ್ಸ್ಕೆಲ್ ಹಾಗೂ ಬೋರ್ಡ್ ಆಫ್ ಕಮಿಷನರ್ನ್ ನ ಅಧ್ಯಕ್ಷ ಡಾ. ರೇ ಎಲ್ಡ್ರಿಡ್ಜ್ ಅವರಿಂದ ಮಾನ್ಯತೆಯ ಪ್ರಶಸ್ತಿ ಸ್ವೀಕರಿಸಿದರು.

ಯುರೋಪಿಯನ್ ಫೌಂಡೇಶನ್ ಫಾರ್ ಮ್ಯಾನೇಜ್ಮೆಂಟ್ ಡೆವಲೆಪ್ಮೆಂಟ್ (ಇಎಫ್ ಎಂಡಿ) ಮತ್ತು (ಎಸಿಬಿಎಸ್ ಪಿ) ಈ ಎರಡೂ ಮಾನ್ಯತೆಗಳನ್ನು ಭಾರತದಲ್ಲಿ ಇರುವ 'ಬಿ' ಶಾಲೆಗಳ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಎಸ್ ಡಿಎಂಐಎಂಡಿ ಪಾತ್ರವಾಗಿದೆ.












Click it and Unblock the Notifications